ಸೀಬೆ ಹಣ್ಣನ ಯಾರ್ ತಾನೇ ಇಷ್ಟ ಪಡಲ್ಲ, ಎಲ್ಲರೂ ಬಹಳಷ್ಟು ಇಷ್ಟ ಪಡುವ ಹಣ್ಣು ಇದು ತನ್ನದೇ ವಿಶಿಷ್ಟ ಸ್ವಾದ, ಬಣ್ಣ ಗುಣಗಳನ್ನು ಹೊಂದಿರುತ್ತದೆ. ಸೀಬೆ ಹಣ್ಣನ್ನು ಕೆಲವರು ಪೇರಳೆ ಹಣ್ಣು, ಚೆಪೆ ಹಣ್ಣು ಎಂದೂ ಸಹ ಕರೆಯುತ್ತಾರೆ. ನಾವೇನಾದ್ರೂ ಈ ಸೀಬೆ ಹಣ್ಣಿನ ಮರದ ಹತ್ತಿರ ಹೋದ್ರೆ ಸುಲಭವಾಗಿ ಇದರ ಹಣ್ಣನ್ನು ಏನೋ ಕಿತ್ತುಕೊಂಡು ತಿಂತೀವಿ ಆದ್ರೆ ಇದರ ಎಲೆಗಳ ಬಗ್ಗೆಅದರಲ್ಲಿ ಇರುವ ಆರೋಗ್ಯಕರ ಲಾಭಗಳ ಬಗ್ಗೆ ಗಮನ ಕೊಡದೆ ನಿರ್ಲಕ್ಷ್ಯ ಮಾಡುತ್ತೇವೆ. ಸೀಬೆ ಹಣ್ಣಿನ ಎಲೆಗಳಿಂದ ಏನೆಲ್ಲ ಆರೋಗ್ಯಕರ ಪ್ರಯೋಜನಗಳು ಇವೆ ಅನ್ನೋದನ್ನ ನೋಡೋಣ.
ನಮ್ಮ ದೇಹದಲ್ಲಿ ಬೊಜ್ಜಿನ ಸಮಸ್ಯೆ ಇದ್ದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇದ್ದರೆ ಪೇರಳೆ ಎಲೆ ಉತ್ತಮ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸೀಬೆ ಎಳೆಯಲ್ಲಿ ಇರುವ ಪ್ಲಾವಿನೋಡ್ಸ್ ಅಂಶಗಳು ನಮ್ಮ ದೇಹದಲ್ಲಿ ಇರುವಂತಹ ಅನಾವಶ್ಯಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಪ್ರತೀ ದಿನ ದಿನಕ್ಕೆ ಎರಡು ಬಾರಿಯಂತೆ ಸೀಬೆ ಎಲೆಗಳ ಕಷಾಯವನ್ನು ಕುಡಿಯುವುದರಿಂದ ನಮ್ಮ ದೇಹದ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಕಾಮಾಲೆ ರೋಗಕ್ಕೆ ಇದು ಉತ್ತಮ ಮನೆಮದ್ದು. ಕಾಮಾಲೆ ರೋಗ ಇರುವವರು ಸೀಬೆ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಕಾಮಾಲೆ ರೋಗ ನಿವಾರಣೆ ಆಗುತ್ತದೆ ಎಂದು ಈಗಿನ ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ನಾಲ್ಕೈದು ಸೀಬೆ ಎಲೆಗಳನ್ನು ಸ್ವಚ್ಛವಾಗಿ ತೊಳೆದು ನೀರು ಮತ್ತು ಬೆಲ್ಲ ಹಾಕಿ ಕುದಿಸಿ ಕಷಾಯವನ್ನಾಗಿ ತಯಾರಿಸಿಕೊಂಡಿ ಕುಡಿದರೆ ಕಾಮಾಲೆ ರೋಗ ನಿವಾರಣೆ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಯುವಕ ಯುವತಿಯರಲ್ಲಿ ಕಾಡುವ ಸಮಸ್ಯೆಗಳಲ್ಲಿ ಬೆಗನೆ ಕೂದಲು ಉದುರುವುದು ಹಾಗೂ ತುಂಡಾಗುವುದು. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಉತ್ಪನ್ನಗಳ ಬಳಕೆಯಿಂದ ಸಮಸ್ಯೆ ಇನ್ನೂ ಹೆಚ್ಚೇ ಆಗುತ್ತದೆ ಹಾಗಾಗಿ ಕೂದಲು ಉದುರುವ ಸಮಸ್ಯೆ ಇದ್ದರೆ 8 ರಿಂದ 10 ಸೀಬೆ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಒಂದು ಲೀಟರ್ ನೀರಿಗೆ ಹಾಕಿ 10 ರಿಂದ ಹದಿನೈದು ನಿಮಿಷಗಳ ಕಾಲ ಕುದಿಸಿ ಆರಿಸಿ ಆ ನೀರನ್ನು ನಂತರ ತಲೆ ಹಾಗೂ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು. ನಂತರ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಸೊಮೊಆಗಿ ಕೂದಲು ಬೆಳೆಯುತ್ತದೆ.
