ನೀವು ತಿನ್ನುವ ತುಪ್ಪ ಶುದ್ಧವೋ ಅಥವಾ ಕಲಬೆರಕೆ ಎಂದು ತಿಳಿಯುವ ಸಿಂಪಲ್ ಉಪಾಯ

0 2

ತುಪ್ಪ ಬೆಣ್ಣೆಯಿಂದ ಉತ್ಪಾಸಲ್ಪಡುವ ವಸ್ತುವಾಗಿದ್ದು ಈ ತುಪ್ಪದ ಆವಿಷ್ಕಾರ ಆಗಿದ್ದು ನಮ್ಮ ಭಾರತದಲ್ಲಿಯೇ. ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ತುಪ್ಪದ ಸಾಂದ್ರತೆ ಬಣ್ಣ ಮತ್ತು ರುಚಿಯು ಬೆಣ್ಣೆಯ ಗುಣಮಟ್ಟ ಹಾಗೂ ಈ ಪ್ರಕ್ರಿಯೆಯಲ್ಲಿ ಬಳಸಲಾದ ಹಾಲಿನ ಮೂಲ ಮತ್ತು ಕುದಿಸುವ ಕಾಲಾವಧಿಯ ಮೇಲೆ ಅವಲಂಬಿಸಿರುತ್ತದೆ. ಸಾಂಪ್ರದಾಯಿಕವಾಗಿ ತುಪ್ಪವನ್ನು ಆಕಳ ಹಾಲಿನಿಂದ ತಯಾರಿಸಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ತುಪ್ಪ ಒಂದು ಪವಿತ್ರ ವಸ್ತುವಾಗಿದ್ದು ವೈದಿಕ ಯಜ್ಞ ಮತ್ತು ಹೋಮಗಳಿಗೆ ಇದು ಅವಶ್ಯಕವಾಗಿದೆ. ಸಂಸ್ಕೃತದಲ್ಲಿ ತುಪ್ಪಕ್ಕೆ ಗೋ ಘೃತ ಎಂದು ಕರೆಯುತ್ತಾರೆ. ಸಾಂಪ್ರದಾಯಿಕವಾಗಿ ತುಪ್ಪ ಯಾವಾಗಲೂ ಪವಿತ್ರವೆಂದು ಪರಿಗಣಿಸಲ್ಪಟ್ಟ ಹಸುಗಳ ಹಾಲಿನಿಂದ ತಯಾರಿಸಲ್ಪಡುತ್ತದೆ ವೈದಿಕ ಯಜ್ಞ ಮತ್ತು ಹೋಮದಲ್ಲಿ ಇದು ಪವಿತ್ರವಾದ ಕಾರಣ ಅಗತ್ಯವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಇಷ್ಟೊಂದು ಮಹತ್ವ ಹೊಂದಿರುವ ತುಪ್ಪ ಈಗಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಪರಿಶುದ್ಧವಾಗಿ ಇದೆ ಅಥವಾ ನಾವು ಎಷ್ಟರ ಮಟ್ಟಿಗೆ ಶುದ್ಧವಾದ ತುಪ್ಪ ಅಥವಾ ಅದರಿಂದ ತಯಾರಿಸಿದ ಆಹಾರಗಳನ್ನು ಸೇವಿಸುತ್ತೇವೆ ಎನ್ನುವುದು ಪ್ರಶ್ನೆ.

ತುಪ್ಪದಲ್ಲಿ ಎಲ್ಲಾ ರೀತಿಯ ಅಡುಗೆಗಳನ್ನು ತಯಾರಿಸಹುದು. ಅದರಲ್ಲೂ ತುಪ್ಪದಲ್ಲಿ ತಯಾರಿಸಿದ ಸಿಹಿತಿಂಡಿಗಳು ಅಂತೂ ಬಹಳ ರುಚಿಯಾಗಿರುತ್ತವೆ. ತುಪ್ಪದ ಮುಂದೆ ಯಾವ ಬೇರೆ ಇನ್ಯಾವ ತೈಲವು ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಲಾಗಿಲ್ಲ. ತುಪ್ಪವನ್ನು ಒಂದು ಆರೋಗ್ಯಕರ ಕೊಬ್ಬು ಎಂದೂ ಸಹ ಪರಿಗಣಿಸಲಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ನಕಲಿ ತುಪ್ಪದ ಹಾವಳಿಯೂ ಸಹ ಹೆಚ್ಚಾಗಿದೆ. ಇಂದಿನ ದಿನದಲ್ಲಿ ಶುದ್ಧ ತುಪ್ಪ ಯಾವುದು ಹಾಗೂ ಕಲಬೆರಕೆ ಮಾಡಿದ ತುಪ್ಪ ಯಾವುದು ಎಂದು ತಿಳಿಯದಾಗಿದೆ. ಇಂದು ಶುದ್ಧ ದೇಸಿ ತುಪ್ಪದ ಶುದ್ಧತೆಯನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.

