ವಾರಕ್ಕೊಮ್ಮೆಯಾದ್ರೂ ಹಿರೇಕಾಯಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

0 68

ಹಸಿರು ತರಕಾರಿಗಳು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶವನ್ನು ಒಳಗೊಂಡಿರುತ್ತದೆ ಅನೇಕ ತರಕಾರಿಯನ್ನು ಹಸಿಯಾಗಿ ತಿನ್ನಬಹುದು ಹಾಗೆಯೇ ಹಲವು ತರಕಾರಿಯನ್ನು ಬೇಯಿಸಿ ತಿನ್ನಬಹುದಾಗಿದೆ ಅದರಲ್ಲಿ ಹೀರೆಕಾಯಿ ಅನೇಕ ಪೋಷಕಾಂಶವನ್ನು ಒಳಗೊಂಡಿದ್ದು ಅನೇಕ ರೋಗವನ್ನು ತಡೆಗಟ್ಟುವ ಹಾಗೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ

ಹೀರೆಕಾಯಿಯನ್ನು ಸಾಂಬಾರ ಚಟ್ನಿ ಹಾಗೂ ಪಲ್ಯ ಪಕೋಡ ಹೀಗೆ ಅನೇಕ ರೀತಿಯ ಪದಾರ್ಥಗಳನ್ನು ಮಾಡಿ ಸೇವಿಸಬಹುದು. ಪ್ರತಿ ನಿತ್ಯ ಹೀರೆಕಾಯಿ ಸೇವಿಸುವ ಮೂಲಕ ಅನೇಕ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಅನೇಕ ಇಷ್ಟ ಪಟ್ಟು ಸೇವಿಸುವ ತರಕಾರಿಯಲ್ಲಿ ಹೀರೆಕಾಯಿ ಸಹ ಒಂದಾಗಿದೆ ಹೀರೆಕಾಯಿ ಜೀರ್ಣವಾಗದ ಆಹಾರ ಕಣಗಳ ರಕ್ತವನ್ನು ಶುದ್ಧಿಕರಿಸುವ ಸಾಮಥ್ರ್ಯವನ್ನು ಹೊಂದಿದೆ ಆದ್ದರಿಂದ ಯಕೃತ್ತಿನ ಆರೋಗ್ಯ ಮತ್ತು ಪಿತ್ತರಸ ಕಾರ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ ನಾವು ಈ ಲೇಖನದ ಮೂಲಕ ಹೀರೆಕಾಯಿಯ ಪ್ರಯೋಜನವನ್ನು ತಿಳಿದುಕೊಳ್ಳೋಣ.

ಮೂಲವ್ಯಾಧಿ ಸಮಸ್ಯೆಯಿಂದ ಇರುವವರು ಹೀರೆಕಾಯಿ ಗಿಡದ ಬೇರನ್ನು ನುಣ್ಣಗೆ ಅರೆದು ಮೂಲದ ಮೊಳಕೆಗೆ ದಿನವೂ ಹಚ್ಚುವ ಮೂಲಕ ಮೂಲವ್ಯಾಧಿ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಹಾಗೆಯೇ ದೇಹದ ಮೇಲೆ ಆದ ಗಾಯಗಳಿಗೆ ಹೀರೆಕಾಯಿ ಬಳ್ಳಿಯ ಎಲೆಗಳನ್ನು ನುಣ್ಣಗೆ ಅರೆದು ಗಾಯದ ಮೇಲೆ ಹಚ್ಚುತ್ತಾ ಇದ್ದರೆ ಗಾಯ ಬಹು ಬೇಗನೆ ನಿವಾರಣೆ ಆಗುತ್ತದೆ ಹೀರೇಕಾಯಿಯನ್ನು ಅಡುಗೆಯಲ್ಲಿ ಬಳಸುವ ಮೂಲಕ ಮೂಗಿನಲ್ಲಿ ಹಾಗೂ ಆಸ್ತನದಲ್ಲಿ ರಕ್ತ ಸೋರುತ್ತಿದ್ದರೆ ನಿಲ್ಲುತ್ತದೆ ಹಾಗೆಯೇ ಮಧುಮೇಹಿ ರೋಗಿಗಳಿಗೆ ಹೀರೆಕಾಯಿ ಪಲ್ಯವನ್ನು ಮಾಡಿ ಪ್ರತಿ ದಿನ ಸೇವಿಸುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ.

