ಶೀತ ಮತ್ತು ಕೆಮ್ಮು ಮತ್ತು ನೆಗಡಿ ಕೆಲವರಿಗೆ ಒಂದೇ ಬಾರಿ ಉಂಟಾಗುತ್ತದೆ. ಹಾಗೆಯೇ ಕೆಲವರಿಗೆ ಶೀತ ಉಂಟಾಗಿ ಕೆಮ್ಮು ಉಂಟಾಗುತ್ತದೆ. ಹಾಗೆಯೇ ಕೆಲವರಿಗೆ ನೆಗಡಿ ಉಂಟಾಗಿ ಕೆಮ್ಮು ಮತ್ತು ಶೀತ ಉಂಟಾಗುತ್ತದೆ. ಇದಕ್ಕಾಗಿ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿ ಮನೆಮದ್ದುಗಳನ್ನು ಮಾಡಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಆದ್ದರಿಂದ ನಾವು ಇಲ್ಲಿ ಶೀತ ಮತ್ತು ಕೆಮ್ಮು ಮತ್ತು ನೆಗಡಿಗೆ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಇದಕ್ಕೆ ಒಂದು ಚಮಚ ಜೀರಿಗೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ನಾಲ್ಕರಿಂದ ಐದು ಲವಂಗವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಸುಮಾರು ಹತ್ತು ಕಾಳುಮೆಣಸನ್ನು ತೆಗೆದುಕೊಳ್ಳಬೇಕು. ಕಾಳುಮೆಣಸು ಇದು ಕಫವನ್ನು ಕರಗಿಸಲು ಸಹಾಯಕಾರಿ. ಹಾಗೆಯೇ ಹತ್ತರಿಂದ ಹದಿನೈದು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು. ತುಳಸಿ ಎಲೆಯು ಕೆಮ್ಮು, ಶೀತ ಮತ್ತು ನೆಗಡಿಗೆ ದಿವ್ಯೌಷಧವಾಗಿದೆ. ದಿನನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡು ತುಳಸಿ ಎಲೆಯನ್ನು ತಿಂದರೆ ಬಹಳ ಒಳ್ಳೆಯದು.

ಹಾಗೆಯೇ ಹತ್ತರಿಂದ ಹದಿನೈದು ಪುದೀನಾ ಎಲೆಗಳನ್ನು ತೆಗೆದುಕೊಳ್ಳಬೇಕು. ಪುದೀನಾ ಎಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಪಾನಿಪುರಿಗಳಲ್ಲಿ ಬಳಸುತ್ತಾರೆ. ಆದರೆ ಇದನ್ನು ತಂಬುಳಿಗಳನ್ನು ಮಾಡಿ ತಿಂದರೂ ಬಹಳ ಒಳ್ಳೆಯದು.  ಹಾಗೆಯೇ ಅರ್ಧ ನಾಟಿ ವೀಲ್ಯೆದೆಲೆಯನ್ನು ತೆಗೆದುಕೊಳ್ಳಬೇಕು. ಇದು ಸಹ ನೆಗಡಿಗೆ ಬಹಳ ಒಳ್ಳೆಯದು. ಹಾಗೆಯೇ ಎರಡು ಏಲಕ್ಕಿಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಒಂದು ಇಂಚಿನಷ್ಟು ಶುಂಠಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿದ್ದಲ್ಲಿ ಜಜ್ಜಿ ಇಟ್ಟುಕೊಳ್ಳಬೇಕು.

ಕೊನೆಯದಾಗಿ ಅದಕ್ಕೆ ಉದ್ದ ಲೋಟದಲ್ಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು. ಒಂದು ಪಾತ್ರೆಗೆ ಆ ನೀರನ್ನು ಹಾಕಿ ಮೇಲೆ ಹೇಳಿರುವ ಎಲ್ಲಾ ಸಾಮಾನುಗಳನ್ನು ಕುದಿಯಲು ಒಂದೊಂದಾಗಿ ಹಾಕಬೇಕು. ಅರ್ಧ ಲೋಟ ನೀರು ಆಗುವವರೆಗೆ ಅದು ಚೆನ್ನಾಗಿ ಕುದಿಯಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಬೇಕು. ಇದನ್ನು ಕುಡಿಯುವುದರಿಂದ ಒಂದೇ ದಿನದಲ್ಲಿ ಚಳಿ ಮತ್ತು ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಆದ್ದರಿಂದ ಈ ಮನೆಮದ್ದನ್ನು ಮಾಡಿ ಪ್ರಯೋಜನವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *