ಇಂದಿನ ಆಧುನಿಕ ಯುಗದಲ್ಲಿ ಜನರು ಸಾಮಾನ್ಯವಾಗಿ ತನ್ನ ಜೀವನ ಶೈಲಿಯನ್ನು ತಮಗೆ ತಕ್ಕಹಾಗೆ ರೂಢಿಸಿಕೊಂಡಿರುತ್ತಾರೆ ತಮ್ಮ ಕೆಲಸಗಳ ಒತ್ತಡದಿಂದಾಗಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡುವುದಿಲ್ಲ ಹಾಗೂ ದಿನ ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಯೋಗಾಸನಗಳನ್ನು ಮಾಡಲು ಸಮಯ ಕೊರತೆ ಕಂಡುಬರುತ್ತದೆ ಹಿಂದಿನ ಕಾಲದಲ್ಲಿ ಮುಂಜಾನೆಗೇ ಎದ್ದು ಅಂಗಳದಲ್ಲಿ ಕಸಗುಡಿಸಿ ರಂಗೋಲಿ ಇಟ್ಟು ಮನೆ ಇತರ ಕಾರ್ಯಗಳನ್ನು ಮಾಡುತ್ತಿದ್ದರು

ಹಿಂದಿನ ಕಾಲದಲ್ಲಿ ಅತ್ಯಂತ ಜೀವನ ಸುಖಕರವಾಗಿ ಇತ್ತು ಮುಂಜಾನೆ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಂದರೆ ಬೆಳಗಿನ ಜಾವ ನಾಲ್ಕು ನಾಲ್ಕೂವರೆ ಎದ್ದು ವ್ಯಾಯಾಮ ಇಲ್ಲ ಸಣ್ಣದಾದ ನಡಿಗೆ ಮಾಡಿದಲ್ಲಿ ದೇಹದಲ್ಲಿ ನವ ಉಲ್ಲಾಸ ಹಾಗೂ ಮನಸ್ಸಿಗೆ ಖುಷಿ ಆಗುವುದು ನಿಜ ಬ್ರಾಹ್ಮೀ ಮುಹೂರ್ತದಲ್ಲಿ ಯಾವುದೇ ವಾಹನ ಶಬ್ದ ಗೌಜಿ ಗಲಾಟೆ ಇಲ್ಲ ಪರಿಸರ ಪ್ರಶಾಂತವಾಗಿ ಇದ್ದು ಆಮ್ಲಜನಕ ಪೂರೈಕೆ ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ ಹಾಗೂ ನಡಿಗೆ ಇಲ್ಲ ಸಣ್ಣ ಪುಟ್ಟ ವ್ಯಾಯಾಮ ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮ

ಬೆಳಗಿನ ಜಾವದಲ್ಲಿ ನಡಿಗೆ ಇಂದ ಮನಸ್ಸು ಉಲ್ಲಾಸದಿಂದ ಅಲ್ಲದೆ ಯಾರ ಪ್ರೇರಣೆ ಇಲ್ಲದೆ ಸ್ವ ಇಚ್ಛೆಯಿಂದ ಒಂದು ಅರ್ಧ ಕಿಲಮೀಟರ್ ನಡೆದಲ್ಲಿ ನಂತರ ಯೋಗಾಸನ ಮಾಡಿ ಬೆಚ್ಚಗಿನ ಒಂದು ಲೋಟ ನೀರಿನಲ್ಲಿ ಬಾಯಿ ಮುಕ್ಕಳಿಸಿ ಗುಟುಕು ನೀರು ಕುಡಿದಲ್ಲಿ ಜೀವನಕ್ಕೆ ಉತ್ತಮ ಹಾಗೂ ಆರೋಗ್ಯವೂ ಸುಧಾರಣೆ ಆಗುವುದು ಬೆಳಗಿನ ಉಪಹಾರ ಕಾಲದಲ್ಲಿ ಸ್ವಲ್ಪ ಆಹಾರವನ್ನು ಸೇವಿಸಿ ಜಗಿದು ತಿನ್ನುವ ಅಭ್ಯಾಸ ಮಾಡಿ ಇನ್ನೂ 8 ರಿಂದ 9 ರ ಒಳಗಡೆ ಆಹಾರವನ್ನು ಸೇವನೆ ಉತ್ತಮ ತನ್ನ ದಿನಚರಿಯನ್ನು ಖುಷಿಯಿಂದ ನಿರ್ವಹಿಸಿದ ನಂತರ ಮಧ್ಯಾನ ಊಟದವನ್ನು ಸೇವಿಸಿ ಸುಮಾರು ಒಂದರಿಂದ ಎರಡು ಗಂಟೆಯ ಒಳಗಡೆ ಆಹಾರವನ್ನು ಸೇವಿಸಿ

ಸುಮಾರು ಐದು ರಿಂದ ಅರು ಗಂಟೆಯ ಒಳಗಡೆ ಏನಾದ್ರೂ ತರಕಾರಿ ಸೊಪ್ಪು ಇಲ್ಲವೇ ಹಣ್ಣನ್ನು ಸೇವಿಸಿ ಹಸಿಯಾದ ತರಕಾರಿ ಇಲ್ಲ ಜ್ಯೂಸ್ ಅನ್ನು ಸೇವಿಸಿ ಇನ್ನೂ ರಾತ್ರಿ ಎಂಟರಿಂದ 9 ಗಂಟೆಯ ಒಳಗಡೆ ಲಘು ಉಪಹಾರ ಸೇವೇನೆ ಮಾಡಿ ಹಾಗೂ ತನ್ನ ಒತ್ತಡ ಜೀವನ ಬದಿಗಿರಿಸಿ ಸ್ವಲ್ಪ ಸಮಯವನ್ನು ತನ್ನ ಕುಟುಂಬದ ಸದಸ್ಯರ ಜೊತೆ ಕಾಲ ಹರಣ ಮಾಡಿದಲ್ಲಿ ದೇಹ ಹಾಗೂ ಮನಸ್ಸಿಗೆ ಮುದ ನೀಡುವುದು ಊಟ ಆದ ತಕ್ಷಣ ಮಲಗದೆ ಸ್ವಲ್ಪ ನಡಿಗೆ ಮಾಡಿದಲ್ಲಿ ಒಳ್ಳೆಯದು ಇನ್ನೂ ಮಲಗುವ ಮುಂಚೆ ಹಾಸಿಗೆಯ ಮೇಲೆ ಕುಳಿತು ಒಂದು ಇವತ್ತು ಸಲ ಉಸಿರು ನಿಧಾನ ಆಗಿ ಒಳಗೆ ಹಾಗೂ ಹೊರಗೆ ತೆಗೆದು ಕೊಂಡು ನಂತರ ಮಲಗಿದಲ್ಲಿ ನಿದ್ರಾಹೀನತೆ ಕಮ್ಮಿ ಆಗಿ ಒಳ್ಳೆಯ ನಿದ್ದೆ ನಿಮ್ಮದು ಆಗುವುದು

ಪುನಃ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಆ ಅಗೋಚರ ಶಕ್ತಿಯ ಗಾಳಿ ಸೇವೆನೆ ಇಂದ ನಿಮ್ಮ ಮನಸ್ಸು ಉಲ್ಲಾಸಿತ ಆಗುವುದು ಹಾಗೂ ಅಂದಿನ ದಿನ ಎಲ್ಲ ಕೆಲಸ ಕಾರ್ಯದಲ್ಲೂ ನೆಮ್ಮದಿ ಸಿಗುವುದು ಇನ್ನು ಯೋಗಾಸನ ಪ್ರಾಣಾಯಾಮ ನಿಯಮಿತ ನಡಿಗೆ ಮುಂತಾದ ಚಟುವಟಿಕೆ ಇಂದ ಆರೋಗ್ಯ ಹಾಗೂ ಮನಸ್ಸು ಸದಾ ಪ್ರಪುಲ್ಲತೆ ಇಂದ ಇರುವುದು ಎಂದು ಡಾಕ್ಟರ್ ವಿಶ್ವನಾಥ್ ನಿಸರ್ಗ ತಜ್ಞ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *