ಪ್ರತಿ ಹಿಂದೂಗಳ ಮನೆಯಲ್ಲಿ ದೇವರ ಕೊಣೆ ಅನ್ನೋದು ಇದ್ದೆ ಇರುತ್ತದೆ, ದೇವರನ್ನು ಪೂಜಿಸಲು ಬರಿ ದೇವಸ್ಥಾನಕ್ಕೆ ಹೋಗುವುದಲ್ಲದೆ, ಮನೆಯಲ್ಲಿಯೇ ದೇವರ ಫೋಟೋಗಳನ್ನು ಇಟ್ಟು ದೇವರನ್ನು ಪೂಜಿಸುವುದರ ಜೊತೆಗೆ ದೇವರನ್ನು ಸ್ಮರಣೆ ಮಾಡುವುದು ಹಿಂದೂಗಳ ಸಂಪ್ರದಾಯವಾಗಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧವಾಗಲಿ ಅನ್ನೋ ಕಾರಣಕ್ಕೆ ಪ್ರತಿದಿನ ಪೂಜೆಗಳನ್ನೂ ಮಾಡಲಾಗುತ್ತದೆ ಹಾಗೂ ಮಾಡುವಂತ ಕೆಲಸದಲ್ಲಿ ಯಶಸ್ಸು ನೆಮ್ಮದಿ ಸಿಗಲಿ ಯಾವುದೇ ತೊಂದರೆಗಳು ಆಗದೆ ಉತ್ತಮ ಕೆಲಸವಾಗಲಿ ಅನ್ನೋ ಕಾರಣಕ್ಕೆ ಪ್ರತಿದಿನ ದೇವರನ್ನು ಸ್ಮರಣೆ ಮಾಡುತ್ತೇವೆ.

ಹೌದು ಆದ್ರೆ ಕೆಲವರು ಮನೆಯಲ್ಲಿ ಯಾವ ದೇವರ ಫೋಟೋವನ್ನು ಇಡಬೇಕು ಹಾಗೂ ಅದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿದಿರುವುದಿಲ್ಲ, ಎಲ್ಲ ದೇವರ ಫೋಟೋಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿರುತ್ತಾರೆ, ಆದ್ರೆ ಅದರಿಂದ ಅಷ್ಟೊಂದು ಫಲಗಳು ಸಿಗೋದಿಲ್ಲ, ಕಾರಣ ಏನು ಅನ್ನೋದನ್ನ ಹೇಳುವುದಾದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿ ನಿಂತಿರುವಂತ ಫೋಟೋವನ್ನು ಇಡಬಾರದು ಯಾಕೆಂದರೆ ಇದರಿಂದ ಹಣ ಸಂಪತ್ತು ಮನೆಯಲ್ಲಿ ನೆಲೆಸೋದಿಲ್ಲ ಇದರ ಬದಲು ಮಹಾಲಕ್ಷ್ಮಿ ದೇವಿ ಕುಳಿತಿರುವ ಫೋಟೋ ಹಾಕಿದರೆ ಒಳ್ಳೆಯದು.

ಕೆಲವರು ಮನೆಯಲ್ಲಿ ಅಂದರೆ ದೇವರ ಕೊಣೆಯಲ್ಲಿ ಶಿವನ ತಾಂಡವ ಸ್ವರೂಪ ಹೊಂದಿರುವಂತ ಪೋಟಿ ಅಥವಾ ಮೂರ್ತಿಯನ್ನು ಇಟ್ಟಿರುತ್ತಾರೆ, ನಟರಾಜ ಎನ್ನುವುದು ಶಿವನ ತಾಂಡವ ಸ್ವರೂಪ. ಶಿವನು ಕೋಪಗೊಂಡಾಗ ಮಾತ್ರ ತಾಂಡವ ನೃತ್ಯ ಮಾಡುತ್ತಾನೆ. ಹಾಗಾಗಿ ಇಂತಹ ಫೋಟೋ ವಿಗ್ರಹಗಳನ್ನು ಹಾಕಬಾರದು ಒಂದುವೇಳೆ ಈ ರೀತಿ ಇದ್ರೆ ಮನೆಯವರಲ್ಲಿ ಕೋಪ ಸಿಟ್ಟು ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಮಹಾದುರ್ಗೇಯ ರೌದ್ರಾವತಾರದ ಫೋಟೋ ಅಥವಾ ಮೂರ್ತಿಯಾಗಲಿ ಇರುವದು ಉತ್ತಮವಲ್ಲ, ಭೈರವನ ಮೂರ್ತಿ ಕೂಡ ಮನೆಯಲ್ಲಿ ಇಡಬಾರದು.

ಶನಿದೇವನನ್ನು ದೇವಸ್ತಾನದಲ್ಲೇ ಪೂಜಿಸಬೇಕು ಯಾಕೆಂದರೆ ಪೂಜೆಯಲ್ಲಿ ನಿಯಮವಿದೆ ಹಾಗಾಗಿ ಮನೆಯಲ್ಲಿ ಶನೇಶ್ವರನ ಫೋಟೋ ಮೂರ್ತಿ ಇರುವುದು ಮನೆಯಲ್ಲಿ ಉತ್ತಮ ಫಲವನ್ನು ಕೊಡೋದಿಲ್ಲ, ಇನ್ನು ಕೊನೆಯದಾಗಿ ಮನೆಯಲ್ಲಿ ಒಂದೇ ದೇವರ ಎರಡು ಮೂರ್ತಿಗಳನ್ನು ಮನೆಯಲ್ಲಿ ಇಡುವುದು ಒಳಿತಲ್ಲ. ಹಾಗಾಗಿ ಪೂಜೆ ವಿಧಿ ವಿಧಾನಗಳಲ್ಲಿ ತನ್ನದೆಯಾದ ವಿಶೇಷತೆಯನ್ನು ಕಾಣಬುದಾಗಿದೆ. ನಿಮ್ಮ ಮನೆಯಲ್ಲಿ ಯಾವುದೇ ಅಡೆ ತಡೆಗಳು ಹಾಗೂ ಶುಭ ಕಾರ್ಯಗಳಲ್ಲಿ ವಿಳಂಬ ಎಂತಹ ಕಠಿಣ ಸಮಸ್ಯೆ ಇದ್ರೂ ಕೂಡ ಒಂದೇ ಕರೆಯ ಮೂಲಕ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 984 5559 493

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!