ತುಂಬಾ ತೆಳ್ಳಗಿದ್ದೀರಾ ಬರಿ ಈ ತಿಂಗಳಲ್ಲಿ ದಪ್ಪ ಆಗಲು, ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಪಾಯಸ

0 139

Healthy body: ಈ ದಿನ ನಾವು ತೂಕವನ್ನು ವೃದ್ಧಿ ಮಾಡಿಕೊಳ್ಳುವುದು ಹೇಗೆ ಎಂದು ಇದರಲ್ಲಿ ತಿಳಿದುಕೊಳ್ಳಬಹುದು. ತೂಕ ಹೆಚ್ಚಾದವರು ಹೇಗೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೋ ಹಾಗೆ ತೂಕ ಕಡಿಮೆ ಇದ್ದವರು ಕೂಡ ತೂಕ ಹೆಚ್ಚಿಸಲು ಅಷ್ಟೇ ಪ್ರಯತ್ನವನ್ನು ಪಡುತ್ತಾರೆ. ಅದಕ್ಕೆ ಹಲವಾರು ರೀತಿಯ ಟಾನಿಕ್ಸ್ ಗಳನ್ನು ತೆಗೆದುಕೊಳ್ಳುತ್ತಾರೆ ಪ್ರೋಟೀನ್ ಪೌಡರ್, ವಿಟಮಿನ್ ನಂತಹ ಪಾನಿಯಗಳನ್ನು ಕುಡಿಯುತ್ತಾರೆ.

ದಪ್ಪ ಆಗಬೇಕು ಎಂದುಕೊಂಡು ಹಲವಾರು ಟಾನಿಕ್ ಗಳನ್ನು ಸೇವಿಸುವುದರಿಂದ ಕಿಡ್ನಿ ಫೇಲ್ಯೂರ್ ,ಇನ್ನು ಕೆಲವರಿಗೆ ಲಿವರ್ ಸಮಸ್ಯೆ, ಹೃದಯಾಘಾತ, ಮೆದುಳಿಗೆ ತೊಂದರೆಯಾಗಿ ಮಾನಸಿಕ ಸಮಸ್ಯೆಗಳು ಕೂಡ ಬಂದಿದೆ. ದಪ್ಪವಾಗಲು ನೈಸರ್ಗಿಕವಾಗಿ ಪರಿಹಾರವನ್ನು ಕಂಡುಕೊಂಡರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ ನಮ್ಮ ದೇಹ ಬಲಿಷ್ಠವಾಗುತ್ತದೆ.

ಆಯುರ್ವೇದದಲ್ಲಿ ದೇಹ ಸರಿಯಾಗಿ ಬೆಳವಣಿಗೆ ಆಗಬೇಕೆಂದರೆ ಕೆಲವೊಂದಿಷ್ಟು ಆಹಾರವನ್ನು ಹೇಳುತ್ತಾರೆ ಯಾವ ಆಹಾರದಲ್ಲಿ ಮಧುರ ಎನ್ನುವ ರಸ ಇರುತ್ತದೆ ಅಲ್ಲಿ ಸ್ನಿಗ್ಧತೆ ಹೆಚ್ಚಾಗಿರುತ್ತದೆ ಅಂತಹ ಆಹಾರವನ್ನ ಅಂದರೆ ಮೇತ್ಯ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮಲ್ಲಿ ತೂಕ ವೃತ್ತಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಮೊದಲನೇದಾಗಿ ನಾವು ತೆಳ್ಳಗಿರಲು ಕಾರಣವೇನು ಎಂದು ತಿಳಿದುಕೊಳ್ಳಬೇಕು ವಿಪರೀತವಾಗಿ ಪಿತ್ತದ ಹೆಚ್ಚಳ ಮತ್ತು ವಾತದ ಸಮಸ್ಯೆ ಇದ್ದರೆ ತೆಳ್ಳಗಿರುತ್ತಾರೆ. ಈ ದೋಷವನ್ನು ಪರಿಹರಿಸಿಕೊಳ್ಳಲು ನಾವು ಆಹಾರದಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ ವಾತ ಚೆನ್ನಾಗಿರಬೇಕು ಎಂದರೆ ವಾರದಲ್ಲಿ ಒಂದು ಬಾರಿಯಾದರೂ ಅಭ್ಯಂಜನ ಸ್ನಾನವನ್ನು ಮಾಡಬೇಕು. ಪಿತ್ತವಿಕರಗಳನ್ನು ಶಮನ ಮಾಡಿಕೊಳ್ಳುವುದಕ್ಕಾಗಿ ಕೃತಪಾನವನ್ನು ಮಾಡಬೇಕಾಗುತ್ತದೆ.

