ತರಕಾರಿಗಳು ಬಹಳ ಇದೆ. ಒಂದೊಂದು ರೀತಿಯ ತರಕಾರಿಗಳು ಒಂದೊಂದು ರೀತಿಯ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಹಾಗೆಯೇ ಒಂದೊಂದು ರೀತಿಯ ವಿಟಮಿನ್ ಗಳನ್ನು ಹೊಂದಿರುತ್ತವೆ. ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶ ದೊರೆಯುತ್ತದೆ. ಹಾಗೆಯೇ ಕೆಲವು ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನಾವು ನಾಲ್ಕು ತರಕಾರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪಾಲಕ್ ಸೊಪ್ಪು ಇದು ಸೊಪ್ಪುಗಳಲ್ಲಿ ಒಂದು ವಿಧವಾಗಿದೆ. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ದೇಹಕ್ಕೆ ವಿಟಮಿನ್ ಎ ಯನ್ನು ನೀಡುತ್ತದೆ. ಹಾಗೆಯೇ ಇದರ ಜೊತೆಗೆ ವಿಟಮಿನ್ ಕೆ ಯನ್ನು ಸಹ ನೀಡುತ್ತದೆ. 2015ರ ವರದಿಯ ಪ್ರಕಾರ ಪಾಲಕ್ ಸೊಪ್ಪು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಹಾಗೆಯೇ ಇದು ಅತಿ ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಇದು ಸಹಕಾರಿ. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಗಳನ್ನು ದೇಹಕ್ಕೆ ನೀಡುತ್ತದೆ.

ನಂತರದಲ್ಲಿ ಕ್ಯಾರೆಟ್. ಇದನ್ನು ಕನ್ನಡದಲ್ಲಿ ಗಜ್ಜರಿ ಎಂದು ಕರೆಯುತ್ತಾರೆ. ಇದು ಕ್ಯಾರೋಟಿನ್ ಅಂಶವನ್ನು ಹೊಂದಿದೆ ಆದ್ದರಿಂದ ಇದು ಕ್ಯಾರೆಟ್ ಬಣ್ಣದಲ್ಲಿರುತ್ತದೆ. ಇದಕ್ಕೆ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿ ಇದೆ ಹಾಗೆಯೇ ಇದನ್ನು ತಿಂದರೆ ಕಣ್ಣಿಗೆ ಬಹಳ ಒಳ್ಳೆಯದು. ವಿಟಮಿನ್ ಎ ಯನ್ನು ಇದು ದೇಹಕ್ಕೆ ದೊರಕಿಸುತ್ತದೆ. ಹಾಗೆಯೇ ಇದನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಉಪ್ಪಿನಕಾಯಿಗಳಲ್ಲಿ ಸಹ ಬಳಸುತ್ತಾರೆ.

ಬೀಟ್ರೂಟ್ ಇದು ಕೆಂಪು ಬಣ್ಣವನ್ನು ಹೊಂದಿದ ತರಕಾರಿ ಆಗಿದೆ. ಇದು ಪೊಟ್ಯಾಷಿಯಂ, ಪೋಲೆಟ್ ಗಳನ್ನು ಅಧಿಕವಾಗಿ ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. 2012ರ ಅಧ್ಯಯನದ ಪ್ರಕಾರ ದಿನವೂ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಹಾಗೇ ರಕ್ತದೊತ್ತಡ ಕೂಡ ಕಡಿಮೆ ಆಗುತ್ತದೆ. ಇದರಿಂದ ಮಧುಮೇಹ ಇರುವವರು ಸಹ ನಿಯಂತ್ರಣದಲ್ಲಿಡಬಹುದು.

ಈರುಳ್ಳಿ ಇದು ಬಹುಮುಖ್ಯವಾದ ಪೌಷ್ಟಿಕಾಂಶಗಳನ್ನು ಹೊಂದಿರುವ ತರಕಾರಿ ಆಗಿದೆ. ಇದನ್ನು ಎಲ್ಲರೂ ಇಷ್ಟಪಡುವುದಿಲ್ಲ. ಏಕೆಂದರೆ ಇದನ್ನು ತಿಂದರೆ ಬಾಯಿವಾಸನೆ ಬರುತ್ತದೆ. ಹಾಗೆಯೇ ಇದು ಬಹಳ ಪರಿಮಳ ಇರುತ್ತದೆ. ಆದರೆ ಇದು ದೇಹಕ್ಕೆ ಬಹಳ ಒಳ್ಳೆಯದು. ಇದು ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಮ್ಯಾಂಗನೀಸ್ ಹೊಂದಿದೆ. ಇದು ಸಲ್ಫರ್ ನ್ನು ಹೊಂದಿರುವುದರಿಂದ ಅಧ್ಯಯನಗಳ ಪ್ರಕಾರ ಇದು ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಎಲ್ಲಾ ತರಕಾರಿಗಳನ್ನು ತಿನ್ನಬೇಕು.

Leave a Reply

Your email address will not be published. Required fields are marked *