ಕುಂಭ ರಾಶಿಯವರ ಗುಣ ಸ್ವಭಾವ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ

0 5

ಕುಂಭ ರಾಶಿಯವರ ಕಣ್ಣುಗಳು ಎಲ್ಲರಂತಿರಲಾರವು ಒಂದು ರೀತಿಯಲ್ಲಿ ಏನನ್ನೋ ಮುಚ್ಚಿಟ್ಟ ಭಾವ ಎಲ್ಲ ವಿಷಯಗಳ ಬಗ್ಗೆ ಅರಿವಿರುವ ಭಾವ ಏನೋ ಗುಪ್ತವಾದದ್ದು ತಿಳಿದಂತಹ ಭಾವ ಎಲ್ಲಾ ತಿಳಿದೂ ಏನೂ ತಿಳಿಯದಂತೆ ನಿಮ್ಮ ಕಣ್ಣುಗಳಲ್ಲಿ ಭಾವನೆ ವ್ಯಕ್ತವಾಗುತ್ತಿರುತ್ತದೆ, ನಿಮ್ಮಲ್ಲಿ ಬಹಳ ಪಾಂಡಿತ್ಯ ಕರಗದ ವಿದ್ವತ್ತು ಜ್ಯೋತಿಷಿಗಳು ವಿಜ್ಞಾನಿಗಳು ಸಂಗೀತಾಸಕ್ತರು ಕಲೆ ಮತ್ತು ರಾಜಕೀಯ ಸಂಬಂದಪಟ್ಟಂತಹ ಎಲ್ಲಾ ಕ್ಷೇತ್ರಗಳಲ್ಲಿಯೂ ನಿಮ್ಮದೇ ಆದ ಛಾಪು ಮುಡಿಸುವಂತಹವರು.

ಗುರು ಮತ್ತು ಕುಜನ ಒಳ್ಳೆಯ ಪ್ರಭಾವವಿದ್ದಲ್ಲಿ ನೀವು ಉತ್ತಮ ಲೇಖಕರಾಗಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯಾಗಿ ಐಷಾರಾಮಿ ವಸ್ತುಗಳನ್ನು ವ್ಯಾಪಾರ ಮಾಡುವವರಾಗಿ ಗ್ರಂಥಿಗೆ ವಸ್ತುಗಳ ವ್ಯಾಪಾರ ಹೊಟೇಲ್ ಉದ್ಯಮ ಇವುಗಳಲ್ಲಿ ನಿಮಗೆ ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅಲ್ಲದೆ ಮಾನಸಿಕವಾಗಿ ಮತ್ತು ಪ್ರೀತಿ ಪ್ರೇಮಗಳ ವಿಷಯಗಳಲ್ಲಿ ನಿಮ್ಮನ್ನು ಮೀರಿಸುವವರು ಮತ್ತೊಬ್ಬರಿಲ್ಲ . ಯಾವುದೇ ಒಬ್ಬ ವ್ಯಕ್ತಿಯನ್ನು ನೀವು ಕಣ್ಣು ಮುಚ್ಚಿ ನಂಬಿದ್ದೇ ಆದಲ್ಲಿ ನಿಮ್ಮದು ಎಂದಿಗೂ ಬದಲಾಗುವಂತಹ ವ್ಯಕ್ತಿತ್ವವಲ್ಲ

