Ultimate magazine theme for WordPress.

ಎಂತಹ ಕುರು ನೋವು ಇದ್ರೂ ಒಂದೆರಡು ದಿನದಲ್ಲಿ ನಿವಾರಿಸುವ ಸುಲಭ ಮನೆಮದ್ದು

0 764

ಚಿಕ್ಕ ವಯಸ್ಸಿನಲ್ಲಿ ಕುರು ಆಗುವುದು ಸಾಮಾನ್ಯವಾಗಿರುತ್ತದೆ. ಕಾಲು, ಕೈ ಹೀಗೆ ದೇಹದ ಹಲವು ಭಾಗಗಳ ಮೇಲೆ ಕುರು ಏಳುತ್ತದೆ ಅದರ ನೋವು ಸಹಿಸಲು ಕಷ್ಟ. ಕುರು ಆಗಲು ಕಾರಣ ಹಾಗೂ ಕುರು ಆದಾಗ ಮನೆಯಲ್ಲೇ ಯಾವ ಯಾವ ಮದ್ದಿನಿಂದ ಕುರುವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಲೇಖನದ ಮೂಲಕ ತಿಳಿಯೋಣ.

ಕುರು ಬೊಯಲ್ಸ ಎಂದು ಕರೆಯುತ್ತಾರೆ ಇದು ದೇಹ ಹೀಟಾದಾಗ ಆಗುತ್ತದೆ. ಕುರು ಆದಾಗ ಬಹಳ ನೋವು ಉಂಟಾಗುತ್ತದೆ ಮತ್ತು ಕೀವಾಗಿ ಸೋರುತ್ತಿರುತ್ತದೆ. ಈ ಸಮಸ್ಯೆಯನ್ನು ಮನೆಯಲ್ಲಿ ಸುಲಭವಾಗಿ ವಾಸಿ ಮಾಡಿಕೊಳ್ಳಬಹುದು ಅದು ಹೇಗೆಂದರೆ ಕುರು ಆಗುತ್ತಿದೆ ಎಂದು ಗೊತ್ತಾದ ತಕ್ಷಣ ಈರುಳ್ಳಿಯನ್ನು ಸ್ಲೈಸ್ ರೀತಿ ಕಟ್ ಮಾಡಿ ಕುರು ಇರುವ ಜಾಗದ ಮೇಲೆ ಇಟ್ಟು ಬಟ್ಟೆ ಕಟ್ಟಬೇಕು ಹೀಗೆ 2-3 ದಿನ ಮಾಡಿದಾಗ ಕುರು ವಾಸಿಯಾಗುತ್ತದೆ.

ಒಂದು ಹತ್ತಿಯ ಉಂಡೆ ಮಾಡಿ ಅದನ್ನು ಟೀ ಟ್ರಿ ಆಯಿಲ್ ನಲ್ಲಿ ಅದ್ದಿ ಕುರು ಆಗಿರುವ ಜಾಗಕ್ಕೆ ಹಚ್ಚಬೇಕು ಹೀಗೆ ಪ್ರತಿದಿನ 2-3 ಸಲ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಇದರಿಂದ ಇನಫೆಕ್ಷನ್ ಕಡಿಮೆಯಾಗುತ್ತದೆ. ಜೀರಿಗೆಯನ್ನು ಚೆನ್ನಾಗಿ ಫ್ರೈ ಮಾಡಿಕೊಂಡು ಪೌಡರ್ ಮಾಡಿಟ್ಟುಕೊಳ್ಳಬೇಕು ಆ ಪೌಡರ್ ಗೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ಈ ಪೇಸ್ಟ್ ಅನ್ನು ಕುರು ಇರುವ ಜಾಗಕ್ಕೆ ಹಚ್ಚಿ ಬಟ್ಟೆ ಕಟ್ಟಬೇಕು ಹೀಗೆ ದಿನಕ್ಕೆ 2-3 ಬಾರಿ ಮಾಡುವುದರಿಂದ ಕುರು ಕಡಿಮೆಯಾಗುತ್ತದೆ.

ವೀಳ್ಯದೆಲೆಗೆ ಹರಳೆಣ್ಣೆಯನ್ನು ನೀಟಾಗಿ ಹಚ್ಚಿ ದೀಪದ ಮೂಲಕ ಬಿಸಿ ಮಾಡಿ ಕುರು ಇರುವ ಜಾಗದ ಮೇಲೆ ಇಟ್ಟು ಬಟ್ಟೆ ಕಟ್ಟಬೇಕು ಹೀಗೆ ಪ್ರತಿದಿನ 2-3 ಬಾರಿ ಮಾಡಬೇಕು. ಬೇವಿನ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಅದನ್ನು ಕುರು ಇರುವ ಜಾಗಕ್ಕೆ ಹಚ್ಚಿ ಬಟ್ಟೆ ಕಟ್ಟಬೇಕು ಹೀಗೆ 2-3 ದಿನ ಮಾಡಿದರೆ ಕುರು ಕಡಿಮೆಯಾಗುತ್ತದೆ.

ಕುರು ಹೆಚ್ಚಾಗಿದ್ದರೆ ಒಂದು ಈರುಳ್ಳಿಯನ್ನು ಕೆಂಡ ಅಥವಾ ಯಾವುದೇ ರೀತಿಯ ಬೆಂಕಿಯ ಮೇಲೆ ಇಟ್ಟು ಕಪ್ಪಗಾಗುವರೆಗೆ ಸುಡಬೇಕು ನಂತರ ಅದರ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ನೀರು ಹಾಕದೆ ಪೇಸ್ಟ್ ಮಾಡಿ ಅದಕ್ಕೆ ಒಂದು ಸ್ಪೂನ್ ತುಪ್ಪ, ಒಂದು ಸ್ಪೂನ್ ಶುದ್ಧ ಅರಿಶಿಣ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುರು ಇರುವ ಜಾಗಕ್ಕೆ ಹಚ್ಚಿ ಬಟ್ಟೆ ಕಟ್ಟಿಕೊಳ್ಳಬೇಕು ಹೀಗೆ ಮಾಡುವುದರಿಂದ ಕುರು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಕುರುವಿಗೆ ಯಾವುದೇ ಔಷಧಿ ಹಚ್ಚಿ ಬಟ್ಟೆ ಕಟ್ಟುವಾಗ ಒಂದು ವೀಳ್ಯದೆಲೆ ಇಟ್ಟು ಬಟ್ಟೆ ಕಟ್ಟುವುದು ಒಳ್ಳೆಯದು ಇದರಿಂದ ಬೇಗ ವಾಸಿಯಾಗುತ್ತದೆ. ಮಜ್ಜಿಗೆ, ನೀರನ್ನು ಚೆನ್ನಾಗಿ ಕುಡಿಯಬೇಕು. ಕುರು ಆದಾಗ ಈ ಮೇಲಿನ ಯಾವುದೇ ಔಷಧಿಯನ್ನು ಹಚ್ಚಿ ಇದಕ್ಕೆ ಹಣ ಖರ್ಚು ಮಾಡಬೇಕಾಗಿಲ್ಲ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave A Reply

Your email address will not be published.