ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಈ ಮೂಲವ್ಯಾಧಿ ಅನ್ನೋ ಸಮಸ್ಯೆ ಬಹುತೇಕ ಜನರಲ್ಲಿ ಕಾಡುತ್ತಿರುತ್ತದೆ ಇಂತಹ ಸಮಸ್ಯೆಗೆ ಮನೆಯಲ್ಲೇ ಒಂದಿಷ್ಟು ಸಾಮಗ್ರಿಗಳನ್ನು ಬಳಸಿ ಮನೆಮದ್ದು ತಯಾರಿಸಿಕೊಳ್ಳುವುದು ಹೇಗೆ ಅನ್ನೋದನ್ನ ಈ ಮೂಲಕ ತಿಳಿಯೋಣ.
ಮುಖ್ಯವಾಗಿ ಮೂಲವ್ಯಾಧಿ ಇರುವವರು ಆಹಾರದಲ್ಲಿ ಉತ್ತಮ ಕ್ರಮವನ್ನು ಅನುಸರಿಸಬೇಕು. ಊಟದಲ್ಲಿ ಹೆಚ್ಚಾಗಿ ಮಜ್ಜಿಗೆ ಬಳಸುವುದು ಒಳ್ಳೆಯದು. ಇನ್ನು ಮೂಲವ್ಯಾಧಿ ನೀವಾರಣೆಗೆ ಒಂದಿಷ್ಟು ಸುಲಭ ಮಾರ್ಗಗಳನ್ನು ಈ ಮೂಲಕ ತಿಳಿಯೋಣ ಬನ್ನಿ.
ಮೂಲವ್ಯಾಧಿ ಸಮಸ್ಯೆ ಇರೋರು ಪ್ರತಿದಿನ ಎರಡು ಚಮಚದಷ್ಟು ಮೂಲಂಗಿ ರಸವನ್ನು ಮಜ್ಜಿಗೆಯೊಂದಿಗೆ ಬೆರಸಿ ಸೇವಿಸಬೇಕು. ಇನ್ನು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ೧ ಲೋಟ ಮಜ್ಜಿಗೆಗೆ ಬೆರಸಿ ಕುಡಿಯುವುದು ಪರಿಣಾಮಕಾರಿ.
ಪ್ರತಿನಿತ್ಯ ಎರಡು ಬಾರಿ ಅಳಲೆಕಾಯಿ ಚೂರ್ಣ ಮತ್ತು ಬೆಲ್ಲವನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಮೂಲವ್ಯಾಧಿ ನಿವಾರಣೆಯಾಗುವುದು. ಪ್ರತಿದಿನ ಬೇಗನೆ ಜೀರ್ಣವಾಗುವಂತ ಆಹಾರವನ್ನು ಸೇವಿಸುವುದು ಉತ್ತಮ.
ಮೂಲವ್ಯಾಧಿಯಿಂದ ಗುದ ಭಾಗದಲ್ಲಿ ಹೆಚ್ಚು ಉರಿಯಾಗುತ್ತಿದ್ರೆ ನಾಗ ಕೇಸರಿಯನ್ನು ತುಪ್ಪದೊಂದಿಗೆ ಚನ್ನಾಗಿ ಅರೆದು ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ. ಮೂಲವ್ಯಾಧಿಯಿಂದ ರಕ್ತ ಬಿಳುತ್ತಿದ್ರೆ ಪ್ರತಿದಿನ ಬೆಳಗ್ಗೆ ಬೆಣ್ಣೆಯೊಂದಿಗೆ ಎಳ್ಳನ್ನು ಬೆರಸಿ ೧೫ ರಿಂದ ೨೦ ದಿನಗಳಕಾಲ ಸೇವಿಸಬೇಕು.
ಬಿಲ್ವಪತ್ರೆಯ ಕಷಾಯ ತಯಾರಿಸಿ ಕುಡಿಯುವುದರಿಂದ ಮೂಲವ್ಯಾಧಿಯಲ್ಲಿ ಹೆಚ್ಚು ನೋವು ಇದ್ದಾರೆ ಕಡಿಮೆಯಾಗುತ್ತದೆ. ಇನ್ನು ಬಿಲ್ವದಕಾಯಿಯ ತಿರುಳನ್ನು ಒಣಗಿಸಿ ಚೂರ್ಣ ತಯಾರಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಬೆರಸಿ ತಣ್ಣೀರೊಂದಿಗೆ ಸೇವನೆ ಮಾಡುವುದರಿಂದ ಮೂಲವ್ಯಾಧಿಯಲ್ಲಿ ರಕ್ತ ಬೀಳುವದು ನಿಲ್ಲುತ್ತದೆ.