ಸಪ್ತಮದಲ್ಲಿ ಸೂರ್ಯ ಅಧಿಪತಿಯಾಗಿರುವ ಕಾರಣ ಕೆಲವೊಂದು ದೈಹಿಕ ಸಮಸ್ಯೆಗಳು ನಿಮ್ಮನ್ನು ಬಾಧಿಸದೇ ಬಿಡಲಾರವು ದೈಹಿಕ ಸಮಸ್ಯೆಗಳನ್ನು ತಡೆಯುವ ಸಾಮರ್ಥ್ಯ ನಿಮ್ಮಲ್ಲಿರುವುದಿಲ್ಲ ಆದರೆ ಮಾನಸಿಕವಾಗಿ ಎಷ್ಟೇ ತೊಂದರೆ ಬಂದರೂ ನೀವು ಅದನ್ನು ಎದುರಿಸಿ ನಿಲ್ಲುವಷ್ಟು ಬಲಿಷ್ಟರಾಗಿರುತ್ತಿರಿ ಮತ್ತು ಶುಕ್ರನ ಸಂಪೂರ್ಣ ಭಾಗ್ಯ ಪ್ರಭಾವ ನಿಮ್ಮ ಮೇಲೆ ಇರುವುದರಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಎಂದಿಗೂ ಕೊರತೆ ಎಂಬುದೇ ಇರುವುದಿಲ್ಲ ಆದರೆ ಸಂಗಾತಿಯ ವಿಷಯದಲ್ಲಿ ಮಾತ್ರವೇ ಕೆಲವೊಂದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ತಲೆದೋರಬಹುದು ಅಲ್ಲದೇ ಕೆಲವೊಂದು ಗುಪ್ತ ಪರಿಣಾಮ ಬೀರುವ ಪ್ರೇಮ ಪ್ರಕರಣಗಳು ಸಹ ನಿಮ್ಮ ಜೀವನದಲ್ಲಿ ನಡೆಯಬಹುದು ಅಲ್ಲದೇ ಈ ರಾಶಿಯ ಸಂಜಾತರಲ್ಲಿ ಕೆಲವರಿಗೆ ಎರಡನೆಯ ಮದುವೆಯೂ ಸಂಭವಿಸಬಹುದಾಗಿದೆ

ನೀವೇನಾದರೂ ಮನಃ ಶಾಸ್ತ್ರ ಗುಪ್ತಚರ ಇಲಾಖೆ ಸಂಖ್ಯಾಶಾಸ್ತ್ರ ರಾಯಭಾರಿಗಳು ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತಹ ಉದ್ಯೋಗದಲ್ಲಿ ನೀವಿದ್ದರೆ ಬಹು ಅಪರೂಪದ ಸಾಧನೆ ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ ಕಫಕ್ಕೆ ಸಂಬಂದಿಸಿದಂತಹ ಸಮಸ್ಯೆ ಶೀತ ಸಮಸ್ಯೆ ನಾರಗಳ ಸೆಳೆತ ಕಣ್ಣಿನ ಸಮಸ್ಯೆ ಅತಿಯಾಗಿ ಮರೆಯುವಿಕೆ ಹಾಗೂ ಹಲ್ಲು ನೋವಿನ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಲೇ ಇರುತ್ತವೆ ಹಾಗೂ ನಿಮ್ಮ ಅತಿ ದೊಡ್ಡ ದೌರ್ಬಲ್ಯವೆಂದರೆ ಅತೀ ನಿದಾನಗತಿಯಲ್ಲಿ ಕಲಿಯುವಿಕೆ ಮತ್ತು ನಿಮ್ಮ ಬದಲು ಮಾಡಿಕೊಳ್ಳಲಾಗದ ನಿರ್ಧಾರಗಳು

ಭಾನುವಾರ ಬುಧವಾರ ಶ್ರುಕ್ರವಾರ ಶನಿವಾರ ಗಳು ನಿಮಗೆ ಶುಭ ವಾರಗಳಾಗಿರುತ್ತವೆ ಅಲ್ಲದೇ ನಿಮ್ಮ ಅದೃಷ್ಟದ ರತ್ನವು ನೀಲಿ ವರ್ಣದ ರತ್ನವಾಗಿರುತ್ತದೆ ಅಲ್ಲದೇ ನೀಲಿ ಮತ್ತು ಕಪ್ಪು ಈ ಎರಡೂ ಬಣ್ಣಗಳು ನಿಮ್ಮ ಅದೃಷ್ಟದ ಬಣ್ಣಗಳಾಗಿರುತ್ತವೆ, ವೃಷಭ ಮಕರ ಮೀನ ರಾಶಿಗಳು ನಿಮಗೆ ಮಿತ್ರ ರಾಶಿಗಳಾಗಿದ್ದು ಇನ್ನು ಮೇಷ ಕಟಕ ಸಿಂಹ ರಾಶಿಗಳು ನಿಮ್ಮ ಶತ್ರು ರಾಶಿಗಳಾಗಿರುತ್ತವೆ ಹಾಗೂ ನಿಮ್ಮ ಶುಭ ಸಂಖ್ಯೆ 1 4 5 6 8 ಆಗಿರುತ್ತದೆ.

Leave A Reply

Your email address will not be published.