ಶುದ್ಧ ದೇಸಿ ತುಪ್ಪದ ಬಣ್ಣ ಹೇಗಿರುತ್ತದೆ? ಎಂದು ನೋಡುವುದಾದರೆ, ಮಾರುಕಟ್ಟೆಯಿಂದ ನಾವು ಸಾಕಷ್ಟು ಬಾರಿ ತುಪ್ಪವನ್ನು ಖರೀದಿಸಿ ತರುತ್ತೇವೆ ಆದರೆ ಹೀಗೇ ಖರೀದಿಸಿದ ತುಪ್ಪವು ದೀರ್ಘಕಾಲದವರೆಗೆ ತಾಜಾವಾಗಿರಲು ಸುಗಂಧ ಮತ್ತು ಸಂರಕ್ಷಕಗಳನ್ನು ಸೇರಿಸಿರುತ್ತಾರೆ. ಹೆಚ್ಚಿನ ಸಂಖ್ಯೆಯ ಬ್ರಾಂಡ್ಗಳು ಕಲಬೆರಕೆಗೆ ಒಳಗಾಗುವುದರಿಂದ ತುಪ್ಪದ ಶುದ್ಧತೆಯನ್ನು ಅದರ ಬಣ್ಣವನ್ನು ನೋಡುವ ಮೂಲಕ ಪರೀಕ್ಷಿಸುವುದು ತುಂಬಾ ಕಷ್ಟಕರವಾಗುತ್ತದೆ. ಶುದ್ಧ ದೇಸಿ ತುಪ್ಪದ ನಿಜವಾದ ಬಣ್ಣ ಹಳದಿ ಅಥವಾ ಚಿನ್ನದ ಬಣ್ಣದಲ್ಲಿರುತ್ತದೆ. ಆಹಾರ ಪದಾರ್ಥಗಳ ಕಲಬೆರಕೆ ಭಾರತದಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವು ಬ್ರಾಂಡ್‌ಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ತುಪ್ಪದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ತುಪ್ಪವನ್ನು ಹೆಚ್ಚಾಗಿ ತೆಂಗಿನ ಎಣ್ಣೆ ಬಾದಾಮಿ ಎಣ್ಣೆ ಮತ್ತು ವನಸ್ಪತಿಯಂತಹ ಹೈಡ್ರೋಜನೀಕರಿಸಿದ ಎಣ್ಣೆಗಳೊಂದಿಗೆ ಬೆರೆಸಲಾಗುತ್ತದೆ. ತುಪ್ಪದ ನಿಯಮಿತ ಗ್ರಾಹಕರಾಗಿದ್ದರೆ ಅದು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ತಕ್ಷಣ ತಿಳಿದುಕೊಳ್ಳಲೇಬೇಕು. ಅದು ಹೇಗೆ ಎನ್ನುವುದನ್ನು ನೋಡೋಣ.

ನಾವು ಮನೆಯಲ್ಲಿಯೇ ತುಪ್ಪದ ಶುದ್ಧತೆಯನ್ನು ಪರೀಕ್ಷಿಸಿಕೊಳ್ಳಬಹುದು ಅದೂ ಈ ಸುಳಬಹಾ ವಿಧಾನಗಳಿಂದ. ನಾವು ಮನೆಯಲ್ಲಿಯೇ ತುಪ್ಪವನ್ನು ಪರೀಕ್ಷಿಸಲು ಸುಲಭ ವಿಧಾನ ಎಂದರೆ ಮೊದಲನೆಯದು, ತುಪ್ಪವನ್ನು ಬಾಣಲೆಯಲ್ಲಿ ಕರಗಿಸುವುದು. ಒಂದು ಪ್ಯಾನ್ ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಂಡು ಅದಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಬೇಕು. ಹೀಗೆ ಮಾಡಿದಾಗ ತುಪ್ಪ ತಕ್ಷಣ ಕರಗಿ ಗಾಢ ಕಂದು ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ತುಪ್ಪ ಎಂದೂ ಅದು ಕರಗಲು ಸಮಯ ತೆಗೆದುಕೊಂಡು ತಿಳಿ ಹಳದಿ ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆಯಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು.

