2023 ರಲ್ಲಿ 2BHK ಮನೆ ಕಟ್ಟಿಸಲು ತಗಲುವ ವೆಚ್ಚ ಎಷ್ಟು? ಇಲ್ಲಿದೆ ಮಾಹಿತಿ

0 3,596

Home Construction Tips in Kannada: ಪ್ರತಿಯೊಬ್ಬರಿಗೂ ತಮ್ಮದೆ ಆದ ಒಂದು ಸ್ವಂತ ಮನೆ ಕನಸಿನ ಮನೆ ಇರಬೇಕೆಂದು ಬಯಸುತ್ತಾರೆ. ಈಗಿನ ಕಾಲದಲ್ಲಿ ಒಂದು ಮನೆ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ ಒಂದು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹಿರಿಯರು ಹೇಳುತ್ತಿದ್ದರು. ಬೆಂಗಳೂರಿನಂತಹ ಪ್ರದೇಶದಲ್ಲಿ ಗ್ರೌಂಡ್ ಫ್ಲೋರ್ ನಲ್ಲಿ ಡಬಲ್ ಬೆಡ್ ರೂಮ್ ಮನೆಯನ್ನು ಕಡಿಮೆ ಬೆಲೆಯಲ್ಲಿ ಹೇಗೆ ನಿರ್ಮಾಣ ಮಾಡಬಹುದು ಅದರ ಸಂಪೂರ್ಣ ಖರ್ಚು ವೆಚ್ಚಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಡಬಲ್ ಬೆಡ್ ರೂಮ್ ಮನೆಯಾಗಿದ್ದು ಒಂದು ಸಾವಿರ ಸ್ಕ್ವೇರ್ ಫೀಟ್ ಅಳತೆಯನ್ನು ಹೊಂದಿದೆ. ಗ್ರೌಂಡ್ ಫ್ಲೋರ್ ನಲ್ಲಿ ಈ ಮನೆಯನ್ನು ಕಟ್ಟಬಹುದು. ಈ ಮನೆಯನ್ನು ಕಾಂಟ್ರಾಕ್ಟರ್ ಅಥವಾ ಕಂಪನಿಗೆ ಕಟ್ಟಲು ಕೊಟ್ಟರೆ ಹಣದಲ್ಲಿ ಸ್ವಲ್ಪ ಹೆಚ್ಚಾಗಬಹುದು. ಈ ಮನೆಯನ್ನು ಕಟ್ಟಲು ಬೇಕಾದಂತಹ ಕೆಲವು ಬೆಲೆಗಳು ಬೆಂಗಳೂರಿಗೆ ಸಂಬಂಧಪಟ್ಟದ್ದು ಆಗಿರುತ್ತದೆ ಉಳಿದ ಕಡೆಗಳಲ್ಲಿ ಹೆಚ್ಚು ಕಡಿಮೆ ಬೆಲೆಗಳಲ್ಲಿ ಸಿಗುತ್ತದೆ. ಮನೆಗೆ ಕಾಂಕ್ರೀಟ್ ಸಾಲಿಡ್ ಬಾಕ್ಸ್ ಗಳನ್ನು ಯುಪಿವಿಸಿ ವಿಂಡೋಸ್ ಗಳನ್ನು ಹಾಗೂ ಮರಳಿನ ಬದಲು ಎಂ ಸ್ಯಾಂಡ್ ಅನ್ನು ಬಳಸಲಾಗಿದೆ.

ಮೊದಲು ಫೌಂಡೇಶನ್ ನಲ್ಲಿ ಅರ್ಥ ವರ್ಕ್ ಹಾಗೂ ಎಕ್ಸ್ ಕವೇಷನ್ ಗೆ 15,000 ರೂಪಾಯಿ ಲೇಯರಿಂಗ್ ಎಂಡ್ ಕ್ಯೂರಿಂಗ್ ಕಾಂಕ್ರೀಟ್ 18,000 ರೂಪಾಯಿ ಆಗುತ್ತದೆ, ಪ್ರೊವೈಡಿಂಗ್ ಎಂಡ್ ಕನ್ಸ್ಟ್ರಕ್ಷನ್ ಎಸ್ ಎಸ್ ಎಮ್ ಗೆ 40,000 ರೂಪಾಯಿ ಪ್ರೊವೈಡಿಂಗ್ ಎಂಡ್ ಲೇಯರಿಂಗ್ ಕಾಂಕ್ರೀಟ್ ಇದರಲ್ಲಿ ಪೂಟ್ಟಿಂಗ್ 80000 ರೂಪಾಯಿ, ಕಾಲಂ 12,000 ರೂಪಾಯಿ ಕ್ಲೆಂತ್ ಬೀನ್ 20,000 ರೂಪಾಯಿ ಒಟ್ಟು 1,85,000 ರೂಪಾಯಿ ಫೌಂಡೇಷನ್ ಗೆ ಬೇಕಾಗುತ್ತದೆ.

