ಒಂದು ದ್ವಿದಳ ಧಾನ್ಯ. ಕಡಲೆ ಸಾಕಷ್ಟು ಪೋಷಕಾಂಶಗಳ ಆಗರ. ಈ ಕಡಲೆ ಬೀಜಗಳನ್ನು ನೆನೆಸಿಟ್ಟು ತಿನ್ನುವುದರಿಂದ ಹಲವಾರು ಆರೋಗ್ಯಕರ ಲಾಭಗಳು ನಮ್ಮ ದೇಹಕ್ಕೆ ಇವೆ ಎಂದು ಹೇಳುತ್ತಾರೆ. ಕದಲೆಯನ್ನು ನಾವು ಅಡುಗೆಯಲ್ಲಿ ಬಳಸುತ್ತೇವೆ ಹಾಗೂ ಹಕವಾರು ರೀತಿಯ ಸಿಹಿ ತಿನಿಸುಗಳನ್ನು ಸಹ ಮಾಡಲಾಗುತ್ತದೆ. ಹೀಗೆ ಈ ಕಡಲೆಯನ್ನು ನಾವು ಸೇವಿಸುವುದರಿಂದ ನಮ್ಮ ದೇಹಕ್ಕೆ ಎಷ್ಟುಒಂದು ಆರೋಗ್ಯಕರ ಲಾಭಗಳು ಇವೆ ಅನ್ನೋದನ್ನ ತಿಳಿದುಕೊಳ್ಳೋಣ.

ಕಡಲೆಯಲ್ಲಿ ಫೈಬರ್ ಅಂಶಗಳು ಹೆಚ್ಚಾಗಿ ಇರುತ್ತದೆ. ಇದು ಶರೀರದಲ್ಲಿ ಇರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಮಾಂಸಾಹಾರ ಸೇವನೆ ಮಾಡದವರಿಗೆ ಕಡಲೆ ಒಂದು ವರದಾನ ಇದ್ದ ಹಾಗೆಯೇ. ಯಾಕಂದ್ರೆ ಮಾಂಸಾಹಾರದಲ್ಲಿ ಇರುವಂತಹ ಪ್ರೊಟೀನ್ ಗಳು ಈ ಕಡಲೆಯಲ್ಲಿ ಇವೆ. ಪೊಟ್ಯಾಶಿಯಂ, ಮಗ್ನೇಶಿಯಂ, ಕ್ಯಾಲ್ಶಿಯಂ ಅಂತಹ ಎಷ್ಟೋ ರೀತಿಯ ಮಿನರಲ್ಸ್ ಕಡಲೆಯಲ್ಲಿ ಇರುತ್ತವೆ. ಕಡಲೆ ಬಿಪಿ ನಿಯಂತ್ರಣ ಮಾಡುವಲ್ಲಿ ಸಹಾಯಕಾರಿ ಆಗಿದೆ. ಹೆಚ್ಚು ಹಸಿವು ಆಗದ ಹಾಗೇ ನೋಡಿಕೊಳ್ಳುತ್ತದೆ ಈ ಮೂಲಕ ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹ ನೆರವಾಗುತ್ತದೆ.

ಪ್ರತೀ ದಿನ ಕಡಲೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಇರುವಂತಹ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ. ಹಾಗಾಗಿ ರಕ್ತ ಹೀನತೆಯಿಂದ ಬಳಲುವವರಿಗೆ ಕಡಲೆ ಎಷ್ಟೋ ಉತ್ತಮವಾಗಿದೆ. ಕಡಲೆಯಲ್ಲಿ ಅಮೈನೋ ಆಮ್ಲ, ಟಿಪ್ಟಾಪಾನ್, ಸೇರಟೋನಿಕ್ ರೀತಿಯ ಅತ್ಯಾವಶ್ಯಕ ಪೋಷಕಾಂಶಗಳು ವಿಶೇಷವಾಗಿ ದೊರೆಯುತ್ತವೆ. ಇವು ಚೆನ್ನಾಗಿ ನಿದ್ರೆ ಬರುವಂತೆ ನೋಡಿಕೊಳ್ಳುತ್ತದೆ. ಕಡಲೆಯಲ್ಲಿ ಒಮೆಗ 3 ಆಂಟಿ ಆಸಿಡ್, ಅಲ್ಪಾಲಿನೊಲಿಕ್ ಆಸಿಡ್ ಇವು ಹೆಚ್ಚಾಗಿ ಇರುತ್ತವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಾಶ ಮಾಡುವುದರ ಜೊತೆಗೆ ಹೃದಯದ ಕಾಯಿಲೆಯನ್ನು ಸಹ ನಿವಾರಣೆ ಮಾಡಲು ಸಹಾಯಕಾರಿ ಆಗುತ್ತದೆ. ಐರನ್, ಪ್ರೊಟೀನ್, ಮಿನರಲ್ಸ್ ಗಳು ಕಡಲೆಯಲ್ಲಿ ಹೇರಳವಾಗಿ ಇರುವುದರಿಂದ ಕಡಲೆ ಶರೀರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಡಲೆಯಲ್ಲಿ ಇರುವಂತಹ ಕ್ಯಾಲ್ಶಿಯಂ ಹಾಲಿನಲ್ಲಿ ಇರುವ ಕ್ಯಾಲ್ಶಿಯಂ ಗೆ ಸಮಾನವಾಗಿದೆ. ಈ ಮೂಲಕ ಮೂಳೆಗಳಿಗೆ ಸಹ ಹೆಚ್ಚಿನ ಶಕ್ತಿ ದೊರೆಯುತ್ತದೆ.

