ಪ್ರಸ್ತುತ ಪ್ರಪಂಚದಾದ್ಯಂತ ಹರಡಿಕೊಂಡಿರುವ ಅಂತಹ ಅತಿ ದೊಡ್ಡ ಭೀಕರ ಕಾಯಿಲೆ ಎಂದರೆ ಈ ಕರೋನಾ ಮಹಾಮಾರಿ. ಇದಕ್ಕೆ ಇನ್ನು ಸರಿಯಾಗಿ ಯಾವುದೇ ರೀತಿಯ ಔಷಧಿ ಕೂಡ ಸಿಕ್ಕಿಲ್ಲ . ಇದು ನಮ್ಮ ಬಳಿ ಹರಡಬಾರದು ಎಂದರೆ ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಇದಕ್ಕೆ ಇರುವ ಉತ್ತಮ ಪರಿಹಾರ. ಚಿಕಿತ್ಸೆಗಿಂತ ನಿವಾರಣೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಒಂದುವೇಳೆ ನಮಗೆ ಈ ವೈರಸ್ ತಗುಲಿದರೂ ಸಹ ನಮಗೆ ಏನೂ ಆಗದೆ ಇರುವ ರೀತಿಯಲ್ಲಿ ನಾವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಡೆಯಬಹುದು. ಇನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಅಂತೂ ಯಾವುದು ಕೋರೋನ ಕೆಮ್ಮು? ಯಾವುದು ಸಾಮಾನ್ಯವಾಗಿ ಬರುವ ಕೆಮ್ಮು ಎನ್ನುವುದು ತಿಳಿಯುವುದೇ ಇಲ್ಲ. ಹಾಗಾಗಿ ನಾವು ಈ ರೀತಿ ಆಗದಂತೆ ಮನೆಯಲ್ಲಿಯೇ ಸುಲಭವಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಸಲುವಾಗಿ ಒಂದುರೀತಿಯ ಪಾನೀಯವನ್ನು ಹೇಗೆ ತಯಾರಿಸಿಕೊಂಡು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ದೇಹದ ರೋಗನಿರೋಧಕ ಶಕ್ತಿಯ ಹೆಚ್ಚಿಸಿಕೊಳ್ಳುವುದರ ಸಲುವಾಗಿ ಈ ಪಾನೀಯವನ್ನು ಹೇಗೆ ತಯಾರಿಸಿಕೊಳ್ಳಬಹುದು? ಇದನ್ನು ಹೇಗೆ ತೆಗೆದುಕೊಳ್ಳಬಹುದು? ಹಾಗೂ ಯಾರೆಲ್ಲ ತೆಗೆದುಕೊಳ್ಳಬಹುದು? ಎನ್ನುವುದನ್ನು ನೋಡೋಣ. ಈಗ ನಾವು ಹೇಳುವ ಅಳತೆಯಲ್ಲಿ ಮಾಡಿಕೊಂಡರೆ ಇದನ್ನು ಇಬ್ಬರು ತೆಗೆದುಕೊಳ್ಳಬಹುದು. 1 ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಅದಕ್ಕೆ ಒಂದುವರೆ ಲೋಟದಷ್ಟು ನೀರನ್ನು ಹಾಕಿ, ಒಂದು ಇಂಚಿನಷ್ಟು ದಾಲ್ಚಿನಿ ಚಕ್ಕೆಯನ್ನು ಚಿಕ್ಕದಾಗಿ ಪೀಸ್ ಮಾಡಿ ಹಾಕಬೇಕು ಹಾಗೇ ನಂತರ ಒಂದು ಪಲಾವ್ ಎಲೆಯನ್ನು ಚೂರು ಮಾಡಿ ಹಾಕಬೇಕು. ನಂತರ ಒಂದು ಏಲಕ್ಕಿ ಹಾಗೂ ಮೂರು ಲವಂಗವನ್ನು ಹಾಕಬೇಕು ಹಾಗೇ ಚೆನ್ನಾಗಿ ತೊಳೆದ ಐದರಿಂದ ಆರು ತುಳಸಿ ಎಲೆಗಳನ್ನು ಕೂಡ ಹಾಕಬೇಕು. ನಂತರ ಒಂದು ಇಂಚಶ್ಟು ಶುಂಠಿಯನ್ನು ಸಿಪ್ಪೆತೆಗೆದು ತುರಿದು ಅಥವಾ ಪೇಸ್ಟ್ ಮಾಡಿ ಹಾಕಬೇಕು. ಐದರಿಂದ ಆರು ಕಾಳುಮೆಣಸನ್ನು ಸಣ್ಣದಾಗಿ ಕುಟ್ಟಿ ಹಾಕಬೇಕು. ಹಾಗೆ ನಂತರ ಒಂದೆರಡು ಟೀಸ್ಪೂನ್ ಅಷ್ಟು ಕಪ್ಪು ಬೆಲ್ಲವನ್ನು ಸೇರಿಸಿಕೊಳ್ಳಬೇಕು. (ಶುಗರ್ ಇರುವವರು ಬೆಲ್ಲದ ಬದಲು ಬ್ಲಾಕ್ ಸಾಲ್ಟ್ ಬಳಸಬಹುದು) ಹಾಗೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಕೂಡ ಸೇರಿಸಬೇಕು.

ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಈ ಕಷಾಯವನ್ನು ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಒಂದು ಲೋಟಕ್ಕೆ ಶೋಧಿಸಿಕೊಂಡು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಈ ಕಷಾಯ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಶರೀರಕ್ಕೆ ಬಲವನ್ನು ಸಹ ನೀಡುತ್ತದೆ. ಇನ್ನು ಈ ಕಷಾಯವನ್ನು ಚಿಕ್ಕಮಕ್ಕಳಿಗೆ ಕೊಡುವುದಾದರೆ 13 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಇದನ್ನು ಅರ್ಧ ಲೋಟ ಮಾತ್ರ ಕೊಡಬಹುದು 13 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಇದನ್ನು ಕೊಡಬಾರದು. 20 ವರ್ಷ ಮೇಲ್ಪಟ್ಟವರಿಗೆ ಆದರೆ ಬೆಳಗ್ಗೆ ಒಂದು ಲೋಟ ಹಾಗೂ ಸಂಜೆ ಒಂದು ಲೋಟ ಕಷಾಯವನ್ನು ಸೇವಿಸಬಹುದು. ಪ್ರತೀ ನಿತ್ಯ ಈ ರೀತಿ ಕಷಾಯವನ್ನು ಮಾಡಿಕೊಂಡು ಕುಡಿಯುವ ಮೂಲಕ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗಾಣುಗಳು ಹಾಗೂ ವೈರಸ್ ಗಳ ವಿರುದ್ಧ ನಾವು ಹೊರಾಡಬಹುದು.

(ದಾಲ್ಚಿನ್ನಿ ಚಕ್ಕೆ ಯಲ್ಲಿ ಆಂಟಿ ಇನ್ಫ್ಲಾಮೆಟರಿ ಗುಣಗಳು ಹೆಚ್ಚಾಗಿ ಇದು ಇವನಮ್ಮ ಶರೀರದಲ್ಲಿ ಯಾವುದೇ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಒದಗಿಸುತ್ತದೆ. ಪಲಾವ್ ಎಲೆ ಕೂಡ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮಹತ್ತರ ಪಾತ್ರವನ್ನು ವಹಿಸುತ್ತದೆ. ಏಲಕ್ಕಿ ಯಲ್ಲಿ ಗಂಟಲು ನೋವನ್ನು ಕಡಿಮೆ ಮಾಡುವ ಶಕ್ತಿ ಇರುತ್ತದೆ. ಲವಂಗ ದಲ್ಲಿ ಕೂಡ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ತುಳಸಿಯಲ್ಲಿ ಆಂಟಿ ಇನ್ಫಾಮೇಟರಿ ಗುಣಗಳು ಹೆಚ್ಚಾಗಿದ್ದು ನಮ್ಮ ದೇಹದಲ್ಲಿರುವ ವ್ಯರ್ಥ ಹಾಗೂ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಶುಂಠಿ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿ ಗ್ಯಾಸ್ ಅಜೀರ್ಣದಂತಹ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ. ಕಪ್ಪು ಕಾಳು ಮೆಣಸಿನಲ್ಲಿ ಇರುವ ಪೈಪರಿನ್ ಎನ್ನುವ ಅಂಶ ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಅರಿಶಿನದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಾಗಿದ್ದು ಶೀತ ಕೆಮ್ಮು ನೆಗಡಿ ಕಫ ಉಂಟಾಗದಂತೆ ತಡೆಯುತ್ತದೆ.

Leave a Reply

Your email address will not be published. Required fields are marked *