ಇದರ ನಂತರ ಸ್ಟೀಲ್ ಸ್ಟ್ರಕ್ಚರ್ ಪ್ರೊವೈಡಿಂಗ್ ಫ್ಯಾಬ್ರಿಕೇಟಿಂಗ್ ಸ್ಟೀಲ್ ಪೂಟ್ಟಿಂಗ್ 30000 ರೂಪಾಯಿ, ಕಾಲಂ ಒಂಬತ್ತು ಸಾವಿರ ರೂಪಾಯಿ ಕ್ಲೆಂತ್ ಬೀನ್ 11,000 ರೂಪಾಯಿ ಒಟ್ಟು ಸ್ಟೀಲ್ ಸ್ಟ್ರಕ್ಚರ್ 50,000 ರೂಪಾಯಿಯಲ್ಲಿ ಮುಗಿಯುತ್ತದೆ. ನಂತರ ರೂಫಿಂಗ್ ಇದರಲ್ಲಿ ಪ್ರೊವೈಡಿಂಗ್ ಎಂಡ್ ಲೇಯಿಂಗ್ ಬೇಸ್ 32,000 ರೂಪಾಯಿ ಪ್ರೊವೈಡಿಂಗ್ ಮತ್ತು ಲೇಯಿಂಗ್ ಕಾಂಕ್ರೀಟ್ ಇದರಲ್ಲಿ ಕಾಲಂ 20,000 ರೂಪಾಯಿ ಭೀಮ್ 19000 ರೂಪಾಯಿ, ಸ್ಲಾಬ್ ಹನ್ನೆರಡು ಸಾವಿರ ರೂಪಾಯಿ, ಲಿಂಟಲ್ 11,000 ರೂಪಾಯಿ ಸಜ್ಜಾ 31,000 ರೂಪಾಯಿ, ಸ್ಟೇರ್ ಕೇಸ್ 22,000 ರೂಪಾಯಿ ಒಟ್ಟಾರೆಯಾಗಿ ರೂಫಿಂಗ್ 1,47,000 ರೂಪಾಯಿಯಲ್ಲಿ ಮುಗಿಯುತ್ತದೆ. ಬಿಲ್ಡಿಂಗ್ ನ ಬಾಡಿ ಅಂತನೆ ಹೇಳಬಹುದಾದ ಸೂಪರ್ ಸ್ಟ್ರಕ್ಚರ್ ಕಾಲಂ 24000 ರೂಪಾಯಿ, ಭೀಮ್ 35000 ರೂಪಾಯಿ, ಸ್ಲಾಬ್ 48,000 ರೂಪಾಯಿ, ಲಿಂಟೆಲ್ 12000 ರೂಪಾಯಿ, ಚಜ್ಜಾ 5000 ರೂಪಾಯಿ , ಸ್ಟೇರ್ ಕೇಸ್ 36000 ರೂಪಾಯಿ ಒಟ್ಟಾರೆಯಾಗಿ ಸೂಪರ್ ಸ್ಟ್ರಕ್ಚರ್ 1,60,000 ರೂಪಾಯಿಗೆ ಮುಗಿಯುತ್ತದೆ.

ನಂತರ ವಾಲ್ ಕನ್ಸಟ್ರಕ್ಷನ್ ಮುಖ್ಯವಾಗಿದೆ ಆರು ಇಂಚಿನ ಥಿಕ್ ಸಿಮೆಂಟ್ ಬ್ಲಾಕ್ 70 ಸಾವಿರ ರೂಪಾಯಿಗೆ ಸಿಗುತ್ತದೆ, ನಾಲ್ಕ್ ಇಂಚಿನ ಥಿಕ್ ಸಿಮೆಂಟ್ ಬ್ಲಾಕ್ 45,000 ರೂಪಾಯಿಗೆ ಒಟ್ಟಾರೆಯಾಗಿ 1,15,000 ರೂಪಾಯಿಗೆ ಸಿಗುತ್ತದೆ. ನಂತರ ಫ್ಲೋರಿಂಗ್ ಅಂದರೆ ಮನೆಯ ನೆಲ ವಿಟ್ರಿಫೈಡ್ ಟೈಲ್ಸ್ 90,000 ರೂಪಾಯಿಗೆ ಸಿಗುತ್ತದೆ ಇನ್ನು ವಾಲ್ ಟೈಲ್ಸ್ ಗೆ ಬಂದರೆ ಅಡುಗೆ ಮನೆಗೆ 4,000 ಟಾಯ್ಲೆಟ್ ಗೆ 18000 ಬಾತ್ರೂಮ್ ಗೆ 4,000 ಒಟ್ಟಾರೆಯಾಗಿ 26 ಸಾವಿರ ರೂಪಾಯಿಯಲ್ಲಿ ವಾಲ್ ಟೈಲ್ಸ್ ಮುಗಿಯುತ್ತದೆ.

ಇನ್ನು ಮನೆಯ ಉಡನ್ ವರ್ಕ್ ಗೆ ಬಂದರೆ ಬಾಗಿಲು ಮೇನ್ ಡೋರ್ ಹಾಗೂ ಪೂಜಾ ರೂಮಿನ ಬಾಗಿಲಿಗೆ 70,000 ರೂಪಾಯಿ ಇತರೆ ಬಾಗಿಲುಗಳಿಗೆ 40,000 ರೂಪಾಯಿ ಇನ್ನು ಕಿಟಕಿಗಳಿಗೆ ಯುಪಿವಿಸಿ ಅಳವಡಿಸಿದರೆ 2 ಲಕ್ಷ ರೂಪಾಯಿ ಆಗುತ್ತದೆ, ಅಲ್ಯೂಮಿನಿಯಂ ವಿಂಡೋಸ್ ಹಾಕಿದರೆ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದೆ ಒಟ್ಟಾರೆಯಾಗಿ 3,10,000 ರೂಪಾಯಿಯಲ್ಲಿ ಮುಗಿಯುತ್ತದೆ. ಕೊನೆಯ ಹಂತ ಅಂತಲೆ ಹೇಳಬಹುದು ಮನೆಯ ಪೇಂಟಿಂಗ್ ಎಕ್ಸ್ ಟೀರಿಯರ್ ಪೇಂಟಿಂಗ್ 30,000 ರೂಪಾಯಿ, ಇಂಟೀರಿಯರ್ ಪೇಂಟಿಂಗ್ ಗೆ 70,000 ರೂಪಾಯಿ ಒಟ್ಟಾರೆಯಾಗಿ ಪೇಂಟಿಂಗ್ ಗೆ 1,00,000 ರೂಪಾಯಿಯಲ್ಲಿ ಮುಗಿಯುತ್ತದೆ.

Home Construction Tips in Kannada

ಇನ್ನು ಪ್ಲಾಸ್ಟರಿಂಗ್ ವಿಚಾರ ನೋಡುವುದಾದರೆ ಸೀಲಿಂಗ್ 33000 ರೂಪಾಯಿ, ಇಂಟರ್ನಲ್ ವಾಲ್ಸ್ 67000 ರೂಪಾಯಿ, ಎಕ್ಸ್ಟ್ರರ್ನಲ್ ವಾಲ್ಸ್ 47,000 ರೂಪಾಯಿ ಒಟ್ಟಾರೆಯಾಗಿ ಪ್ಲಾಸ್ಟರಿಂಗ್ 1,50,000 ರೂಪಾಯಿಯಲ್ಲಿ ಮುಗಿಯುತ್ತದೆ. ಇಲೆಕ್ಟ್ರಿಕಲ್ ವರ್ಕ್ 1,80,000 ರೂಪಾಯಿ, ಪ್ಲಂಬಿಂಗ್ ವರ್ಕ್ 1,80,000 ರೂಪಾಯಿ ಒಟ್ಟಾರೆಯಾಗಿ 3,60,000 ರೂಪಾಯಿಯಲ್ಲಿ ಮುಗಿಯುತ್ತದೆ. ಈ ರೀತಿಯ ಮನೆ ಕಟ್ಟಿದರೆ 16 ಲಕ್ಷದ 93,000 ರೂಪಾಯಿಯಲ್ಲಿ ಡಬಲ್ ಬೆಡ್ ರೂಮ್ ಮನೆ ಗ್ರೌಂಡ್ ಫ್ಲೋರ್ ನಲ್ಲಿ ಕಟ್ಟಬಹುದು.

ಇವುಗಳನ್ನು ಹೊರತುಪಡಿಸಿ ಪವರ್ ಬಿಲ್, ವಾಟರ್ ಬಿಲ್ ಸಣ್ಣಪುಟ್ಟ ಟ್ರಾನ್ಸ್ಫರ್, ಫುಡ್, ಪ್ಲಾನ್, ಟಿ, ಕ್ಯೂರಿಂಗ್ ಇಂತಹ ಕೆಲಸಗಳಿಗೆ ಅಡಿಷನಲ್ ಒಂದು ಲಕ್ಷ ರೂಪಾಯಿ ಖರ್ಚಾಗಬಹುದು ಹತ್ತಿರ ಹತ್ತಿರ ಮನೆ 17,93,000 ರೂಪಾಯಿಯಲ್ಲಿ ಮನೆ ನಿರ್ಮಾಣವಾಗುತ್ತದೆ. 1693 ರೂಪಾಯಿ ಪರ್ ಸ್ಕ್ವೇರ್ ಫೀಟ್ ಈ ಮನೆಗೆ ಬಿದ್ದಂತಾಗುತ್ತದೆ. ಈಗಿನ ಕಾಲದ ಕನ್ಸ್ಟ್ರಕ್ಷನ್ ವಸ್ತುಗಳಿಗೆ ಬೆಲೆ ಅಧಿಕವಾಗಿರುವುದರಿಂದ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಾಣ ಮಾಡುವುದು ಕಷ್ಟವೇ ಸರಿ. ಈ ಮನೆ ನಿಮಗೆ ಇಷ್ಟವಾಗಬಹುದು ನೀವು ಕೂಡ ಮನೆ ಕಟ್ಟಬೇಕಾದರೆ ಈ ಮಾಹಿತಿ ನಿಮಗೆ ಖಂಡಿತ ಉಪಯೋಗಕ್ಕೆ ಬರುತ್ತದೆ.

Leave A Reply

Your email address will not be published.