ನಮ್ಮ ಮುಖದ ಮೇಲೆ ಆಗುವ ಮೊಡವೆಗಳಿಗೂ ಸಹ ಸೀಬೆ ಎಲೆ ಮನೆ ಮದ್ದು. ಮುಖದ ಮೇಲೆ ಮೊಡವೆಗಳು ಆಗಿದ್ದರೆ ಸೀಬೆ ಎಲೆಗಳಿಂದ ಪೇಸ್ಟ್ ಮಾಡಿಕೊಂಡು ಅದನ್ನ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆ ಆಗುತ್ತವೆ. ಬಾಯಿಯಲ್ಲಿ ಹುಣ್ಣು ಆಗಿದ್ದರೂ ಸಹ ಸೀಬೆ ಎಲೆಗಳನ್ನು ಅರೆದು ಬಾಯಿ ಹುಣ್ಣು ಆದ ಜಾಗಕ್ಕೆ ಹಚ್ಚಿದರೆ ಸಮಸ್ಯೆ ನಿವಾರಣೆ ಆಗುತ್ತದೆ. ಶ್ವಾಸಕೋಶದ ಸಮಸ್ಯೆ ಇರುವವರು ಸಹ ಪೇರಳೆ ಎಲೆಯನ್ನು ಬಳಸಿದರೆ ಉತ್ತಮ. ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ ಹಾಗಾಗಿ ಶ್ವಾಸಕೋಶದ ಸಮಸ್ಯೆಗಳಿಗೆ ಪೇರಳೆ ಎಲೆ ರಾಮಬಾಣ. ಸೀಬೆ ಎಲೆಗಳನ್ನು ಅಗೆದು ತಿನ್ನುವುದರಿಂದ ಹಲ್ಲಿನ ನೋವು , ದಂತಕ್ಷಯ , ಬಾಯಿಯ ದುರ್ವಾಸನೆ ನಿವಾರಣೆ ಆಗುತ್ತದೆ. ಸೀಬೆ ಎಲೆಯ ಕಷಾಯದ ಸೇವನೆಯಿಂದ ಹೊಟ್ಟೆ , ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಗುಣ ಆಗುತ್ತವೆ. ಕ್ಯಾನ್ಸರ್ ರೋಗವನ್ನು ತಡೆಯುವ ಶಕ್ತಿ ಸಹ ಈ ಎಲೆಗಳಿಗೆ ಇದೆ. ಸೀಬೆ ಎಲೆಗಳ ಕಷಾಯ ಸಕ್ಕರೆ ಕಾಯಿಲೆಗೆ ಉತ್ತಮ ರಾಮ ಬಾಣ. ದೇಹದಲ್ಲಿ ಇನ್ಸುಲಿನ್ ಅಂಶವನ್ನ ಉತ್ಪತ್ತಿ ಮಾಡಲು ನೆರವಾಗುತ್ತದೆ. ದಿನಕ್ಕೆ ಎರಡು ಬಾರಿ ಈ ಸೀಬೆ ಎಲೆಯ ಕಷಾಯವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದು.