Here is an easy way to get caste and income certificate: ಈ ಹಿಂದೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಲು ನಾಡ ಕಚೇರಿಗೆ ಹೋಗಬೇಕಿತ್ತು ಹಾಗೆಯೇ ತಹಶೀಲ್ದಾರ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕಿತ್ತು ಆದರೆ ಈಗ ತಂತ್ರಜ್ಞಾನ ಮುಂದುವರೆದ ಕಾರಣ ದಿಂದ ಮೊಬೈಲ್ (Mobile) ಅಥವಾ ಕಂಪ್ಯೂಟರ್ (Computer) ಮೂಲಕ ಮಾಡಿಕೊಳ್ಳಬಹುದು ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಮನೆಯಲ್ಲಿಯೇ ಕುಳಿತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು
ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಹಳೆಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಶಾಲೆಯ ವರ್ಗಾವಣೆಯ ಪ್ರಮಾಣ ಪತ್ರ ಬೇಕಾಗುತ್ತದೆ ಇವೆಲ್ಲ ದಾಖಲೆಗಳು ಸರಿಯಾಗಿ ಇದ್ದರೆ ಆನ್ಲೈನ್ ಅಲ್ಲಿ ಅರ್ಜಿ ಹಾಕಬಹುದು.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ರಿನಿವಲ್ ಮಾಡಿಸಲು ನಲವತ್ತು ರೂಪಾಯಿಯ ಅರ್ಜಿ ಶುಲ್ಕವನ್ನು ನೀಡಬೇಕು ನಾವು ಈ ಲೇಖನದ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ರಿನಿವಲ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಗೂಗಲ್ ಕ್ರೋಮ್ ಗೆ ಹೋಗಬೇಕು ಅದರಲ್ಲಿ ನಾಡಕಛೇರಿ ಎಂದು ಟೈಪ್ ಮಾಡಬೇಕು ಅಲ್ಲಿ ಬರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅದರಲ್ಲಿ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕುನಂತರ ಅಪ್ಲೈ ಆನ್ಲೈನ್ ಅಂತ ಬರುತ್ತದೆ ನಂತರ ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಬೇಕು ನಂತರಗೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ಟೈಪ್ ಮಾಡಬೇಕು
ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಹೊಸ ವಿಂಡೋ ಓಪನ್ ಆಗುತ್ತದೆ ಅದರಲ್ಲಿ new request ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ಜಾತಿ ಪ್ರಮಾಣ ಪತ್ರದ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ರೇಷನ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ ಯಾವುದೇ ಬೇಕಾದರೂ ಹಾಕಬಹುದು ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು ನಂತರ ಜಿಲ್ಲೆ ಕೇಳುತ್ತದೆ ಹಾಗೆಯೇ ತಾಲೂಕು ಹಾಗೂ ಹೋಬಳಿಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು .
ಗ್ರಾಮ ಹಾಗೂ ಊರನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆಯೇ ಜಾತಿ ಯಾವ ಕೆಟಗೆರಿ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು ಹೆಸರನ್ನು ಟೈಪ್ ಮಾಡಬೇಕು ನಂತರ ತಂದೆಯ ಹೆಸರನ್ನು ಹಾಕಿದ ಮೇಲೆ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಯಾವುದಾದರೂ ಜಾತಿ ಪ್ರಮಾಣ ಪತ್ರ ರಿನಿವಲ್ ಆಗಿ ಬರುವುದಿದ್ದರೆ ಆರ್ ಡಿ ನಂಬರ್ ಕಾಣಿಸುತ್ತದೆ ಅದರಲ್ಲಿ ಹೆಸರು ಸರಿಯಾಗಿ ಇದೆಯಾ ಇಲ್ಲವೆಂದು ನೋಡಬೇಕು ಹಾಗೆಯೇ ತಂದೆಯ ಹೆಸರು ಸರಿಯಾಗಿ ಇದೆಯಾ ಇಲ್ಲವೆಂದು ನೋಡಬೇಕು.
