ಮಾನವನ ದೇಹದಲ್ಲಿ ರಕ್ತ ಮುಖ್ಯ ಪಾತ್ರವನ್ನು ವಹಿಸುತ್ತದೆ ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕಾದರೆ ಶುದ್ಧವಾದ ರಕ್ತ ಇರಬೇಕು. ರಕ್ತ ದೇಹದಲ್ಲಿ ಆಮ್ಲಜನಕವನ್ನು ದೇಹದ ನಾನಾ ಮೂಲೆಗಳಿಗೆ ಸಾಗಿಸುವ ವಾಹನ ವಿದ್ದಂತೆ ಹಾಗಾಗಿ ನಾವಿಂದು ನಿಮಗೆ ರಕ್ತ ಶುದ್ಧೀಕರಣ ಎಂದರೇನು ರಕ್ತ ಶುದ್ಧೀಕರಣವನ್ನು ಮಾಡುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಮತ್ತು ದೇಹದಲ್ಲಿ ರಕ್ತ ಅಶುದ್ಧವಾದಾಗ ಅದನ್ನು ಪತ್ತೆ ಹಚ್ಚುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ರಕ್ತದಲ್ಲಿ ಆಮ್ಲಜನಕ ರಹಿತ ರಕ್ತ ಮತ್ತು ಆಮ್ಲಜನಕ ಸಹಿತ ರಕ್ತ ಎಂಬ ಎರಡು ವಿಧವಿದೆ. ಆಮ್ಲಜನಕ ಯುಕ್ತ ರಕ್ತ ಶುದ್ಧ ರಕ್ತವಾಗಿದೆ ಆಕ್ಸಿಜನ್ ಇಲ್ಲದಂತಹ ರಕ್ತ ಅಶುದ್ಧ ರಕ್ತ ವಾಗಿದೆ. ಹಾಗಾಗಿ ನೀವು ನಿಮ್ಮ ರಕ್ತವನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ಅಂದರೆ ರಕ್ತದಲ್ಲಿ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುವಲ್ಲಿ ನಿಮ್ಮ ಪ್ರಯತ್ನ ಇರಬೇಕು. ಹಾಗಾದರೆ ರಕ್ತದಲ್ಲಿ ಯಾವ ರೀತಿಯಾಗಿ ಆಮ್ಲಜನಕವನ್ನು ಹೆಚ್ಚಿಸಿಕೊಳ್ಳಬಹುದು ಎಂದರೆ ಪ್ರಾಣಾಯಾಮ ಮಾಡುವ ಮೂಲಕ ಹೆಚ್ಚಿಸಿಕೊಳ್ಳಬಹುದು.

ಪ್ರಾಣ ಎಂದರೆ ಗಾಳಿ ಉಸಿರು ಶ್ವಾಸ. ಶ್ವಾಸವನ್ನು ವಿವಿಧ ಆಯಾಮಗಳಲ್ಲಿ ತೆಗೆದುಕೊಳ್ಳುವಂಥದ್ದು ಪ್ರಾಣಾಯಾಮ. ಪ್ರಾಣಾಯಾಮ ಮಾಡುವುದರಿಂದ ನಿಮ್ಮ ಸ್ವಾಶಕೋಶಕ್ಕೆ ಸಹಾಯವಾಗುತ್ತದೆ ಅದರ ಜೊತೆಗೆ ನಿಮ್ಮ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ನೀವು ದಿನಪ್ರತಿ ಬೇರೆ ಸಮಯದಲ್ಲಿ ಉಸಿರಾಡುತ್ತೀರಿ ಆ ಸಮಯದಲ್ಲಿ ಸಿಗುವ ಆಮ್ಲಜನಕಕ್ಕಿಂತ ಶೇಕಡ ಐದರಷ್ಟು ಹೆಚ್ಚಿನ ಆಮ್ಲಜನಕ ನಿಮಗೆ ಪ್ರಾಣಾಯಾಮ ಮಾಡುವ ಸಮಯದಲ್ಲಿ ಸಿಗುತ್ತದೆ. ಆಮ್ಲಜನಕ ರಕ್ತದಲ್ಲಿ ಮಿಶ್ರಣವಾಗುತ್ತದೆ ಆಗ ರಕ್ತ ಶುದ್ಧವಾಗುತ್ತದೆ. ಹಾಗಾಗಿ ರಕ್ತಶುದ್ಧಿ ಮಾಡಿಕೊಳ್ಳುವುದಕ್ಕೆ ಪ್ರಾಣಾಯಾಮ ಕೂಡ ಒಂದು ವಿಧಾನವಾಗಿದೆ. ಪ್ರಾಣಾಯಾಮದಲ್ಲಿ ಹಲವಾರು ವಿಧಾನಗಳಿವೆ ಅದರಲ್ಲಿ ಯಾವ ಪ್ರಾಣಾಯಾಮವನ್ನು ಮಾಡಿದರು ಉತ್ತಮ.

