ಬುದ್ದಿವಂತಿಕೆಯಿಂದ ಇಡೀ ಊರನ್ನೇ ಶ್ರೀಮಂತ ಗೊಳಿಸಿದ ವ್ಯಕ್ತಿ, ಇವರು ಮಾಡಿದ್ದೇನು ಗೊತ್ತೇ ನಿಜಕ್ಕೂ ನೀವು ಶಬ್ಬಾಸ್ ಅಂತೀರಾ!

0 21,990

ಈಗಿನ ಕಾಲದಲ್ಲಿ ತಾನು ಶ್ರೀಮಂತ ವ್ಯಕ್ತಿ ಆಗಬೇಕು ತನ್ನವರು ಶ್ರೀಮಂತವಾಗಿ ಇರಬೇಕು ಎಂದು ಬಯಸಿ ಸಾಕಶ್ಟು ಆಸ್ತಿ ಹಣ ಸಂಪಾದನೆ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಂದು ಊರಿನ ಸಲುವಾಗಿ ಇಡೀ ಊರನ್ನೇ ಶ್ರೀಮಂತ ಮಾಡಿದ್ದಾನೆ. ಕೇಳಿದರೆ ಆಶ್ಚರ್ಯ ಎನಿಸಬಹುದು ಇಡೀ ಊರನ್ನು ಒಬ್ಬನೇ ಒಬ್ಬ ವ್ಯಕ್ತಿ ಶ್ರೀಮಂತಗೊಳಿಸೋಕೆ ಹೇಗೆ ಸಾಧ್ಯ ಅಂತಾ ಆದರೆ ಇದು ಸತ್ಯವೇ. ಒಬ್ಬ ವ್ಯಕ್ತಿ ಇಡೀ ಊರನ್ನು ಹೇಗೆ ಶ್ರೀಮಂತ ಊರಾಗಿ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆ ಒಂದು ಹಳ್ಳಿ ಅಂದರೆ ಜನರು ದೂರದಿಂದಲೇ ಕೈ ಮುಗಿಯುತ್ತಾ ಇದ್ದರು. ಮಧ್ಯಪಾನ, ಅಪರಾಧಗಳಿಗೆ ಅದು ಕುಖ್ಯಾತಿ ಪಡೆದ ಊರು ಅದರ ಜೊತೆಗೆ ಬಡತನ, ಬರ ಬೇರೆ ತಾಂಡವ ಆಡುತ್ತಾ ಇದ್ದ ಒಂದು ಹಳ್ಳಿ ಒಟ್ಟಿನಲ್ಲಿ ಹೇಳುವುದಾದರೆ ಈ ಹಳ್ಳಿ ಯಾರಿಗೂ ಯಾವುದಕ್ಕೂ ಬೇಡವಾಗಿದ್ದ ಹಳ್ಳಿ. ಇಂತಹ ಹಳ್ಳಿಯನ್ನು ಬದಲಾಯಿಸೋದು ತುಂಬಾ ಕಷ್ಟ. ಈ ರೀತಿಯ ಒಂದು ಹಳ್ಳಿ ಇರುವುದು ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಹಿವರೆ ಬಾಜಾರ್ ಎಂಬ ಹಳ್ಳಿ. ಆ ಹಳ್ಳಿಯ ಸ್ಥಿತಿ ಬಹಳ ಕೆಟ್ಟದಾಗಿ ಇದ್ದಿತ್ತು. ಅಂಥಹ ಬಡ ಹಳ್ಳಿಯನ್ನ ನಾವ್ಯಾರೂ ನೋಡೇ ಇಲ್ಲವೇನೋ ಅಷ್ಟು ಕೆಟ್ಟದಾಗಿತ್ತು. ಇದೇ ಸಮಯದಲ್ಲಿ ಹಳ್ಳಿಗೆ ಪೋಪಟರಾವ ಪವಾರ ಬರುತ್ತಾರೆ ಪದವಿ ಪಡೆದು ಹಳ್ಳಿಗೆ ಮರಳಿದ ಪೋಪಟರಾವ ಪವಾರರನ್ನು ಜನ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಳುತ್ತಾರೆ. ಆ ಹಳ್ಳಿಯ ಜನ ನೋಡಿದ ಅತೀ ಹೆಚ್ಚು ಓದಿದ ವ್ಯಕ್ತಿ ಎಂದರೆ ಈ ಪೋಪಟರಾವ ಪವಾರ ಮಾತ್ರ. ಈ ವಿದ್ಯಾವಂತರನ್ನು ಜನ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಳುವುದು ಮಾತ್ರವಲ್ಲದೆ ಅವನನ್ನು ಗೆಲ್ಲಿಸಲೂ ಗೆಲ್ಲಿಸುತ್ತಾರೆ.

ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಮಹತ್ವದ ಹೆಜ್ಜೆಯನ್ನಿಟ್ಟ ಪೋಪಟರಾವ ಪವಾರ ನಾಲ್ಕನೇ ತರಗತಿ ತನಕ ಮಾತ್ರ ಇದ್ದ ಶಿಕ್ಷಣವನ್ನು 10ನೇ ತರಗತಿ ತನಕ ಹೆಚ್ಚಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಮಕ್ಕಳು ನಾಲ್ಕನೇ ತರಗತಿಯ ನಂತರದ ಕಲಿಕೆಗೆ ಬೇರೆಕಡೆ ಹೋಗುವ ತಲೆನೋವು ತಪ್ಪಿ ಸುಲಭವಾಗಿ ಮಕ್ಕಳಿಗೆ ಶಿಕ್ಷಣ ದೊರಕುವಂತಾಯಿತು. ನಂತರ ಜಲ ಸಂರಕ್ಷಣಾ ಯೋಜನೆ ಯನ್ನು ಕೈಗೆತ್ತಿಕೊಳ್ತಾರೆ. ಕೊಳವೆ ಬಾವಿಯನ್ನು ನಿಷೇಧಿಸಿ, ಅಂತರ್ಜಲ ಮಟ್ಟ ಕುಸಿಯದೇ ಇರಲು ತೆರೆದ ಬಾವಿ ನೀರಿನ ಬಳಕೆ ಮಾಡಿ ಎಂದು ಹಳ್ಳಿಗರಿಗೆ ಸಲಹೆ ನೀಡುತ್ತಾರೆ. ಅವರ ಮಾತನ್ನು ಹಳ್ಳಿಗರು ನಿರ್ಲಕ್ಷ್ಯ ಮಾಡದೆ ಹೇಳಿದಂತೆಯೇ ತೆರೆದ ಬಾಯಿಯನ್ನೇ ಬಳಕೆ ಮಾಡಲು ಆರಂಭಿಸುತ್ತಾರೆ.

ಅಂತರ್ಜಲದ ಹೆಚ್ಚಳಕ್ಕೆ ಸುಮಾರು 4000 ಟ್ರಂಚಸ್ ನಿರ್ಮಾಣ ಮಾಡುತ್ತಾರೆ. ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಹಣವನ್ನು ಪಡೆಯುವಂತಹ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸಿ ಮರ ಕಡಿಯುವುದಕ್ಕೆ ಕೂಡಾ ಕಡಿವಾಣ ಹಾಕಿದರು ಹತ್ತು ಲಕ್ಷ ಮರಗಳನ್ನು ನೆಡುವ ಕಾರ್ಯಕ್ಕೆ ಮುಂದಾದರೂ. ಸಾರಾಯಿ ಅಂಗಡಿಗಳನ್ನು ಮುಚ್ಚಿಸಿ 1995ರಲ್ಲಿ ಆದರ್ಶ ಗಾಂವ್ ಯೋಜನೆ ಯಲ್ಲಿ ಈ ಹಳ್ಳಿ ಆದರ್ಶ ಹಳ್ಳಿಯಾಗಿ ಶಹಬ್ಬಾಷ್ ಅನಿಸಿಕೊಂಡಿತ್ತು ಇವತ್ತು ದೇಶದ ಶ್ರೀಮಂತಹಳ್ಳಿಗಳಲ್ಲಿ ಹಿವರೆ ಬಾಜಾರ್ ಕೂಡ ಒಂದು ಅಂದರೆ ಅದಕ್ಕೆ ಕಾರಣ ಪೋಪಟರಾವ ಪವಾರ.

ತಾನು ತನ್ನ ಕುಟುಂಬ ಮಾತ್ರ ಅನ್ನೋ ಯೋಚ್ನೆ ಮಾಡಿ, ನಗರ ಜೀವನ ಬಯಸಿ, ತಮ್ಮ ವಿದ್ಧಾರ್ಹತೆಗೆ ತಕ್ಕಂತ ಕೆಲಸವನ್ನು ಅರಸಿ ಹೋಗಿದ್ದಾರೆ ಅವರೊಬ್ಬರೇ ಉದ್ಧಾರ ಆಗುತ್ತಿದ್ದರು. ಆದರೆ ತಮ್ಮ ವಿದ್ಯೆಯನ್ನ ಹಳ್ಳಿ ಉದ್ಧಾರಕ್ಕೆ ಬಳಸಿದ್ದರಿಂದಾಗಿ, ಅವತ್ತು ಯಾರಿಗೂ ಬೇಡವಾಗಿದ್ದ ಹಳ್ಳಿಯಲ್ಲಿ ಈಗ 60 ಮಿಲಿಯನೇರ್ಸ್ ಗಳಿದ್ದಾರೆ. ಊರಿನಲ್ಲಿ ಡಾಕ್ಟರ್ ಇಲ್ಲ ಆದರೆ ಸುಮಾರು 32ಜನ ಎಂಬಿಬಿಎಸ್ ಮಾಡುತ್ತಿದ್ದಾರೆ. ಅವತ್ತಿನ ಬರ ಪೀಡಿತ ,ಯಾರಿಗೂ ಬೇಡವಾಗಿದೆ ಹಳ್ಳಿ ಇವತ್ತು ಅರವತ್ತು ಮಿಲಿಯನೇರ್ಸ್ ಗಳ ತಾಣ. 55 ವರ್ಷದ ಶಿಕ್ಷಿತ ಪೋಪಟರಾವ ಪವಾರ ಒಂದುಕಾಲದಲ್ಲಿ ಸ್ಮಶಾನದಂತಿದ್ದ ಹಳ್ಳಿಯನ್ನು ಇವತ್ತು ಭೂಲೋಕದ ಸ್ವರ್ಗಮಾಡಿ ಏಕಾಂಗಿಯಾಗಿ ಇಡೀ ಹಳ್ಳಿಯನ್ನು ಬದಲಾಯಿಸಿದರು. ಶಿಕ್ಷಿತರೆಲ್ಲಾ ತಮ್ಮ ತಮ್ಮ ಹಳ್ಳಿ ಉದ್ಧಾರಕ್ಕೆ ಇವರಂತೆ ಶ್ರಮಿಸಿದರೆ ನಮ್ಮ ದೇಶ ಆದಷ್ಟು ಬೇಗ ಉನ್ನತ ಸ್ಥಾನ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಟ್ಟಿನಲ್ಲಿ ಪೋಪಟರಾವ ಪವಾರ ಅವರ ಶ್ರಮ ಮತ್ತು ಸಾಧನೆಯನ್ನು ಮೆಚ್ಚಲೇ ಬೇಕು.

Leave A Reply

Your email address will not be published.