ರಕ್ತಹೀನತೆ ನಿವಾರಿಸಿ ಶರೀರಕ್ಕೆ ರಕ್ತವೃದ್ಧಿಸುವ ಗರಿಕೆ ಕಷಾಯ

0 4

ಗರಿಕೆ ಇದು ಒಂದು ವಿಧದ ಸಸಿವಾಗಿದೆ. ಹಾಗೆಯೇ ಇದನ್ನು ದೇವರಿಗೆ ಸಹ ಹಾಕುತ್ತಾರೆ. ದೇವರು ಗಣೇಶನಿಗೆ ಇದು ಎಂದರೆ ಬಹಳ ಪ್ರೀತಿ. ಆದ್ದರಿಂದ ಗಣೇಶನ ಭಕ್ತರು ಗರಿಕೆಯನ್ನು ಅರ್ಪಿಸುತ್ತೇನೆ ಎಂದು ದೇವರಿಗೆ ಹರಕೆ ಹೊತ್ತು ಕೊಳ್ಳುತ್ತಾರೆ. ಹೆಚ್ಚಾಗಿ 21 ಅಥವಾ 108 ಗರಿಕೆಗಳನ್ನು ಕೊಯ್ದು ಅರ್ಪಿಸುತ್ತಾರೆ. ಹಾಗೆಯೇ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪೂಜೆಗೆ ಬಳಸಿದ ಗರಿಕೆಯನ್ನು ಒಗೆಯುತ್ತಾರೆ. ಆದರೆ ಇದನ್ನು ಒಗೆಯಬಾರದು. ಏಕೆಂದರೆ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದೇವರಿಗೆ ಅರ್ಪಿಸಿದ ಗರಿಕೆಯನ್ನು ತಂದು ಚೆನ್ನಾಗಿ ಕಟ್ ಮಾಡಬೇಕು. ಇದಕ್ಕೆ ಅಗಸೆಬೀಜ, ಬೆಲ್ಲ ಮತ್ತು ಕರಿಎಳ್ಳನ್ನು ಹಾಕಬೇಕು. ಮೊದಲು ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಎರಡು ಚಮಚ ಜೋನಿಬೆಲ್ಲವನ್ನು ಹಾಕಬೇಕು. ನಂತರದಲ್ಲಿ ಅದಕ್ಕೆ ಒಂದು ಚಮಚ ಅಗಸೆಬೀಜ ಹಾಕಬೇಕು. ಹಾಗೆಯೇ ಒಂದು ಚಮಚ ಬಿಳಿ ಎಳ್ಳನ್ನು ಹಾಕಬೇಕು.

ಬೇಕಾದಲ್ಲಿ ಕರಿ ಎಳ್ಳನ್ನು ಹಾಕಬಹುದು. ಇದನ್ನು ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದ್ದಿದ ನಂತರ ಸೋಸಿಕೊಂಡು ಕುಡಿಯಬೇಕು. ಇದು ಕುದ್ದಿದ ನಂತರ ಒಂದು ಲೋಟ ಇರುವುದು ಅರ್ಧ ಆಗಬೇಕು. ಆದರೆ ಇದನ್ನು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು. ಎಂದರೆ ಬೆಳಿಗ್ಗೆ ಎದ್ದ ಕೂಡಲೇ ಸೇವನೆ ಮಾಡಬೇಕು. ಇದರಿಂದ ಎಲ್ಲಾ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತದೆ. ಇದರಿಂದ ದೇವರ ಪ್ರಸಾದವನ್ನು ಒಗೆದಂತೂ ಆಗುವುದಿಲ್ಲ. ಹಾಗೆಯೇ ದೇವರ ಪ್ರಸಾದ ಹೊಟ್ಟೆಗೆ ಆದಂತೆ ಆಗುತ್ತದೆ.

ಇದರಲ್ಲಿ ಕ್ಲೋರೋಫಿಲ್ ಎನ್ನುವ ಅಂಶ ಇರುತ್ತದೆ. ಇದು ಮನುಷ್ಯನ ದೇಹದ ರಕ್ತವನ್ನು ಸ್ವಚ್ಛ ಮಾಡುತ್ತದೆ. ಈ ಕಷಾಯವನ್ನು ಸುಮಾರು ಮೂರು ತಿಂಗಳ ಕಾಲ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಕೆಲವು ಮಹಿಳೆಯರಿಗೆ ಮಾಸಿಕ ತೊಂದರೆ ಇರುತ್ತದೆ. ಇದನ್ನು ಈ ರೀತಿಯಾಗಿ ಸೇವನೆ ಮಾಡುವುದರಿಂದ ಮಾಸಿಕ ತೊಂದರೆಗಳು ಕಡಿಮೆಯಾಗುತ್ತವೆ. ಆದ್ದರಿಂದ ಗರಿಕೆಯನ್ನು ತಂದು ದೇವರಿಗೆ ಹಾಕಿ ನಂತರ ಔಷಧಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು.

Leave A Reply

Your email address will not be published.