ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸ್ನೆಸ್ ಆರಂಭಿಸುವುದು ಅತ್ಯಂತ ಸೂಕ್ತ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಅಂಗಡಿಗಳನ್ನು ಬಾಡಿಗೆ ಹಿಡಿಯುವುದು ಅತಿ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು ಅತ್ಯಂತ ಸುಲಭ ಹಾಗೂ ಸಹಜವಾಗುತ್ತಿದೆ. ಎಲ್ಲ ಪ್ರತಿಕೂಲ ಸ್ಥಿತಿಗಳನ್ನು ಮೀರಿ ನೀವು ಮನೆಯಿಂದಲೇ ಲಾಭದಾಯಕವಾದ ಉದ್ಯಮವನ್ನು ಆರಂಭಿಸಿ ಹಣ ಸಂಪಾದನೆ ಮಾಡಬಹುದು. ಹೊರಗಡೆ ಮಳಿಗೆ ಬಾಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನಿರಾಶರಾಗುವ ಬದಲು ಮನೆಯಿಂದಲೇ ಮಾಡಬಹುದಾದ ಉತ್ತಮ ಬಿಸಿನೆಸ್ ಐಡಿಯಾಗಳನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿ. ಈ ಲೇಖನದಲ್ಲಿ ನಾವು ಕಡಿಮೆ ಕರ್ಚಿನಲ್ಲಿ ಮಾಡಬಹುದಾದ ಸುಲಭವಾದ ಬಿಸ್ನೆಸ್ ಬಗ್ಗೆ ತಿಳಿಸಿಕೊಡುತ್ತೇವೆ.

ಈ ಒಂದು ಬಿಸ್ನೆಸ್ ಗೆ ಮಾರ್ಕೆಟ್ ನಲ್ಲಿ ಪ್ರತೀ ದಿನ ಬೇಡಿಕೆ ಇದ್ದೆ ಇರುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಕಾರ್ನ್ ಫ್ಲೋರ್ ತಯಾರಿಸುವ ಬಿಸ್ನೆಸ್ ಅನ್ನು ನೀವು ಮನೆಯಲ್ಲಿಯೇ ಮಾಡಬಹುದು. ಇದಕ್ಕೆ ಪ್ರತೀ ದಿನ ಬೇಡಿಕೆ ಇರುವ ಕಾರಣ ಉತ್ತಮ ಆದಾಯವನ್ನು ಗಳಿಸಬಹುದು. ಪ್ರತೀ ದಿನ ಇದನ್ನು ಗೋಬಿ ಮಂಚೂರಿ , ಕಬಾಕ್ ಮಾಡಲು , ಹಲವು ಬಗೆಯ ಸಿಹಿ ತಿನಿಸುಗಳಲ್ಲಿ ಹಾಗೂ ರೆಸ್ಟೋರೆಂಟ್ ಗಳಲ್ಲಿ ಸಾಕಷ್ಟು ಖಾದ್ಯಗಳ ತಯಾರಿಕೆಯಲ್ಲಿ ಈ ಕಾರ್ನ್ ಫ್ಲೋರ್ ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದಕ್ಕೆ ಸಾಕಷ್ಟು ಹೆಚ್ಚೇ ಬೇಡಿಕೆ ಇದೆ ಎನ್ನಬಹುದು. ಈ ಬಿಸ್ನೆಸ್ ಅನ್ನು ಕಡಿಮೆ ಬಂಡವಾಳದಲ್ಲಿ ಮನೆಯಲ್ಲಿಯೇ ಆರಂಭಿಸಬಹುದು. ಹಾಗಾದ್ರೆ ಈ ಬಿಸ್ನೆಸ್ ಮಾಡಲು ಏನೆಲ್ಲಾ ಸಾಮಗ್ರಿಗಳು / ವಸ್ತುಗಳು ಬೇಕು ಹಾಗೂ ಇದರಿಂದ ಎಷ್ಟು ಆದಾಯ ಗಳಿಸಬಹುದು ಎನ್ನುವುದನ್ನು ನೋಡೋಣ.

