ಮನೆ ಪ್ರತಿಯೊಬ್ಬ ವ್ಯಕ್ತಿಯ ನೆಲೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಮನೆ ಅವಶ್ಯಕವಾಗಿದೆ. ಈಗಿನ ಕಾಲದಲ್ಲಿ ಒಂದು ಮನೆಯ ನಿರ್ಮಾಣವೆಂದರೆ ಒಂದು ವ್ಯಕ್ತಿಯ ಜೀವಿತಾವಧಿಯ ದುಡಿಮೆಯೇ ಬೇಕಾಗುತ್ತದೆ. ಈಗಿನ ಕಾಲದಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಲು ಅಧಿಕ ಹಣ ಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂಬ ಕನಸನ್ನು ಹೊಂದಿರುತ್ತಾನೆ. ಹಾಗಿದ್ದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಎಲ್ಲರಿಗೂ ಯೋಗ್ಯವಾಗಿ ಕಾಣುವ ರೀತಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಉನ್ನತಿ ಈಕೋ ಫ್ರಂಡ್ಲಿ ಹೋಮ್ ಫಾಬ್ರಿಕೇಟೆಡ್ ಕಂಪನಿಯು ಕೆಲಸ ನಿರ್ವಹಿಸುತ್ತಿದೆ. ಈ ಕಂಪನಿಯು ಚಿಕ್ಕಮಂಗಳೂರಿನಲ್ಲಿ ಸ್ಥಾಪಿತವಾಗಿದೆ. ಈ ಕಂಪನಿಯನ್ನು ಭಾಗ್ಯದೇವ್ ಎನ್ನುವವರು ನಡೆಸುತ್ತಿದ್ದಾರೆ. ಈ ಕಂಪನಿಯ ಕಾರ್ಯ ಅತೀ ಕಡಿಮೆ ಸಮಯದಲ್ಲಿ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಕೊಡುವುದಾಗಿದೆ. ಇವರು ನಿರ್ಮಿಸುವ ಮನೆಗಳನ್ನು ಆಸ್ಟ್ರೇಲಿಯನ್ ಬೆಸ್ಡ್ ಆಗಿರುವಂತಹ ರೇಪಿಡ್ ವಾಲ್ ಟೆಕೆನೋಲಾಜಿ ಮೂಲಕ ಮಾಡಲಾಗುತ್ತದೆ.
ಇವರು ಈ ಮನೆಗಳನ್ನು ಫ್ರೀ ಕೋಸ್ಟಡ್ ಕಾಂಕ್ರಿಟ್ ಮೂಲಕ ನಿರ್ಮಾಣ ಮಾಡುತ್ತಾರೆ. ಅಂದರೆ ಮೊದಲೇ ತಯಾರಿಸಿದ ಕಾಂಕ್ರಿಟ್ ವಾಲ್ಗಳನ್ನು ಜೋಡಣೆ ಮಾಡುವ ಮೂಲಕ ಮನೆ ನಿರ್ಮಾಣ ಮಾಡುತ್ತಾರೆ. ಕಡಿಮೆಯೆಂದರೆ 70000ರೂ ಗಳಿಂದಲೂ ಮನೆಯನ್ನು ನಿರ್ಮಾಣ ಮಾಡುತ್ತಾರೆ. ಮನೆಯ ನಿರ್ಮಾಣದ ದರವು ಅವರು ಬಯಸುವ ಮನೆಯ ಆಯದ ಮೇಲೆ ನಿರ್ಧಾರವಾಗುತ್ತದೆ. ಅಂದರೆ 400 ರಿಂದ 500 ಸ್ಕ್ವೇರ್ ಫೂಟ್ ಇರುವ ಮನೆ ಒಂದೂವರೆ ಲಕ್ಷದವರೆಗೆ ವೆಚ್ಚವಾಗುತ್ತದೆ. ಇನ್ನು 2ಬಿಎಚ್ ಕೆ ಮನೆಯಾದರೆ 3ಲಕ್ಷ ದವರೆಗೆ ಬೇಕಾಗುತ್ತದೆ. ಫ್ರೀ ಫಾಬ್ರಿಕೇಟೆಡ್ ಮನೆಯನ್ನು ನಿರ್ಮಾಣ ಮಾಡಲು ಮೊದಲು ಬೇಕಾಗುವುದು ಸರಿಯಾದ ಬೇಸಮೆಂಟ್ ಆಗಿದೆ.
ಆಯಾ ಜಾಗಕ್ಕೆ ಅನುಗುಣವಾಗಿ ಬೇಸ್ಮೆಂಟ್ ಅನ್ನು ಸರಿಯಾಗಿ ಕಾಂಕ್ರೀಟ್ ಹಾಕುವುದರ ಮೂಲಕ ರೆಡಿ ಮಾಡಿಕೊಳ್ಳಬೇಕು. ಅದಾದನಂತರ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ಪಾರ್ಟಿಷನ್ ಗಳನ್ನು ಕಾಂಕ್ರೀಟ್ ಗಳ ಮೂಲಕ ತಯಾರಿಸಿ ಕೊಳ್ಳುತ್ತಾರೆ. ನಂತರ ಅದನ್ನು ತಂದು ಸ್ಕ್ರೂ ಗಳ ಮೂಲಕ ಜೋಡಣೆ ಮಾಡುತ್ತಾರೆ. ನಂತರ ಮನೆಯನ್ನು ಸರಿಯಾಗಿ ನಿರ್ಮಾಣ ಮಾಡಿಕೊಡುತ್ತಾರೆ. ಈ ತರಹದ ನಿರ್ಮಾಣದ ಮನೆಗಳು ಸರಿ ಸುಮಾರು 200 ರಿಂದ 250 ವರ್ಷಗಳ ವರೆಗೆ ಬಾಳಿಕೆ ಬರುತ್ತದೆ. ಇಂತಹ ಮನೆಗಳನ್ನು ಅತಿ ಬಡವರು ಕೂಡ ಕಟ್ಟಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಈ ಕಂಪನಿಯು ಅದ್ಬುತವಾದ ಕಾರ್ಯವನ್ನು ಮಾಡುತ್ತಿದೆ.