ಸ್ವಂತ ಮನೆ ಕಟ್ಟುವುದು ಪ್ರತಿ ಒಬ್ಬ ವ್ಯಕ್ತಿಯ ಆಸೆ ಮತ್ತು ಜೀವನದ ಬಹು ದೊಡ್ಡ ಕನಸು. ಈಗಿನ ಕಾಲಮಾನಕ್ಕೆ ತಕ್ಕಂತೆ ಎಲ್ಲಾ ಸೌಕರ್ಯ ಇರುವ ಮನೆ ಕಟ್ಟಬೇಕು ಎಂದರೆ ಅದು ತುಂಬ ಕಷ್ಟ ಹೆಚ್ಚಿನ ಹಣ ಖರ್ಚಾಗುತ್ತದೆ. ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ ಹೋದಷ್ಟು ಬೆಲೆ ಏರಿಕೆ ಆಗುತ್ತಲೇ ಹೋಗುತ್ತದೆ. ಮನೆ ಕಟ್ಟಲು ಎಸ್ಟಿಮೇಟ್ ರೇಟ್ (estimate rate) ಇದ್ದರೇ, ಅದಕ್ಕಿಂತ ಇನ್ನು ಹೆಚ್ಚಾಗಿ ಖರ್ಚು ವೆಚ್ಚ ಎದುರಾಗುತ್ತದೆ. ಮೊದಲಿಗೆ ಸೈಟ್ ಖರೀದಿ ಮಾಡಿ ನಂತರ ಮನೆ ನಿರ್ಮಾಣದ ಕೆಲಸ ಕಾರ್ಯಗಳನ್ನು ಶುರು ಮಾಡಬೇಕು. ಇಂದು ನಾವು 14 ಲಕ್ಷಕ್ಕೆ ಮನೆ ನಿರ್ಮಾಣ ಮಾಡುವುದರ ಮಾಹಿತಿ ಪಡೆಯೋಣ.

ಹೌದು 14 ಲಕ್ಷದಲ್ಲಿ  ಒಂದು ಅಂತಸ್ತಿನ ಮನೆ ನಿರ್ಮಾಣ ಮಾಡಬಹುದು ಅದು ಹೇಗೆ ಅಂತ ತಿಳಿಯೋಣ ಬನ್ನಿ :- ಸೈಟ್’ಗೆ ತಕ್ಕಂತೆ ಮನೆಯ ಹೊರಗೆ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ನೀರು ಶೇಖರಣೆ ಮಾಡಲು ಸಂಪು. ಗೋಡೆಗೆ ಟೈಲ್ಸ್ ತಕ್ಕ ಹಾಗೆ ಸಣ್ಣ ಸಣ್ಣ ಟೈಲ್ಸ್. ಮನೆಯ ಸುತ್ತ ಕಾಂಪೌಂಡ್ ಜೊತೆಗೆ ಕಬ್ಬಿಣದ ಆಕರ್ಷಕ ಗೇಟ್ ಇರುತ್ತದೆ.

ಇನ್ನು, ಮನೆಯ ಒಳಗೆ ಹೋದರೆ ಆಕರ್ಷಕ ಕೆತ್ತನೆ ಉಳ್ಳ ಬಾಗಿಲು ಹಾಗು ಕಿಟಕಿ. ನಡುಮನೆಯಲ್ಲಿ ಸಿಂಪಲ್ ಆಗಿರುವ ವುಡನ್ ಟಿವಿ ಷೋಕೇಸ್ ( showcase ), ಮರದ ಬಾಕ್ಸ್ ನಲ್ಲಿ ಪುಟ್ಟ ದೇವರ ಮನೆಗೆ ಅನುಕೂಲಕರ ಜಾಗ ಮಾಡಲಾಗಿದೆ. ಒಂದು ಬೆಡ್ರೂಮ್ ಅದರಲ್ಲಿ ಬಟ್ಟೆ ಜೋಡಿಸಿ ಇಡಲು ವುಡನ್ ಕಬೋರ್ಡ್ (cubboard) ಕಿಟಕಿ ಮತ್ತು ಸಣ್ಣ ಸಜ್ಜೆ ಹಾಗು ಅದಕ್ಕೆ ಹೊಂದುವ ವಾಶ್ ರೂಮ್ ಮತ್ತು ಸ್ನಾನದ ಕೋಣೆಗೆ ಗೀಸರ್ ಇನ್ನು ಅದರಲ್ಲಿ ಕೂಡ ಟೈಲ್ಸ್ ಹಾಕಲಾಗಿದೆ, ಜೊತೆಗೆ ಅದರ ಪಕ್ಕದಲ್ಲಿ ಸಣ್ಣ ವಾಶ್ ಬೇಸಿನ್ (wash basin)

ಅಡಿಗೆ ಮನೆಯಲ್ಲಿ ಕೂಡ ವಸ್ತುಗಳನ್ನು ಜೋಡಿಸಿ ಇಡಲು ಎಲ್ಲಾ ವುಡನ್ ಕಬೋರ್ಡ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಒಂದು ವೆಂಟಿಲೇಟರ್, ಸಿಂಕ್ ಹಾಗು ಗ್ಯಾಸ್ ಸ್ಟವ್ ಇಡಲು ಸ್ಥಳ ಮಾಡಿಕೊಡಲಾಗುತ್ತದೆ. ಮನೆಗೆ ಪೂರ ಗ್ರಾನೈಟ್ ( granite ) ಹಾಕಲಾಗಿದೆ.ಹೊರಗೆ ಬಟ್ಟೆ ಒಗೆಯಲು ಕಲ್ಲಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಹಾಗೆ ಕಬ್ಬಿಣದ ಮೆಟ್ಟಿಲ ಸಹಾಯದಿಂದ ಮಹಡಿಗೆ ಹೋಗಬಹುದು. ಇನ್ನು ಮನೆಗೆ ಅಗತ್ಯ ಇರುವ ಎಲ್ಲಾ ಫ್ಯಾನ್ ಹಾಗು ಎಲೆಕ್ಟ್ರಿಕಲ್ ( electrical ) ವ್ಯವಸ್ಥೆಯನ್ನು ಚೆನ್ನಾಗಿ ಮಾಡಲಾಗಿದೆ. ಜೊತೆಗೆ ಮಹಡಿಯ ಮೇಲೆ ನೀರಿನ ಸಿಂಟ್ಯಾಕ್ಸ್ (syntax) ಈ ರೀತಿಯ ಸೌಲಭ್ಯ ಇಷ್ಟ ಪಡುವವರು ಮತ್ತೆ ಕಡಿಮೆ ದುಡ್ಡಿನ ಒಂದು ಚೆಂದದ ಒಂದು ಅಂತಸ್ತಿನ ಮನೆ ನಿರ್ಮಾಣ ಮಾಡಲು ಬಯಸುವ ಜನರು ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಸಂಪರ್ಕ ಮಾಡಿ.ವಿಜಯ್ ಕುಮಾರ್ 9342989899 ಚಿನ್ನಸ್ವಾಮಿ 9886094187

By

Leave a Reply

Your email address will not be published. Required fields are marked *