ಅಡುಗೆಗೆ ಅಷ್ಟೇ ಅಲ್ಲ ಶರೀರದ ಈ ಭಾದೆಗಳನ್ನು ನಿವಾರಿಸುತ್ತೆ ಈ ಲವಂಗ

0 0

ಲವಂಗ ಇದು ನಮ್ಮ ಅಡಿಗೆಯಲ್ಲಿ ಸಾಧಾರಣವಾಗಿ ದಿನನಿತ್ಯ ಬಳಸುವ ಒಮದು ಪದಾರ್ಥ. ಸಾಂಬಾರಿಗೆ ಲವಂಗ ಹಾಕಿದಾಗ ಅದರ ರುಚಿಯೆ ಬೇರೆ ರೀತಿ. ಈ ಲವಂಗವು ರುಚಿಗೆ ಮಾತ್ರವಲ್ಲದೆ ಆರೋಗ್ಯದ ಸಮಸ್ಯೆಗಳಿಗೂ ಪರಿಗಹಾರ ನೀಡುತ್ತದೆ. ಯಾವ ಯಾವ ಸಮಸ್ಯೆಗಳಿಗೆ ಲವಂಗ ಪರಿಹಾರ ಎಂಬುದನ್ನು ನಾವು ತಿಳಿಯೋಣ.

ಬಾಯಿಯ ರುಚಿ ಕೆಟ್ಟಾಗ ಈ ಲವಂಗವನ್ನು ಬಾಯಲ್ಲಿ ಇಟ್ಟು ಚಪ್ಪರಿಸುತ್ತಿದ್ದರೆ ಬಾಯಯ ರುಚಿ ಮರಳಿ ಸಿಗುತ್ತದೆ. ವಾಯು ಭಾದೆಗೂ ಲವಂಗ ಪರಿಹಾರ ಒದಗಿಸುತ್ತದೆ. ಲವಂಗವು ಕೆಮ್ಮು ಹಾಗೂ ನೆಗಡಿಗೆ ಪರಿಹಾರ ನೀಡುತ್ತದೆ. ಲವಂಗವು ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ.‌ ಲವಂಗದ ಪುಡಿಯನ್ನು ಹುಳುಕಾದ ಹಲ್ಲಿನಲ್ಲಿ ಇಟ್ಟುಕೊಂಡರೆ ಹಲ್ಲಿನ ನೋವು ಕಡಿಮೆ ಆಗುತ್ತದೆ. ಲವಂಗದ ಕಷಾಯವು ಜಂತು ಹುಳುಗಳ ಸಮಸ್ಯೆಯನ್ನು ಪರಿಹರಿಸುತ್ತದೆ. ಲವಂಗದ ಸೇವನೆಯು ಹಸಿವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೂ ಉತ್ತಮ. ಬಾಯಿಯ ದುರ್ವಾಸನೆಯು ಲವಂಗದ ಸೇವನೆಯಿಂದ ಕಡಿಮೆ ಆಗುತ್ತದೆ. ವೀಳ್ಯದೆಲೆಯಲ್ಲಿ ಸುಣ್ಣ, ಅಡಿಕೆಯ ಜೊತೆ ಲವಂಗ ಹಾಕಿಕೊಳ್ಳುವ ವಾಡಿಕೆಯು ಇದೆ.

ಅಡಿಗೆ ಮನೆಯ ಸಾಂಬಾರು ಪದಾರ್ಥಗಳಲ್ಲಿ ಲವಂಗವು ಒಂದು ಮುಖ್ಯ ಪದಾರ್ಥ. ಇದರ ಆರೋಗ್ಯ ಲಾಭಗಳು ಹಲವಾರು. ಮನೆಯ ಮದ್ದಿನ ಸರಿಯಾದ ಉಪಯೋಗ ಪಡೆದುಕೊಳ್ಳೊಣ.

Leave A Reply

Your email address will not be published.