ಸ್ವಲ್ಪ ದೂರ ನಡೆಯುವುದರಿಂದ ಅಥವಾ ಆಫೀಸ್ ನಲ್ಲಿ ಒಂದೆರಡು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಆಯಾಸ ಮತ್ತು ಸುಸ್ತು ಆಗುತ್ತಾರೆ. ಪ್ರತಿನಿತ್ಯ ನಾವು ಹಲವಾರು ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗುತ್ತಿರುತ್ತೇವೆ. ಇದರಿಂದ ಸರಿಯಾಗಿ ಊಟ ಮಾಡದೆ ಇರುವುದು ಮಾನಸಿಕ ಸಮಸ್ಯೆಗಳು ಈ ರೀತಿ ಹಲವಾರು ಕಾರಣಗಳಿಂದ ಅಶಕ್ತತರು ಮತ್ತು ಬಲಹೀನರು ಆಗಿರುತ್ತಾರೆ ಇವರಿಂದ ಯಾವುದೇ ಕೆಲಸವನ್ನು ಮಾಡಲು ಅಷ್ಟಾಗಿ ಸಾಧ್ಯವಾಗುವುದಿಲ್ಲ ಹಾಗೆ ಯಾವುದೇ ಕೆಲಸವನ್ನು ಮಾಡಲು ಉತ್ಸಾಹ ಸಹ ಇರುವುದಿಲ್ಲ. ಎಲ್ಲರ ರೀತಿ ಉತ್ಸಾಹದಿಂದ ಹುರುಪಿನಿಂದ ಎಲ್ಲಾ ಕೆಲಸವನ್ನು ಮಾಡಬೇಕು ಎಂದುಕೊಂಡರೆ ಮನೆಯಲ್ಲಿಯೇ ನಾವು ಸುಲಭವಾಗಿ ಕೆಲವೊಂದಿಷ್ಟು ಟಿಪ್ಸ್ ಗಳನ್ನು ಬಳಸುವ ಮೂಲಕ ಉತ್ಸಾಹಭರಿತವಾಗಿರಬಹುದು. ಉತ್ಸಾಹದಿಂದ ಇರುವುದಕ್ಕೆ ನಾವು ಮನೆಯಲ್ಲಿ ಏನು ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೋಣ.

ಇದನ್ನು ಮಾಡಲು ನಮಗೆ ಮೊದಲಿಗೆ ಮುಖ್ಯವಾಗಿ ಬೇಕಾಗಿರುವುದು ವಾಲ್ನಟ್ಸ್. ಇದು ನೋಡುವುದಕ್ಕೆ ಸ್ವಲ್ಪ ಮೆದುಳಿನ ಆಕಾರದಲ್ಲಿರುವುದರಿಂದ ಇದನ್ನು ಬ್ರೈನ್ ಫುಡ್ಸ್ ಎಂದು ಸಹ ಕರೆಯುತ್ತಾರೆ. ಇದು ಪ್ರಾಣಾಂತಕ ವ್ಯಾಧಿಗಳಾದಂತಹ ಕ್ಯಾನ್ಸರ್ ಡಯಾಬಿಟಿಸ್ ಅಂತ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ತೂಕ ಇಳಿಕೆ ಮಾಡಿಕೊಳ್ಳಲು ಸಹ ಸಹಾಯಕವಾಗಿರುತ್ತದೆ. ನಂತರ ಬೇಕಾಗಿರೋದು ಒಣದ್ರಾಕ್ಷಿ. ಒಣದ್ರಾಕ್ಷಿಯಲ್ಲಿ ವಿಟಮಿನ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ಇದರಲ್ಲಿ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಹ ಶಕ್ತಿಯು ಇರುತ್ತೆ. ದ್ರಾಕ್ಷಿಯಲ್ಲಿ ಇರುವಂತಹ ಫೈಬರ್ ಅಂಶ ನಮ್ಮ ಹೊಟ್ಟೆಯಲ್ಲಿ ಇರುವಂತಹ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆ ಅನೇಮಿಯ ದಿಂದ ಬಳಲುತ್ತಿರುವ ಅಂತಹ ವರೆಗೂ ಕೂಡ ಇದು ಉತ್ತಮ ಪರಿಹಾರವನ್ನು ನೀಡಬಲ್ಲದು. ಮುಖ್ಯವಾಗಿ ಇದು ಸ್ತ್ರೀಯರಿಗೆ ಸಹ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ . ಇದರಲ್ಲಿ ಇರುವಂತಹ ಪ್ರೋಟಿನ್, ವಿಟಮಿನ್ ಗಳು ನಿಶಕ್ತಿ ಅಲ್ಲಿರುವವರಿಗೆ ತುಂಬಾ ಫಲವನ್ನು ನೀಡುತ್ತದೆ ಎನ್ನುಬಹುದು. ತೆಳ್ಳಗಿರುವವರಿಗೆ ದಪ್ಪವಾಗಲು ಒಣದ್ರಾಕ್ಷಿ ತುಂಬಾ ಸಹಾಯ ಮಾಡುತ್ತದೆ. ಶರೀರಕ್ಕೆ ಶಕ್ತಿ ಬರಬೇಕು ಎಂದುಕೊಂಡವರು ಒಣದ್ರಾಕ್ಷಿಯನ್ನು ತಿನ್ನುವುದರಿಂದ ಶರೀರದಲ್ಲಿ ಶಕ್ತಿ ಹೆಚ್ಚುತ್ತದೆ. ಒಂದು ಲೋಟ ಹಾಲು ಮೂರನ್ನು ಬಳಸಿಕೊಂಡು ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನು ನೋಡೋಣ.