ಅದರ ಜೊತೆಗೆ ನೀವು ಯಾವುದಾದರೂ ಔಷಧಿಗಳನ್ನು ತೆಗೆದುಕೊಳ್ಳಬೇಕು ಆಹಾರವನ್ನು ತೆಗೆದುಕೊಳ್ಳಬೇಕು ಮನೆಮದ್ದುಗಳನ್ನು ತೆಗೆದುಕೊಳ್ಳಬೇಕು ಎಂದು ಅಪೇಕ್ಷೆ ಪಟ್ಟಲ್ಲಿ ನೀವು ಮಂಜಿಷ್ಟ ಬಳಸಬಹುದು. ನೀವು ಆಯುರ್ವೇದದ ಔಷಧಿಗಳ ಅಂಗಡಿಗೆ ಹೋಗಿ ಅಲ್ಲಿ ಮಂಜಿಷ್ಟ ಚೂರ್ಣವನ್ನು ತೆಗೆದುಕೊಳ್ಳಬಹುದು. ಮಂಜಿಷ್ಟವನ್ನು ಕಷಾಯ ಮಾಡಿ ಸೇವಿಸಬೇಕು ಎರಡು ಲೋಟ ನೀರಿಗೆ ಒಂದು ಚಮಚ ಮಂಜಿಷ್ಟ ಚೂರ್ಣವನ್ನು ಹಾಕಿ ಅದನ್ನ ಮಂದಾಗ್ನಿಯಲ್ಲಿ ಕುದಿಸಿ ಒಂದು ಲೋಟ ಮಾಡಬೇಕು

ನಂತರ ಅದನ್ನು ಸೋಸಿ ಬೆಳಿಗ್ಗೆ ಮತ್ತು ಸಾಯಂಕಾಲ ಮೂರು ತಿಂಗಳುಗಳ ಕಾಲ ಸತತವಾಗಿ ತೆಗೆದುಕೊಳ್ಳಬೇಕು. ಸ್ನೇಹಿತರೆ ರಕ್ತಶುದ್ಧಿ ಎನ್ನುವಂತದ್ದು ಒಂದು ದಿನ ಎರಡು ದಿನದಲ್ಲಿ ಆಗುವಂತದ್ದಲ್ಲ ನೀವು ಮೂರು ತಿಂಗಳು ಔಷಧಿಯನ್ನು ಸೇವಿಸಿದಾಗ ರಕ್ತ ಶುದ್ಧಿಯಾಗುತ್ತದೆ. ಮೂರು ತಿಂಗಳಲ್ಲಿ ಒಂದುವೇಳೆ ರಕ್ತಶುದ್ಧಿ ಆಗದಿದ್ದಾಗ ನೀವು ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬೇಕು.

ರಕ್ತ ಶುದ್ಧಿ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ ಎಂದು ನೋಡೋಣ. ರಕ್ತದ ಅಶುದ್ಧತೆ ತೋರುವುದು ನಿಮ್ಮ ಚರ್ಮದಲ್ಲಿ. ರಕ್ತ ಅಶುದ್ಧವಾದಾಗ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತದೆ ಮೈಮೇಲೆ ವಿಪರೀತವಾದಂತಹ ಗುಳ್ಳೆಗಳಾಗಬಹುದು ದದ್ದುಗಳು ಆಗಬಹುದು ತುರಿಕೆ ಆಗಬಹುದು ಚರ್ಮದ ಕಾಂತಿ ಕಡಿಮೆಯಾಗಬಹುದು ಚರ್ಮ ಸುಕ್ಕುಗಟ್ಟಬಹುದು ನೆರಿಗೆಗಳಾಗಬಹುದು ಕಲೆಗಳಾಗಬಹುದು ಇದೆಲ್ಲವೂ ಕೂಡ ರಕ್ತದ ಅಶುದ್ಧತೆಯ ಲಕ್ಷಣ.

ಈ ತರಹದ ಲಕ್ಷಣಗಳು ಕಂಡಾಗ ನೀವು ಎಚ್ಚೆತ್ತುಕೊಳ್ಳಬೇಕು. ನೀವು ಪ್ರಾಣಾಯಾಮವನ್ನು ಮಾಡಬಹುದು ಮನೆಮದ್ದುಗಳನ್ನು ಮಾಡಿಕೊಳ್ಳಬಹುದು ಅಥವಾ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬಹುದು ಅವರ ಸಲಹೆ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳಬಹುದು. ಒಟ್ಟಾರೆಯಾಗಿ ರಕ್ತ ಶುದ್ಧೀಕರಣದ ಬಗ್ಗೆ ಜಾಗೃತಿಯನ್ನು ವಹಿಸುವುದು ಅತ್ಯವಶ್ಯಕ. ಇಲ್ಲದಿದ್ದಲ್ಲಿ ಅದು ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಕಾಯಿಲೆಗಳು ಬರುವುದಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ಎಷ್ಟು ಸಾಧ್ಯ ಅಷ್ಟು ಬೇಗ ರಕ್ತವನ್ನು ಶುದ್ಧ ಮಾಡುವ ಕಾರ್ಯವನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಸ್ನೇಹಿತರೆ ನೀವು ಕೂಡ ನಿಮ್ಮ ರಕ್ತವನ್ನು ಯಾವಾಗಲೂ ಶುದ್ಧವಾಗಿರುವಂತೆ ನೋಡಿಕೊಳ್ಳಿ ಅದಕ್ಕೆ ಬೇಕಾದ ಪ್ರಾಣಾಯಾಮಗಳನ್ನು ಮಾಡಿ ಇದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ.

Leave a Reply

Your email address will not be published. Required fields are marked *