ಪ್ರಪಂಚದಲ್ಲಿ ಅನೇಕ ರೀತಿಯ ಹಣ್ಣುಗಳನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ ಹಾಗೂ ತಿಂದು ಅದರ ರುಚಿ ಕೂಡಾ ನೋಡಿರುತ್ತೇವೆ, ಪ್ರಕೃತಿ ಅನ್ನೋದು ಅದೆಷ್ಟು ವಿಶಿಷ್ಟ ಅಲ್ವಾ ನಾವು ನೋಡಿರದಂತಹ ಕೇಳಿಯೂ ಇರದಂತಹ ಮತ್ತು ಸೇವನೆ ಮಾಡದೇ ಇರುವಂತ ಹಣ್ಣುಗಳೂ ಕೂಡ ಇರುತ್ತವೆ. ಅವುಗಳನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆಯಂತೂ ನಮಗೆ ಗೊತ್ತೇ ಇರುವುದಿಲ್ಲ ಬಿಡಿ ಹಲವಾರು ಹಣ್ಣುಗಳು ನಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ನಾವು ಅಂತಹ ಹಣ್ಣು ಗಳನ್ನು ಬರೀ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಇನ್ನೂ ಕೆಲವೊಂದು ಹಣ್ಣುಗಳನ್ನು ಕಾಡುಗಳಲ್ಲಿ ಮಾತ್ರವೇ ನೋಡಲು ಸಾಧ್ಯ ಆದರೆ ಇಂತಹ ಹಣ್ಣುಗಳೂ ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಯಕಾರಿ ಎಂದರೆ ನಾವು ತಿನ್ನದೇ ಬಿಡಲಾರೆವು.

ಹೌದು ಅಂತಹ ಹಣ್ಣುಗಳೂ ಸಹ ನಮ್ಮ ಸುತ್ತ ಮುತ್ತಲೂ ಇರುತ್ತವೆ ನಾವಿಂದು ಹೇಳ ಹೊರಟಿರೋ ಹಣ್ಣಿನ ಬಗ್ಗೆ ನೀವು ಈ ವರೆಗೂ ಕೇಳಿರಲು ಸಾಧ್ಯವೇ ಇಲ್ಲ ಬಿಡಿ ಯಾಕಂದ್ರೆ ಈ ಹಣ್ಣು ಬಹುತೇಕ ಜನರಿಗೆ ಗೊತ್ತೇ ಇಲ್ಲ ಮತ್ತವರು ಅದನ್ನು ನೋಡಿರಲಿಕ್ಕೆ ಸಾಧ್ಯವೇ ಇಲ್ಲ ಯಾಕಂದ್ರೆ ಅದೊಂದು ಬಹು ಅಪರೂಪದ ಹಣ್ಣು ಹಾಗಾದ್ರೆ ಆ ಹಣ್ಣು ಯಾವುದು ಅಂತೀರಾ ಮತ್ತು ಅದರ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವಿರ ಹಾಗಾದ್ರೆ ಆ ಹಣ್ಣಿನ ಬಗ್ಗೆ ನಾವು ಕಲೆ ಹಾಕಿರುವ ಒಂದಷ್ಟು ಮಾಹಿತಿಯನ್ನು ನೀಡುತ್ತೇವೆ ಬನ್ನಿ

ನಾವಿಂದು ನಿಮ್ಮ ಮುಂದೆ ಹೇಳಹೊರಟಿರೋ ಹಣ್ಣನ್ನು ಕೆಲವರು ಸೀಮೆ ಹುಣಸೆ ಹಣ್ಣು ಅಂತಲೂ ಮತ್ತೆ ಇನ್ನಷ್ಟು ಜನ ಇದನ್ನು ಇಲಾಚೆ ಹಣ್ಣು ಅಂತಲೂ ಕರೆಯುವವರಿದ್ದಾರೆ ಕೆಲವರಂತೂ ಈ ಹೆಸರುಗಳನ್ನು ಕೇಳಿಯೇ ಇಲ್ಲ ಬಿಡಿ ಹೌದು ಸಾಮಾನ್ಯವಾಗಿ ತುಂಬಾ ಅಪರೂಪದ ಈ ಹಣ್ಣನ್ನು ಬಹಳಷ್ಟು ಜನ ನೋಡಿರಲಿಕ್ಕಿಲ್ಲ ಬಿಡಿ ಆದರೆ ಬಹು ಅಪರೂಪದ ಈ ಹಣ್ಣು ತನ್ನಲಿ ಬಹಳಷ್ಟು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆಯಂತೆ ಹಾಗಾದ್ರೆ ಈ ಹಣ್ಣಿನ ಆರೋಗ್ಯಕಾರಿ ಅಂಶಗಳ ಬಗ್ಗೆ ಮತ್ತು ಆ ಹಣ್ಣಿನ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಹಣ್ಣಿನಲ್ಲಿ ವಿಟಮಿನ್ ಬಿ ಹೆಚ್ಚಾಗಿರುವ ಕಾರಣ ಅದು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ನಮಗೆ ಯಾವುದೇ ಸೋಂಕು ಅಥವಾ ರೋಗಗಳು ತಗುಲದಂತೆ ಕಾಯುವಲ್ಲಿ ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೇ ಈ ಹಣ್ಣು ನಮ್ಮ ದೇಹದಲ್ಲಿನ ರಕ್ತ ಪರಿಚಲನೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ ರಕ್ತ ಪರಿಚಲನೆ ಸರಾಗವಾಗಿ ಆಗುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ರಾಮ ಬಾಣವಾಗಿದೆ.

ಇನ್ನೂ ಈ ಹಣ್ಣನ್ನು ಚಿಕ್ಕ ಮಕ್ಕಳಿಗೆ ತಿನ್ನಲು ಕೊಡುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚುವುದಲ್ಲದೆ ಅವರ ಬುದ್ಧಿಯೂ ಕೂಡಾ ಚುರುಕಾಗುತ್ತದೆ ಅಲ್ಲದೇ ಈ ಹಣ್ಣು ಮೂಲತಃ ಅಮೆರಿಕಾದ ಸಂತತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಏಷ್ಯಾ ಖಂಡದಾದ್ಯಂತ ಇದರ ಖ್ಯಾತಿ ಹಬ್ಬಿದೆ ಮತ್ತು ಇದನ್ನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಾವು ಕೆಲವೊಂದು ಕಡೆಗಳಲ್ಲಿ ಮಾತ್ರ ನೋಡಬಹುದಾಗಿದೆ ಸಾಮಾನ್ಯವಾಗಿ ಬಹು ಅಪರೂಪದ ಈ ಹಣ್ಣು ಕೆಲವು ಹಳ್ಳಿಗಳಲ್ಲಿ ಮಾತ್ರ ಸಧ್ಯಕ್ಕೆ ಲಭ್ಯವಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!