ಹಿರೇಕಾಯಿಯನ್ನು ಪ್ರತಿದಿನ ಸೇವಿಸುವ ಮೂಲಕ ಪಿತ್ತ ಜ್ವರ ನಿವಾರಣೆ ಆಗುತ್ತದೆ ಹಾಗೆಯೇ ಕೆಮ್ಮು ಸಹ ಪರಿಹಾರ ಆಗುತ್ತದೆ ಹಾಗೆಯೇ ಹೀರೆಕಾಯಿ ಸೇವನೆಯಿಂದ ಮೂತ್ರ ವಿಸರ್ಜನೆಯಲ್ಲಿ ಯಾವ ತೊಂದರೆಯೂ ಆಗುವುದಿಲ್ಲ ಲವಣಗಳ ಕೊರತೆಯನ್ನು ನೀಗಿಸುತ್ತದೆ ಯಕೃತ್ತಿನ ಆರೋಗ್ಯ ಮತ್ತು ಪಿತ್ತರಸ ಕಾರ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ ಹೀರೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದ್ದು ತೂಕ ಇಳಿಕೆಗೆ ಸಹಕಾರಿಯಾಗಿದೆ ಹಾಗೆಯೇ ಕಡಿಮೆ ಕ್ಯಾಲೊರಿ ಮತ್ತು ನೀರಿನ ಅಂಶವನ್ನು ಹೊಂದಿದೆ.

ದೇಹದಲ್ಲಿ ಉರಿ ಕಂಡುಬಂದಾಗ ಹೀರೆಕಾಯಿ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆಗೆ ಸೇವಿಸಬೇಕು ಇದರಿಂದ ದೇಹದಲ್ಲಿ ಉರಿ ಕಡಿಮೆ ಆಗಿ ದೇಹ ತಂಪಾಗಿರುತ್ತದೆ ಹಾಗೆಯೇ ದೇಹದ ಯಾವುದೇ ಭಾಗದಲ್ಲಿ ಉರಿ ಕಂಡು ಬಂದಾಗ ಹೀರೆಕಾಯಿ ತಿರುಳನ್ನು ನೀರಿನಲ್ಲಿ ಅರೆದು ಲೇಪಿಸಬೇಕು ಇದರಿಂದ ಸಹ ಉರಿ ಕಡಿಮೆ ಆಗುತ್ತದೆ ಹಾಗೆಯೇ ಅಕ್ಕಿ ತೊಳೆದ ನೀರಿಗೆ ಜೀರಿಗೆ ಪುಡಿ ಕಲ್ಲು ಸಕ್ಕರೆ ಮತ್ತು ಹೀರೆಕಾಯಿಯ ಬೀಜಗಳನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ನೋವು ಕಡಿಮೆ ಆಗುತ್ತದೆ ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ರಕ್ತವನ್ನು ಶುದ್ಧೀಕರಣ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಹೋಗಲಾಡಿಸಿ ರಕ್ತ ಸಂಚಲನವನ್ನು ಉಂಟುಮಾಡುತ್ತದೆ ಹೀರೆಕಾಯಿ ನಾರುಗಳು ನೀರಿನ ಅಂಶ ವಿಟಮಿನ್ ಎ ವಿಟಮಿನ್ ಸಿ ಕಬ್ಬಿಣ ಮೆಗ್ನಿಸಿಯಂ ಮತ್ತು ವಿಟಮಿನ್ ಬಿ ಹೀಗೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಹಾಗಾಗಿ ಹೀರೆಕಾಯಿಯು ತುಂಬಾ ಪ್ರಯೋಜನವನ್ನು ಹೊಂದಿದ್ದು ಅನೇಕ ಜನರಿಗೆ ಹೀರೆಕಾಯಿ ಪ್ರಯೋಜನ ತಿಳಿದು ಇರುವುದಿಲ್ಲ ಮತ್ತು ಎಲ್ಲರು ಹೀರೆಕಾಯಿ ಸೇವಿಸುವ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು .

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.