ಬಹಳ ಮುಖ್ಯವಾಗಿ ಎಮ್ಮೆ ತುಪ್ಪವನ್ನು ಸೇವನೆ ಮಾಡಿ ಆಗ ಬೇಗ ದಪ್ಪವಾಗುತ್ತೀರಾ, ಹಸು ತುಪ್ಪ ಕುರಿತುಪ್ಪ ಅನ್ನು ಕೂಡ ಸೇವನೆ ಮಾಡಬಹುದು ಆದರೆ ಎಮ್ಮೆ ತುಪ್ಪ ಸೇವನೆ ಮಾಡುವುದರಿಂದ ಬಹಳ ಬೇಗ ದಪ್ಪವಾಗುತ್ತೀರಾ. ಬೆಳಿಗ್ಗೆ ಎದ್ದ ತಕ್ಷಣ ಒಂದು ಚಮಚ ಎಮ್ಮೆ ತುಪ್ಪದ ಜೊತೆ ಬಾಳೆಹಣ್ಣು ಹಾಗೂ 20ಗ್ರಾಮ ಬೆಲ್ಲದ ಜೊತೆ ಸೇವನೆ ಮಾಡುವುದರಿಂದ ದಪ್ಪವಾಗುತ್ತೀರಾ ನಂತರ ಅದ್ಭುತವಾಗಿರುವಂತಹ ಗೋಧಿ ಪಾಯಸಕ್ಕೆ ಎರಡು ಚಮಚ ಎಣ್ಣೆ ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ..ಈ ಬಳ್ಳಿ ಎಲ್ಲೇ ಸಿಕ್ಕರೂ ಬಿಡಬೇಡಿ ಇದರಲ್ಲಿ ಅಡಗಿದೆ ಪುರುಷರಿಗೆ ಸ್ವರ್ಗ ಸುಖ

ಬಹಳ ಮಂದಿಗೆ ತೆಳ್ಳಗಿರುವುದು ವಂಶ ಪಾರಂಪರಿಕವಾಗಿ ಬಂದಿರುತ್ತದೆ ಅಂತಹ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಈ ತುಪ್ಪಕ್ಕೆ ಇದೆ. ತೂಕ ಕಡಿಮೆಯಾಗಲು ಅಜೀರ್ಣ ಒಂದು ಪ್ರಧಾನ ಕಾರಣ ಹೆಚ್ಚು ಬೆಯಿಸಿರುವ ಸೊಪ್ಪಿನ ತರಕಾರಿಯನ್ನು ತಿನ್ನಬೇಕು. ಆಹಾರ ಸೇವನೆ ಮಾಡುವುದಕ್ಕಿಂತ ಮೊದಲು ಹೊಟ್ಟೆ ತುಂಬಾ ಹಣ್ಣು ತರಕಾರಿಯನ್ನು ತಿನ್ನಬೇಕು ಹೀಗೆ ತಿನ್ನುವುದರಿಂದ ಜೀರ್ಣರಸವು ಕ್ರಿಯಾಶೀಲವಾಗುತ್ತದೆ ಆಗ ಅರ್ಧ ಗಂಟೆ ನಂತರ ಆಹಾರ ಸೇವನೆ ಮಾಡುವುದರಿಂದ ಜಠರಾ ಕ್ರಿಯಾಶೀಲವಾಗುತ್ತದೆ ಆಗ ಜೀರ್ಣಕ್ರಿಯೆ ಸರಿಯಾಗುತ್ತದೆ. ಹೀಗೆ ಮಾಡುವುದರಿಂದ ನೀವು ದಪ್ಪವಾಗಲು ಸಹಾಯವಾಗುತ್ತದೆ.

Leave A Reply

Your email address will not be published.