ಪುರುಷರಲ್ಲಿ ಆ ಶಕ್ತಿ ಬೇಕು ಅಂದ್ರೆ ಶುದ್ಧ ಹಾಲಿನ ಈ ಮನೆಮದ್ದು ಮಾಡಿ

0 66

ಕಾ’ಮ ಎನ್ನುವುದು ಸಹಜವಾಗಿ ಸಂತಾನೋತ್ಪತ್ತಿ ಕ್ರಿಯೆಯ ಒಂದು ಭಾಗವಾಗಿದೆ. ಇದು ಪ್ರತಿಯೊಂದು ಜೀವಿಯಲ್ಲೂ ಸಹಜವಾಗಿಯೇ ಇರುತ್ತದೆ. ಹೆಣ್ಣಿರಲಿ ಗಂಡಿರಲಿ ಪ್ರತಿಯೊಬ್ಬರಿಗೂ ಇದು ಸಹಜ. ಕಾ’ಮೋತ್ತೇಜಕ ಹೆಚ್ಚಾಗಲು ಪ್ರತಿಯೊಬ್ಬರು ಕೇಸರಿಯನ್ನು ಬಳಸುತ್ತಾರೆ. ಕೇಸರಿಯ ಮುಖ್ಯಗುಣ ಶುಕ್ರ ಜನಕ,ವರಿನ್ಯ, ಕಾ’ಮೋತ್ತೇಜಕ,ಎಲ್ಲ ಗುಣಗಳು ಪ್ರತಿಯೊಬ್ಬರಿಗೂ ಅಂದರೆ ಹೆಣ್ಣು-ಗಂಡು ಮಕ್ಕಳು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೇಸರಿಯು ವರಿಣ್ಯ ಆಗಿರುವುದರಿಂದ ಬಾಣಂತಿಯರು ಅಥವಾ ಗರ್ಭಿಣಿ ಹೆಂಗಸರು ಹಾಲಿನ ಜೊತೆಗೆ ಕೇಸರಿಯನ್ನು ಬೆರೆಸಿ ನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದರಿಂದ ಹುಟ್ಟುವ ಮಗುವಿನ ಚರ್ಮದ ಕಾಂತಿಯು ಸ್ಥಿಗ್ದವಾಗಿರುತ್ತದೆ ಮತ್ತು ಹೊಳಪಾಗಿ ಇರುತ್ತದೆ. ಇದೇ ಕಾರಣಕ್ಕೆ ಪುರಾತನ ಕಾಲದಿಂದಲೂ ಗರ್ಭಿಣಿ ಹೆಂಗಸರಿಗೆ ಕೇಸರಿ ಹಾಲನ್ನು ಕುಡಿಸುವ ಪರಂಪರೆಯನ್ನು ಇಟ್ಟಿದ್ದಾರೆ. ಅದೇ ರೀತಿ ಬಾಣಂತಿಯರು ಕೂಡ ಇದನ್ನು ಸೇವಿಸುವುದು ಉತ್ತಮ ಏಕೆಂದರೆ ಅವರು ಸೇವಿಸುವ ಆಹಾರವು ಹಾಲಿನ ರೂಪದಲ್ಲಿ ಮಗುವನ್ನು ಸೇರುತ್ತದೆ. ಹೀಗಾಗಿ ಬಾಣಂತಿಯರು ಹಾಲಿನಲ್ಲಿ ಕೇಸರಿಯನ್ನು ಸೇರಿಸಿ ಸೇವಿಸುತ್ತ ಬಂದರೆ ಮಗುವಿನ ಚರ್ಮದ ಆರೋಗ್ಯ ಸುಧಾರಿಸುತ್ತಾ ಬರುತ್ತದೆ. ಕಾಂತಿಯುತವಾಗುತ್ತದೆ.

ಕೇಸರಿಯು ಶುಕ್ರ ಜನಕವಾಗಿರುವುದರಿಂದ ವಿವಾಹವಾಗಿರುವ ಪುರುಷರಿಗೆ ಲೈಂ’ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಹಾಲಿನ ಜೊತೆಗೆ ಕೇಸರಿ ಬರೆಸಿ ಸೇವಿಸುವುದು ಅತ್ಯವಶ್ಯ.ಅದೇ ಕಾರಣದಿಂದ ಮೊದಲಿನಿಂದಲೂ ಮೊದಲ ರಾತ್ರಿಯ ದಿನ ಹಾಲಿಗೆ ಕೇಸರಿ ಬೆರೆಸಿ ಕುಡಿಸುವ ವಾಡಿಕೆಯಿದೆ. ಕಾರಣವೇನೆಂದರೆ ಸಂ’ಭೋಗದಿಂದ ವೀರ್ಯ ನಾಶವಾಗುತ್ತದೆ, ವೀ’ರ್ಯ ವೃದ್ಧಿಗಾಗಿ, ಮತ್ತು ವೀ’ರ್ಯದ ಪುನರ್ ಉತ್ಪತ್ತಿಗೆ ಸಹಕಾರಿಯಾಗುವಂತೆ ಕೇಸರಿಯು ಕೆಲಸಮಾಡುತ್ತದೆ. ಹಾಗೆ ಕೇಸರಿಯು ಮಹಿಳೆಯರ ಸೌಂದರ್ಯ ವರ್ಧಕವೂ ಆಗಿದೆ. ಸ್ತ್ರೀಯರ ಚರ್ಮದ ಸ್ನಿಗ್ಧತೆಯನ್ನು ಕಾಯ್ದುಕೊಳ್ಳಲು ಉಪಯೋಗಕಾರಿಯಾಗಿದೆ.

ಕೇಸರಿಯನ್ನು ಶತಾವರಿಯ ಜೊತೆಗೂಡಿ ಸೇವಿಸಬಹುದು. ಶತಾವರಿಯು ತಾಯಿಯ ಎದೆಯ ಹಾಲನ್ನು ಹೆಚ್ಚಿಸುವ ಔಷಧವಾಗಿದೆ. ಈ ಶತಾವರಿಯ ಔಷಧ ಜೊತೆಜೊತೆಗೆ ಕೇಸರಿಯನ್ನು ಹಾಕಿ ಕುದಿಸಿ ಸೇವಿಸಬೇಕು ಎರಡು ಲೋಟ ನೀರಿಗೆ ಶತಾವರಿಯ 1 ಚಮಚ ದಷ್ಟು ಹಾಕಿ ಅದಕ್ಕೆ ಸ್ವಲ್ಪ ಕೇಸರಿಯನ್ನು ಹಾಕಿ ಎರಡು ಲೋಟ ನೀರು ಒಂದು ಲೋಟ ಆಗುವಷ್ಟು ಕುದಿಸಿ ಎದೆಯ ಹಾಲನ್ನು ಉಣಿಸುವಂತ ಬಾಣಂತಿಯರಿಗೆ ಕುಡಿಸಿದರೆ ಅವರ ಮುಖಾಂತರ ಮಗುವಿಗೆ ಹಸ್ತಾಂತರವಾಗುತ್ತದೆ. ಮಗುವಿನ ಆರೋಗ್ಯ ವೃದ್ಧಿಸುತ್ತದೆ.

Leave A Reply

Your email address will not be published.