ಇನ್ನು ಎರಡನೇ ವಿಧಾನ ಹೇಗೆ ಎಂದು ನೋಡುವುದಾದರೆ ಈ ವಿಧಾನವು ದೇಸಿ ತುಪ್ಪವನ್ನು ತೆಂಗಿನ ಎಣ್ಣೆಯಿಂದ ಕಲಬೆರಕೆ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿಸಿಕೊಡುತ್ತದೆ. ಇದನ್ನು ಕಂಡುಹಿಡಿಯಲು ಒಂದು ಗಾಜಿನ ಬಟ್ಟಲಿಗೆ ಸ್ವಲ್ಪ ತುಪ್ಪ ಹಾಕಿಕೊಂಡು ಅದನ್ನು ಡಬಲ್ ಬಾಯ್ಲರ್ ವಿಧಾನವನ್ನು ಬಳಸಿ ಕರಗಿಸಬೇಕು. ಕರಗಿದ ಮಿಶ್ರಣವನ್ನು ಒಂದು ಬಾಟಲಿ ಅಥವಾ ಜಾರ್ ನಲ್ಲಿ ಹಾಕಿ ನಂತರ ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿ ಇಡಬೇಕು. ನಂತರ ತೆಂಗಿನ ಎಣ್ಣೆ ಮತ್ತು ತುಪ್ಪ ಪ್ರತ್ಯೇಕ ಪದರಗಳಲ್ಲಿ ಗಟ್ಟಿಯಾದರೆ ಆ ತುಪ್ಪ ತೆಂಗಿನ ಎಣ್ಣೆಯಿಂದ ಕಲಬೆರಕೆಯಾಗಿದೆ ಎಂದರ್ಥ ಹಾಗೂ ಇಲ್ಲದಿದ್ದರೆ ತುಪ್ಪ ಶುದ್ಧವಾಗಿರುತ್ತದೆ. ಇನ್ನೂ ಮೂರನೇ ವಿಧಾನ ಹೇಗೆ ಎಂದು ನೋಡುವುದಾದರೆ, ತುಪ್ಪವನ್ನು ಅಂಗೈನಲ್ಲಿ ಹಾಕಿ ಪರೀಕ್ಷೆ ಮಾಡುವುದು. ಇದು ಶುದ್ಧತೆಯನ್ನು ಪರೀಕ್ಷಿಸುವ ಇನ್ನೊಂದು ವಿಧಾನವಾಗಿದೆ. ನಿಮ್ಮ ಅಂಗೈಗೆ ಒಂದು ಚಮಚ ತುಪ್ಪವನ್ನು ಹಾಕಿ ಮತ್ತು ಅದು ಕರಗುವವರೆಗೆ ಸ್ವಲ್ಪ ಸಮಯ ಕಾಯಬೇಕು ತುಪ್ಪ ಕರಗಲು ಪ್ರಾರಂಭಿಸಿದರೆ ಅದು ಶುದ್ಧವಾಗಿರುತ್ತದೆ ಎಂದೂ ಅದು ಹಾಗೇ ಇದ್ದರೆ ಅದು ಶುದ್ಧವಾಗಿಲ್ಲ ಎಂದೂ ಅರ್ಥ. ಈ ರೀತಿಯಾಗಿ ನಾವು ಸುಲಭವಾಗಿ ಮನೆಯಲ್ಲಿಯೇ ನಾವು ಮಾರ್ಕೆಟ್ ನಿಂದ ಕೊಂಡು ತಂದ ತುಪ್ಪ ಶುದ್ಧವಾಗಿ ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು.

Leave A Reply

Your email address will not be published.