ಕಡಲೆಯಲ್ಲಿ ಪಾಸ್ಪರಸ್ ಅಂಶವು ಹೆಚ್ಚಾಗಿ ಇರುವುದರಿಂದ ಇದು ನಮ್ಮ ಶರೀರದಲ್ಲಿ ಹೆಚ್ಚಾಗಿ ಇರುವ ಅನಾವಶ್ಯಕ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಳದಿ ಕಾಮಲೆ ಇರುವವರು ಕಡಲೆಯನ್ನು ಸೇವಿಸುವುದರಿಂದ ಗುಣ ಹೊಂದಬಹುದು. ಮ್ಯಾಗ್ನಾಸಿಸ್ ಪಾಸ್ಪರಸ್ ಅಂಶಗಳು ಹೆಚ್ಚಾಗಿ ಇರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ರಾತ್ರಿ ನೆನೆಸಿಟ್ಟ ಕಡಲೆಗೆ ಉಪ್ಪು ಶುಂಠಿ ಜೀರಿಗೆ ಪುಡಿ ಬೆರೆಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಕಡಲೆಯನ್ನು ಸಿಪ್ಪೆ ತೆಗೆಯದೇ ಹಾಗೇ ಸೇವಿಸಿದಲ್ಲಿ ಇದು ಜೀರ್ಣಕ್ರಿಯೆಗೆ ಸಹಕಾರಿ ಆಗುತ್ತದೆ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕಡಲೆಯ ಸೇವನೆ ಮಾಡುವುದರಿಂದ ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಕಡಲೆಯ ಸೇವನೆ ಮಾಡುವುದರಿಂದ ಪದೇ ಪದೇ ಮೂತ್ರ ಬರುವ ಸಮಸ್ಯೆಯನ್ನು ಸಹ ಹೋಗಲಾಡಿಸಿಕೊಳ್ಳಬಹುದು. ಕಡಲೆಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಮೂತ್ರಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆ ಆಗುತ್ತವೆ. ಕಡಲೆ ಹಿಟ್ಟಿನ ಜೊತೆಗೆ ಸ್ವಲ್ಪ ಅರಿಷಿನವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮ ಹೊಳೆಯುವಂತೆ ನೋಡಿಕೊಳ್ಳುತ್ತದೆ. ಮಹಿಳೆಯರಿಗೂ ಸಹ ಕಡಲೇಕಾಲು ಉತ್ತಮ ಪ್ರಯೋಜನಕಾರಿ ಆಗಿದೆ. ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ಹಾಗೂ ಮೈಸ್ಟ್ರೋಸ್ಟೋನ್ ಗಳು ಸ್ಥನ ಕ್ಯಾನ್ಸರ್ ಬರುವಂತಹ ರೋಗಗಳನ್ನು ನಾಶ ಮಾಡುತ್ತವೆ. ಅಷ್ಟೇ ಅಲ್ಲದೆ ಪುರುಷರಲ್ಲಿ ಲೈಂ-ಗಿಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳುತ್ತದೆ. ಇವಿಷ್ಟು ಕಡಲೇಕಾಳಿನ ಆರೋಗ್ಯಕರ ಲಾಭಗಳು.

Leave a Reply

Your email address will not be published. Required fields are marked *