ಈ ಬಿಸ್ನೆಸ್ ಆರಂಭಿಸಲು ಮೊದಲು ಫ್ಲೋರ್ ಮಶೀನ್ ಅಂದ್ರೆ ಹಿಟ್ಟನ್ನು ತಯಾರಿಸುವ ಯಂತ್ರ ಬೇಕು. ಈ ಮಶೀನ್ ಬೇಸಿಕ್ ಮಾಡೆಲ್ ಇದರ ಆರಂಭದ ದರ 4000 ದಿಂದ ಆರಂಭ ಆಗುತ್ತದೆ. ಹೆಚ್ಚು ಹಣ ಇದ್ದು, ಹೆಚ್ಚು ಹೂಡಿಕೆ ಮಾಡುವವರು ಇದ್ದರೆ ಹೆಚ್ಚು ಹಣ ಕೊಟ್ಟು ದೊಡ್ಡ ಮಶೀನ್ ಕೊಂಡುಕೊಳ್ಳಬಹುದು. ಇದಕ್ಕೆ ಇನ್ನು ಕಚ್ಚಾವಸ್ತುವಾಗಿ ಜೋಳ ಬೇಕಾಗುತ್ತದೆ. ಜೋಳ ಪ್ರತೀ ಕೇಜಿಗೆ 12 ರಿಂದ 13 ರುಪಾಯಿಯವರೆಗೆ ದೊರೆಯುತ್ತದೆ. ಇನ್ನು ಈ ಮಶೀನ್ ಬಳಸಿ ಕಾರ್ನ್ ಫ್ಲೋರ್ ತಯಾರಿಸುವ ವಿಧಾನ ಹೇಗೆ ಎಂದು ನೋಡುವುದಾದರೆ, ಈ ಮಶೀನ್ ಕೆಲಸ ಮಾಡಲು ವಿದ್ಯುತ್ ಪೂರೈಕೆ ಬೇಕಾಗುತ್ತದೆ. ಇದಕ್ಕೆ ಸ್ವಚ್ಚ ಮಾಡಿದ ಜೋಳವನ್ನು ಮಶೀನ್ ನ ಮೇಲೆ ಜೋಳ ಹಾಕಲು ಇದ್ದ ಜಾಗದಲ್ಲಿ ಹಾಕಬೇಕು. ಜೋಳ ಹಾಕಿದ ನಂತರ ಮಶೀನ್ ನಲ್ಲಿ ಕೆಲವು ಸೆಟ್ಟಿಂಗ್ ಮಾಡಿಕೊಂಡು ಕಾರ್ನ್ ಫ್ಲೋರ್ ತಯಾರಿಸಬಹುದು.

ಇನ್ನು ಇದರಿಂದ ನಮಗೆ ದೊರೆಯುವ ಲಾಭ ಏನೂ? ಎಂದು ನೋಡುವುದಾದರೆ , ಜೋಳ ನಮಗೆ ಒಂದು ಕೆಜಿಗೆ ಹದಿಮೂರು ರೂಪಾಯಿಯ ಹಾಗೆ ದೊರೆಯುತ್ತದೆ. ಇದರ ಸಾಗಾಣಿಕಾ ವೆಚ್ಚ ಹಾಗೂ ಇನ್ನಿತರ ಖರ್ಚು ಸೇರಿ ಏಳು ರೂಪಾಯಿ ಆಗುತ್ತದೆ. ಒಂದು ಕೇಜಿ ಕಾರ್ನ್ ಫ್ಲೋರ್ ತಯಾರಿಸಲು ಒಟ್ಟೂ ಇಪ್ಪತ್ತು ರೂಪಾಯಿ ಖರ್ಚು ಬೀಳುತ್ತದೆ. ಹಾಗೆ ಇದನ್ನ ಹೊಲ್ಸೆಲ್ ಆಗಿ ಮೂವತ್ತು ರೂಪಾಯಿಗೆ ಮಾರಾಟ ಮಾಡಬೇಕು. ಹೀಗೇ ಮಾಡಿದರೆ ಪ್ರತೀ ಕೇಜಿ ಕಾರ್ನ್ ಫ್ಲೋರ್ ಮೇಲೆ ನಿಮಗೆ ಹತ್ತು ರೂಪಾಯಿ ಲಾಭ ದೊರೆಯುತ್ತದೆ. ಈ ರೀತಿ ದಿನಕ್ಕೆ ಮುನ್ನೂರು ಕೇಜಿ ಕಾರ್ನ್ ಫ್ಲೋರ್ ತಯಾರಿಸಿದರೆ ಮೂರುಸಾವಿರ ರೂಪಾಯಿ ಹಣ ಗಳಿಸಬಹುದು ಹಾಗೂ ತಿಂಗಳಿಗೆ ತೊಂಭತ್ತು ಸಾವಿರದವರೆಗೆ ಹಣವನ್ನು ಗಳಿಸಬಹುದು. ಈ ರೀತಿಯಾಗಿ ಸುಲಭವಾಗಿ ಮನೆಯಲ್ಲಿಯೇ ಕುಳಿತು ಬೇಡಿಕೆ ಜಾಸ್ತಿ ಇರುವ ಕಾರ್ನ್ ಫ್ಲೋರ್ ಬಿಸ್ನೆಸ್ ಮಾಡಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!