ಸರಿಯಾಗಿ ಇದ್ದರೆ ಆರ್ ಡಿ ನಂಬರ್ ಅನ್ನು ಕಾಪಿ ಮಾಡಿಕೊಳ್ಳಬೇಕು ನಂತರ ಪ್ರಿಂಟ್ ಆಪ್ಷನ್ ಮೇಲೆ ರಿ ಪ್ರಿಂಟ್ ಆಪ್ಷನ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಅದರಲ್ಲಿ ಆರ್ ಡಿ ನಂಬರ್ ಕೇಳುತ್ತದೆ ಕಾಪಿ ಮಾಡಿದ ನಂಬರ್ ಅನ್ನು ಪೇಸ್ಟ್ ಮಾಡಬೇಕು ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಡ್ರಾಫ್ಟ್ ವಿವ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಸರ್ಟಿಫಿಕೇಟ್ ತೋರಿಸುತ್ತದೆ ಅಲ್ಲಿ .
ಹೆಸರು ತಂದೆ ತಾಯಿ ಹೆಸರು ಹಾಗೂ ಜಾತಿ ಎಲ್ಲವೂ ಕಾಣಿಸುತ್ತದೆ ನಂತರ ಸರ್ಟಿಫಿಕೇಟ್ ಬೇಕಾದರೆ ಪೆ ಸರ್ವಿಸ್ ಪೀ ಮೇಲೆ ಕ್ಲಿಕ್ ಮಾಡಬೇಕು ನಂತರ accept ಮೇಲೆ ಕ್ಲಿಕ್ ಮಾಡಬೇಕು ಎಸ್ ಬಿಐ ಈ ಪೆ ಮೇಲೆ ಕ್ಲಿಕ್ ಮಾಡಬೇಕು ನಂತರ ಹೊಸ ಪೇಜ್ ಓಪನ್ ಆಗುತ್ತದೆ ಒಂದು ಸರ್ಟಿಫಿಕೇಟ್ ಗೆ ನಲವತ್ತು ರೂಪಾಯಿ ಪೆ ಮಾಡಬೇಕು. ಯೂಪಿಐ ಮೂಲಕ ಸಹ ಪೆ ಮಾಡಬಹುದು ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಪೆ ಮಾಡಬಹುದು
ನಂತರ ಮೊಬೈಲ್ ನಂಬರ್ ಹಾಕಬೇಕು ಗೇಟ್ ಓಟಿ ಪಿ ಮೇಲೆ ಕ್ಲಿಕ್ ಮಾಡಿದರೆ ಮತ್ತೆ ಓಟಿಪಿ ಬರುತ್ತದೆ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಪ್ರಿಂಟ್ ಆಪ್ಷನ್ ಅಲ್ಲಿ ರಿ ಪ್ರಿಂಟ್ ಮೇಲೆ ಕ್ಲಿಕ್ ಮಾಡಬೇಕು ಲಾಸ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಆರ್ ಡಿ ನಂಬರ್ ಅನ್ನು ಟೈಪ್ ಮಾಡಬೇಕು ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು
ಇದನ್ನೂ ಓದಿ..SSLC ಆದವರಿಗೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಖಾಲಿಯಿದೆ ಅರ್ಜಿಹಾಕಿ
ನಂತರ ಒಂದು ಬಾಕ್ಸ್ ಬರುತ್ತದೆ ಅದರಲ್ಲಿ ಕ್ಲಿಕ್ ಮಾಡಿ ಪ್ರಿಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಜಾತಿ ಪ್ರಮಾಣ ಪತ್ರ ಪ್ರಿಂಟ್ ಆಗುತ್ತದೆ ಹೀಗೆ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಮನೆಯಲ್ಲಿಯೇ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಮಾಡಿಕೊಳ್ಳಬಹುದು ಇದರಿಂದಾಗಿ ಅನೇಕ ಜನರಿಗೆ ಸಹಾಯಕವಾಗುತ್ತದೆ.