ಒಂದು ಬೌಲಿನಲ್ಲಿ 1 ಸ್ಪೂನ್ ನಷ್ಟು ವಾಲ್ ನಟ್ಸ್ ತೆಗೆದುಕೊಂಡು ಅದನ್ನು ಸಣ್ಣ ಸಣ್ಣದಾಗಿ ಚೂರು ಮಾಡಿಟ್ಟುಕೊಳ್ಳಬೇಕು ಹಾಗೆ ಇದಕ್ಕೆ ಒಂದು ಸ್ಪೂನ್ ಒಣದ್ರಾಕ್ಷಿಯನ್ನು ಸಹ ಸೇರಿಸಿ ಇಟ್ಟುಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಒಂದು ಲೋಟ ಹಾಲನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ನಂತರ ಇದಕ್ಕೆ ತಯಾರಿಸಿಟ್ಟುಕೊಂಡು ಮತ್ತು ಒಣದ್ರಾಕ್ಷಿಯನ್ನು ಹಾಕಿ ಕುದಿಸಬೇಕು. ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಹಾಲಿನ ಮಿಶ್ರಣದ ಸಕ್ಕರೆ ಅಥವಾ ಜೇನು ತುಪ್ಪವನ್ನು ಸೇರಿಸಿ ಕೊಂಡು ಬೆಳಿಗ್ಗೆ ತಿಂಡಿ ತಿಂದ ನಂತರ 10 , 11 ಗಂಟೆಯ ಸಮಯದಲ್ಲಿ ಇದನ್ನು ಕುಡಿಯಬೇಕು. ರಾತ್ರಿ ಸಮಯದಲ್ಲಿ ಇದನ್ನು ಕುಡಿಯಬಾರದು. ಈ ರೀತಿಯಾಗಿ ಹಾಲಿನ ಜೊತೆ ವಾಲ್ ನಟ್ಸ್ ಮತ್ತು ಒಣದ್ರಾಕ್ಷಿ ಇವೆರಡನ್ನು ಮಿಶ್ರಣಮಾಡಿ ಮೂರು ದಿನ ಕುಡಿಯುವುದರಿಂದ ನಮ್ಮ ದೇಹದಲ್ಲಿನ ನಿಶ್ಯಕ್ತಿಯನ್ನು ಹೋಗಲಾಡಿಸಿ ಕೊಳ್ಳಬಹುದು.

By

Leave a Reply

Your email address will not be published. Required fields are marked *