ಚಿಕನ್‌ನಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಚಿಕನ್ ಅನ್ನು ಸಾರು ಮಾಡಿ ತಿನ್ನಬಹುದು. ಹಾಗೆಯೇ ಸ್ವಲ್ಪ ಡ್ರೈ ರೀತಿ ಮಾಡಿ ತಿನ್ನಬಹುದು.ಹಾಗೆಯೇ ಚಿಕನ್ ಫ್ರೈ ಮಾಡಿ ಕೂಡ ತಿನ್ನಬಹುದು. ಇದನ್ನು ಮಾಡುವುದು ಬಹಳ ಸುಲಭವಾಗಿದೆ. ಆದ್ದರಿಂದ ನಾವು ಇಲ್ಲಿ ಚಿಕನ್ ಫ್ರೈ ಮಾಡುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚಿಕನ್ ಫ್ರೈನ್ನು ನಾನ್ ವೆಜ್ ತಿನ್ನುವವರು ಎಲ್ಲರೂ ಇಷ್ಟ ಪಡುತ್ತಾರೆ. ಚಿಕನ್ ಫ್ರೈ ಸುದ್ದಿ ಕೇಳಿದರೆ ಸಾಕು ಬಾಯಲ್ಲಿ ನೀರೂರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ ಮೊದಲು ಇದಕ್ಕೆ 1/2 ಕೆಜಿ ಕೋಳಿ ಬೋನ್ ಲೆಸ್ ನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ 4 ಚಮದಷ್ಟು ಎಣ್ಣೆಯನ್ನು ತೆಗೆದುಕೊಳ್ಳಬೇಕು. ಇದಕ್ಕೆ 2 ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ನಂತರ 1ಟೊಮೆಟೊ ಮತ್ತು 1ಚಮಚ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು. 1 ಚಮಚ ಶುಂಠಿ ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಕರಿಬೇವಿನ ಎಲೆ ಬೇಕಾಗುತ್ತದೆ.
ಹಾಗೆಯೇ 1/4 ಚಮಚ ಅರಿಶಿಣ ಪುಡಿ ಬೇಕಾಗುತ್ತದೆ. ನಂತರದಲ್ಲಿ 2 ಚಮಚ ಮೆಣಸಿನ ಪುಡಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ರುಚಿಗೆತಕ್ಕ ಉಪ್ಪನ್ನು ತೆಗೆದುಕೊಳ್ಳಬೇಕು. ಮೊದಲು ಚಿಕನ್ ನ್ನು ಚೆನ್ನಾಗಿ ಕಟ್ ಮಾಡಿಕೊಳ್ಳಬೇಕು. ಹಾಗೆಯೇ ನಂತರದಲ್ಲಿ ಈರುಳ್ಳಿಯನ್ನು ಉದ್ದುದ್ದವಾಗಿ ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿಕೊಂಡಿರಬೇಕು. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಟೊಮೆಟೊ, ಅರಿಶಿಣ ಮತ್ತು ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಇರಬೇಕು. ನಂತರ ಚಿಕನ್ ಹಾಕಿ 1/4 ಗ್ಲಾಸ್ ನೀರು ಸೇರಿಸಿ ಮಿಶ್ರ ಮಾಡಿ 10-15 ನಿಮಿಷ ಬೇಯಿಸಬೇಕು. ಹೀಗೆ ಬೇಯಿಸುವಾಗ ಸೌಟ್ ನಿಂದ ಆಗಾಗ ಆಡಿಸುತ್ತಾ ಇರಬೇಕು. ಸಂಪೂರ್ಣ ಬೆಂದ ಮೇಲೆ ಉಪ್ಪು ನೋಡಿ ಉರಿಯಿಂದ ಇಳಿಸಿದರೆ ರುಚಿಕರವಾದ ಚಿಕನ್ ಫ್ರೈ ರೆಡಿಯಾಗುತ್ತದೆ. ಇದನ್ನು ಬೇಕಾದರೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.