ಪುರುಷರಲ್ಲಿ ವೀ’ರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತುಗಳನ್ನೇ ಹೆಚ್ಚಾಗಿ ಸೇವಿಸಿದರೆ ಸಾಕು ಸುಲಭವಾಗಿ ವೀರ್ಯ ವೃದ್ಧಿ ಮಾಡಿಕೊಳ್ಳಬಹುದು. ಅಂತಹ ಆಹಾರ ಪದಾರ್ಥಗಳು ಯಾವುವು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದಂಪತಿಗಳಿಗೆ ಮಗುವಾಗಿಲ್ಲ ಎಂದರೆ ಮೊದಲು ದೂಷಿಸುವುದು ಮಹಿಳೆಯರನ್ನಾ. ಆಕೆಯ ಗರ್ಭಕೋಶದಲ್ಲಿಯ ತೊಂದರೆಗಳಿಗೆ ಮಗುವಾಗುವುದಿಲ್ಲ ಎಂದು ಹೇಳುತ್ತಾರೆ. ಮಕ್ಕಳಾಗದ ಸಮಸ್ಯೆಗೆ ಪುರುಷರು ಕಾರಣರಾಗಿರಬಹುದು ಎನ್ನುವುದನ್ನು ನಾವು ಯೋಚಿಸಿರುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೇ ಹೆಚ್ಚು ಫಲಹೀನತೆ ಇರುವುದು ಬೆಳಕಿಗೆ ಬಂದಿದೆ. ಹಾಗಾಗಿ ಮಹಿಳೆ ಗರ್ಭಿಣಿಯಾಗದಿರಲು ಕೇವಲ ಅವಳ ಆಂತರಿಕ ಸಮಸ್ಯೆ ಒಂದೇ ಕಾರಣವಾಗಿರುವುದಿಲ್ಲ. ಬದಲಿಗೆ ಪುರುಷನ ದೌರ್ಬಲ್ಯವೂ ಕಾರಣವಾಗುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾವು ಆರೋಗ್ಯ ಪೂರ್ಣರಾಗಿರಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಹಾರದಿಂದಲೂ ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಕುರಿತು ಅನೇಕ ಅಧ್ಯಯನಗಳು ಸಾಬೀತು ಪಡಿಸಿದೆ. ಜೊತೆಗೆ ಆರೋಗ್ಯ ಕರ ಆಹಾರವು ವೀರ್ಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತೆರೆದಿಟ್ಟಿದೆ. ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಕೇವಲ ಆರೋಗ್ಯ ಪೂರ್ಣ ಆಹಾರ ಸೇವಿಸಿದರೆ ಸಾಲದು. ಬದಲಿಗೆ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರ ಸರಿಯಬೇಕು. ವಿಟಮಿನ್ ಸಿ, ಮ್ಯಾಗ್ನೀಷಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿದರೆ ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚುವುದು. ಆಗ ಫಲವತ್ತತೆಯೂ ಉತ್ತಮಗೊಳ್ಳುವುದು.

ಮೊದಲಿಗೆ ಭಯ ಸ್ಟ್ರೆಸ್, ಭಯ ಒತ್ತಡ ಇದು ಸಾಕಷ್ಟು ಜನರಲ್ಲಿ ಎಲ್ಲಿ ತಮಗೆ ಮಕ್ಕಳು ಆಗುವುದೇ ಇಲ್ಲವೇನೋ ಎನ್ನುವ ಯೋಚನೆಯನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಮಹಿಳೆಗೆ ಗರ್ಭ ನಿಲ್ಲಲು ಬೇಕಾದ ಪ್ರಮುಖವಾಗಿ ಕಾರಣವಾಗಿರುವ ವೀರ್ಯಗಳ ಗುಣಮಟ್ಟ ಹಾಗೂ ಸಂಖ್ಯೆಗಳಲ್ಲಿ ಕಡಿಮೆ ಉಂಟಾಗುತ್ತದೆ. ಎಷ್ಟು ಸ್ಟ್ರೆಸ್ ದೂರ ಮಾಡಿಕೊಂಡು ನೆಮ್ಮದಿಯಾಗಿ ಇರುತ್ತೇವೆ ಅಷ್ಟು ವೀರ್ಯಗಳ ಗುಣಮಟ್ಟ ಹೆಚ್ಚುತ್ತದೆ. ಉಸಿರುಗಟ್ಟಿಸುವ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಸಹ ವೀರ್ಯಾಣುವಿನ ಗುಣಮಟ್ಟ ಕಡಿಮೆ ಆಗುವುದು ಹಾಗಾಗಿ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಇವೆಲ್ಲ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆ ಆಗಲು ಕಾರಣಗಳು. ಇನ್ನು ವೀರ್ಯದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಮದ್ದುಗಳು ಏನು ಎಂದು ನೋಡುವುದಾದರೆ.

ವೀ’ರ್ಯದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸುಲಭವಾಗಿ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿಕೊಳ್ಳಬಹುದು. ಬಾದಾಮಿ ಕೇಸರಿ ಹಾಗೂ ಗಸಗಸೆ ಇವು ಮೂರು ಪದಾರ್ಥಗಳನ್ನು ಚೆನ್ನಾಗಿ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕುದಿಸಿ ರಾತ್ರಿ ಊಟ ಆದ ನಂತರ ಮತ್ತು ಮಲಗುವ ಒಂದು ತಾಸು ಮೊದಲು ಇದನ್ನು ಸೇವಿಸಬೇಕು. ಇದನ್ನು ಹದಿನೈದರಿಂದ ನಲವತ್ತೈದು ದಿನಗಳ ವರೆಗೂ ಇನ್ನು ಕೆಲವೊಮ್ಮೆ ಸುಮಾರು ಮೂರು ತಿಂಗಳವರೆಗೂ ಸೇವಿಸಬೇಕಾಗುವುದು. ಈ ರೀತಿ ಪ್ರತೀ ನಿತ್ಯ ಸೇವಿಸುತ್ತಾ ಬಂದರೆ ವೀರ್ಯಗಳ ಗುಣಮಟ್ಟ ಗಣನೀಯವಾಗಿ ಹೆಚ್ಚುವುದು. ಇನ್ನೊಂದು ಮನೆ ಮದ್ದು ಎಂದರೆ ಒಂದರಿಂದ ಎರಡು ಚಮಚದಷ್ಟು ಶುದ್ಧ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಮತ್ತು ಶುಗರ್ ಕಾಯಿಲೆ ಇಲ್ಲದವರು ಸ್ವಲ್ಪ ಪ್ರಮಾಣದಲ್ಲಿ ಕೆಂಪು ಕಲ್ಲುಸಕ್ಕರೆ ಸೇರಿಸಿಕೊಳ್ಳಬಹುದು ಅಥವಾ ತುಂಬಾ ಹಳೆಯ ಜೇನುತುಪ್ಪವನ್ನು ಕಡಿಮೆ ಪ್ರಮಾಣದಲ್ಲಿ ಸೇರಿಸಿಕೊಂಡು ಇದನ್ನೂ ಸಹ ರಾತ್ರಿ ಊಟ ಆದ ನಂತರ ಸೇವಿಸಬೇಕು. ಅಶ್ವಗಂಧ ನೇರವಾಗಿ ವೀರ್ಯಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ವೀರ್ಯ ಹೆಚ್ಚಾಗಲು ಸಹಾಯಕಾರಿ.

Leave a Reply

Your email address will not be published. Required fields are marked *