ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಶರೀರಕ್ಕೆ ಏನಾಗುತ್ತೆ ನೋಡಿ

0 18

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೆಲವರು ದಪ್ಪ ಆಗುತ್ತಾರೆ. ಹಾಗೆಯೇ ಕೆಲವರು ಇದ್ದ ಹಾಗೆಯೇ ಇರುತ್ತಾರೆ. ಇದನ್ನು ತಿಂದು ದಪ್ಪ ಆಗಲು ಕಾರಣ ಅದರಲ್ಲಿರುವ ಜಿಡ್ಡು ಮತ್ತು ಕೊಬ್ಬಿನ ಅಂಶಗಳು ಆಗಿವೆ. ಇವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ವಿಸ್ಮಯ ಎಂದರೆ ಜನರಿಗೆ ಇದು ಒಳ್ಳೆಯದಲ್ಲ ಎಂದು ತಿಳಿದರೂ ಇದನ್ನು ತಿನ್ನುತ್ತಾರೆ. ಆದ್ದರಿಂದ ನಾವು ಇಲ್ಲಿ ಎಣ್ಣೆಯ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಣ್ಣೆ ಜಿಡ್ಡಿನ ಆಹಾರ ಅಥವಾ ಆಯ್ಲಿ ಫುಡ್ ಎಂದರೆ ಹಲವರಿಗೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗಂತೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಎಣ್ಣೆಯಲ್ಲಿ ಕರಿದ ಯಾವುದಾದರೂ ಪದಾರ್ಥಗಳು ತಮ್ಮ ಊಟದ ಜೊತೆ ನೆಂಚಿಕೊಳ್ಳಲು ಇರಲೇಬೇಕು. ಇದು ಮನೆಯಲ್ಲಿರುವವರ ಕಥೆಯಾದರೆ ಇನ್ನು ಮನೆಯ ಹೊರಗಡೆ ದುಡಿಯುವ ಮಂದಿ ಪಿಜ್ಜಾ, ಬರ್ಗರ್ ಮೊರೆಹೋಗುತ್ತಾರೆ. ಇವುಗಳಲ್ಲಿರುವ ಜಿಡ್ಡಿನಾಂಶ ಬೇರೆ ಯಾವ ಆಹಾರಗಳಲ್ಲಿ ಹುಡುಕಿದರೂ ಸಿಗುವುದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಜಿಡ್ಡಿನ ಅಂಶ ದೇಹ ಸೇರಿದರೆ ನಿಜಕ್ಕೂ ಅದನ್ನು ಜೀರ್ಣವಾಗಿಸಿಕೊಳ್ಳುವ ಶಕ್ತಿ ಇದೆಯೇ ಎಂಬುದನ್ನು ಯೋಚಿಸಬೇಕು.

ಹೆಚ್ಚು ಎಣ್ಣೆ ಜಿಡ್ಡಿನ ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ, ಕೊಲೆಸ್ಟ್ರಾಲ್ ಅಂಶ, ರಕ್ತದ ಒತ್ತಡ, ಹೃದಯದ ಸಮಸ್ಯೆ, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಎಣ್ಣೆಯ ಪದಾರ್ಥಗಳನ್ನು ಆರೋಗ್ಯ ಇರುವವರು ಸೇವನೆ ಮಾಡಬಹುದು. ಅತಿಯಾದ ತೂಕ ಹೊಂದಿರುವವರು ಸೇವನೆ ಮಾಡಬಾರದು. ಅತಿಯಾದ ಪಿತ್ತದ ಸಮಸ್ಯೆ ಇರುವವರು ತಿನ್ನಬಾರದು. ಯಾವುದಾದರೂ ರೋಗ ಇದ್ದವರು ವೈದ್ಯರ ಬಳಿ ಕೇಳಿಕೊಂಡು  ತಿನ್ನಬೇಕು. ಜೀರ್ಣಕ್ರಿಯೆ ಶಕ್ತಿ ಕಡಿಮೆ ಇರುವವರು ಇದನ್ನು ತಿನ್ನಬಾರದು. ಊಟದಲ್ಲಿ ಅರ್ಧಕ್ಕಿಂತ ಕಡಿಮೆ ಭಾಗ ಕರಿದ ಪದಾರ್ಥಗಳನ್ನು ಸೇವನೆ ಮಾಡಬೇಕು. ಕರಿದ ಪದಾರ್ಥಗಳನ್ನು ತಿನ್ನಬೇಕು. ಇದರಿಂದ ಆರೋಗ್ಯಕ್ಕೆ ಒಳ್ಳೆಯದು.

ಆದರೆ ಅತಿಯಾಗಿ ತಿನ್ನಬಾರದು. ಹಾಗೆಯೇ ರಾತ್ರಿ ವೇಳೆ ಕರಿದ ಪದಾರ್ಥಗಳನ್ನು ಸೇವನೆ ಮಾಡಬಾರದು. ಆದಷ್ಟು ಹಗಲಿನಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಶೇಂಗಾ ಎಣ್ಣೆಯನ್ನು ಬಳಸಬೇಕು. ಬಿಸಿ ನೀರು ಮತ್ತು ಎಣ್ಣೆಯ ಅಂಶ ಪರಮ ಬದ್ದ ವೈರಿಗಳು ಎಂದು ಹೇಳುತ್ತಾರೆ. ಹಾಗಾಗಿ ಹಿಂದಿನ ಕಾಲದಲ್ಲಿ ಮದುವೆ ಮನೆಗಳಲ್ಲಿ ತುಪ್ಪದ ಊಟ ಬಡಿಸಿದ ನಂತರ ಎಲ್ಲರಿಗೂ ಕೈತೊಳೆದುಕೊಳ್ಳಲು ಬಿಸಿನೀರು ಕೊಡುತ್ತಿದ್ದರು. ಬಿಸಿನೀರಿನ ಪ್ರಭಾವ ಕೇವಲ ದೇಹದ ಮೇಲಷ್ಟೇ ಎಂದು ತಿಳಿದುಕೊಂಡರೆ ಅದು ತಪ್ಪು. ಯಾವುದಾದರೂ ಜಿಡ್ಡಿನ ಆಹಾರ ಪದಾರ್ಥ ಸೇವಿಸಿದ ಬಳಿಕ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಜೀರ್ಣಕ್ರಿಯೆಯಲ್ಲಿ ಸಾಕಷ್ಟು ಸಹಾಯವಾಗುತ್ತದೆ.

Leave A Reply

Your email address will not be published.