ಎಲ್ಲಿ ನೋಡಿದರೂ ಕೊರೋನ, ಕೊರೋನ, ಕೊರೋನ. ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ನಮ್ಮ ದೇಹವನ್ನು ಅಟ್ಯಾಕ್ ಮಾಡಿದರೆ ಜ್ವರ, ನೆಗಡಿ, ಶ್ವಾಸಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಆಯುರ್ವೇದದ ಪ್ರಕಾರ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕು ಹಾಗೂ ಯಾವ ಆರೋಗ್ಯಕರ ಪದ್ಧತಿಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶ್ವಾಸಕೋಶ, ಗಂಟಲು ಇನ್ಫೆಕ್ಷನ್ ಸಮಸ್ಯೆಯನ್ನು ಎದುರಿಸುತ್ತಿರುವವರು ಕೆಲವು ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಕೆಲವು ಆಹಾರವನ್ನು ತಪ್ಪದೆ ಸೇವಿಸಬೇಕು, ಕೆಲವು ಆಹಾರವನ್ನು ಸೇವಿಸಬಾರದು. ಮನೆ ಮದ್ದು ಅಥವಾ ಮೆಡಿಸಿನ್ ಜೊತೆಗೆ ಆಹಾರ ಕ್ರಮವು ಆ ಖಾಯಿಲೆಯನ್ನು ವಾಸಿ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಜ್ವರ ಬಂದಾಗ ನಾಲಿಗೆ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ ಆಗ ಊಟ ಸೇರುವುದಿಲ್ಲ ಕೆಲವರು ಬಲವಂತವಾಗಿ ಊಟ ಮಾಡುತ್ತಾರೆ ಇದರಿಂದ ವಾಂತಿ ಬರುವ ಹಾಗೆ ಆಗುತ್ತದೆ. ನಮ್ಮ ದೇಹದ ಎನರ್ಜಿ ನಮ್ಮ ದೇಹದ ರಿಪೇರಿ ಮಾಡಬೇಕಾದ ಭಾಗದ ಮೇಲೆ ಕೇಂದ್ರೀಕರಿಸುತ್ತದೆ. ಖಾಯಿಲೆ ಬಂದಾಗ ಆಂಟಿಜನ್ ಮತ್ತು ಆಂಟಿಬೋಡಿಗೂ ದೇಹದಲ್ಲಿ ಯುದ್ಧ ನಡೆಯುತ್ತದೆ, ನಮ್ಮ ಎನರ್ಜಿಯನ್ನು ಯುದ್ಧದಲ್ಲಿ ಮೀಸಲಿಡಬೇಕು ಉಳಿದ ಯಾವ ಕೆಲಸಕ್ಕೂ ವ್ಯಯವಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಊಟ ಮಾಡಬಾರದು, ಗಟ್ಟಿಯಾದ ಆಹಾರ ಸೇವಿಸಿದರೆ ಎನರ್ಜಿ ಆಹಾರದ ಜೀರ್ಣಕ್ಕೆ ವ್ಯಯವಾಗುತ್ತದೆ ವೈರಸ್ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ ಆದ್ದರಿಂದ ದ್ರವ ಆಹಾರವನ್ನು ಸೇವಿಸಬೇಕು ನೀರು, ಜ್ಯೂಸ್, ತರಕಾರಿ ಅಥವಾ ಬೇಳೆಕಾಳು ಬೇಯಿಸಿದ ನೀರನ್ನು ಕುಡಿಯಬೇಕು ಮತ್ತು ಮಲಗಬೇಕು. ನಿದ್ರೆ ಮಾಡುವುದರಿಂದ ನಮ್ಮ ದೇಹದ ಎನರ್ಜಿ ವೈರಸ್ ವಿರುದ್ಧ ಹೋರಾಡುತ್ತದೆ.
ವೈರಸ್ ನಮ್ಮ ದೇಹ ಸೇರಿದಾಗ ಉಪವಾಸ ಇರುವುದು ಆಯುರ್ವೇದದ ಪ್ರಕಾರ ಪರಮೌಷಧ. ಜ್ವರ ಬರುವ ಮೊದಲು ಮೈಕೈ ನೋವು ಕಾಣಿಸಿಕೊಳ್ಳುತ್ತದೆ ಆಗ ಓಂಕಾಳು ಕಷಾಯ ಕುಡಿಯಬೇಕು. ಎರಡು ಲೋಟ ನೀರಿಗೆ ಓಂಕಾಳನ್ನು ಕುಟ್ಟಿ ಹಾಕಿ ಒಂದು ಲೋಟ ಆಗುವವರೆಗೆ ಕುದಿಸಿ ಸೋಸಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕಿಂತ ಮೊದಲು ಕುಡಿಯಬೇಕು. ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಒಂದು ಸ್ಪೂನ್ ತುಳಸಿ ರಸಕ್ಕೆ ಒಂದು ಸ್ಪೂನ್ ಜೇನನ್ನು ಮಿಕ್ಸ್ ಮಾಡಿ ಮೂರು ದಿನಗಳವರೆಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಸೇವಿಸಿದರೆ ಶ್ವಾಸಕೋಶ ಸಮಸ್ಯೆ ನಿವಾರಣೆಯಾಗುತ್ತದೆ. ಜ್ವರ ಬಂದಾಗ ಅಮೃತ ಬಳ್ಳಿಯ ಎಲೆ ಅಥವಾ ಕಾಂಡದ ಕಷಾಯ ಕುಡಿಯಬೇಕು. ಎರಡು ಲೋಟ ನೀರಿಗೆ ಅಮೃತ ಬಳ್ಳಿಯ ಎಲೆ ಅಥವಾ ಕಾಂಡ ಹಾಕಿ ಒಂದು ಲೋಟ ಆಗುವವರೆಗೆ ಕುದಿಸಿ ಸೋಸಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ 3-5 ದಿನಗಳವರೆಗೆ ಕುಡಿಯಬೇಕು. ಈ ಕಷಾಯಗಳನ್ನು ಕುಡಿಯುವ ಸಮಯದಲ್ಲಿ ಮಾಂಸಹಾರವನ್ನು ಸೇವಿಸಬಾರದು. ಆಯುರ್ವೇದ ಔಷಧಿ ಮಾಡುವಾಗ ಸಾತ್ವಿಕ ಆಹಾರ, ಸಾತ್ವಿಕ ವಿಚಾರಗಳನ್ನು ಹೊಂದಿದಾಗ ಮಾತ್ರ ಅದು ಫಲ ಕೊಡುತ್ತದೆ. ವೈರಸ್ ನಮ್ಮ ದೇಹ ಸೇರಿದಾಗ ನಾವು ಟ್ಯಾಬ್ಲೆಟ್ ತೆಗೆದುಕೊಂಡರೆ ಆ ಕ್ಷಣಕ್ಕೆ ವಾಸಿಯಾದರು ಅದು ಬೇರೆ ರೂಪದಲ್ಲಿ ಮತ್ತೆ ಕಾಡುತ್ತದೆ. ಇವುಗಳೊಂದಿಗೆ ಪ್ರಾಣಾಯಾಮ, ಯೋಗಾಸನ, ಧ್ಯಾನ ಮಾಡಬೇಕು. ಈ ಮೇಲಿನ ಅಂಶಗಳನ್ನು ಅನುಸರಿಸಿದರೆ ಕೊರೋನ ಅಲ್ಲದೆ ಇನ್ನಿತರ ಯಾವುದೆ ವೈರಸ್ ನಿಂದ ನಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.