ಸ್ನೇಹಿತರೆ ಇಂಗು ಎನ್ನುವುದು ಅಡಿಗೆಯಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುವ ವಸ್ತುವಾಗಿದೆ. ಆದರೆ ಆಯುರ್ವೇದದಲ್ಲಿ ಒಂದು ವೇಳೆ ನೀವು ಪ್ರತಿ ದಿನ ಇಂಗನ್ನು ಹೊಕ್ಕಳಿಗೆ ಹಚ್ಚಿಕೊಂಡರೆ ಅದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಕೂಡ ಸಾಕಷ್ಟಿವೆ. ಹಾಗಿದ್ದರೆ ಇದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ನೀವು ಹೊಟ್ಟೆಯ ನೋ’ವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಪ್ರತಿ ದಿನ ಸಾಸಿವೆ ಎಣ್ಣೆಗೆ ಇಂಗನ್ನು ಸೇರಿಸಿ ಪೇಸ್ಟ್ ಮಾಡಿ ತಯಾರಿಸಿಕೊಳ್ಳಿ. ನಂತರ ಪ್ರತಿದಿನ ಬಿಟ್ಟು ಬಿಡದಂತೆ ಈ ಪೇಸ್ಟ್ ಅನ್ನು ನಿಮ್ಮ ಹೊಕ್ಕಳಿಗೆ ಹಚ್ಚಿಕೊಳ್ಳಬೇಕು. ಇದರಿಂದಾಗಿ ನೀವು ದಿನಾಲು ಎಷ್ಟೇ ದೊಡ್ಡಮಟ್ಟದ ಹೊಟ್ಟೆಯ ಸಮಸ್ಯೆಯನ್ನು ಹೊಂದಿದ್ದರೂ ಕೂಡ ಇದು ಕ್ಷಣಮಾತ್ರದಲ್ಲಿ ನಿವಾರಣೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವ್ಯಾವುದೋ ಔಷಧಿ ಕ್ರಮಗಳನ್ನು ಅನುಸರಿಸುವ ಬದಲು ಈ ಔಷಧಿ ಕ್ರಮವನ್ನು ಅನುಸರಿಸಿದರೆ ಖಂಡಿತವಾಗಿ ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ.
ಇಂದಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಕೂಡ ಎಲ್ಲರೂ ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಸೆಫೆಟಿಡಾವನ್ನು ತೆಂಗಿನ ಜೊತೆಗೆ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಹೊಕ್ಕಳಿಗೆ ಹತ್ತಿಯ ಸಹಾಯದಿಂದ ಹಾಕಿಕೊಳ್ಳಿ. ಇದರಿಂದಾಗಿ ನೀವು ಅನುಭವಿಸುತ್ತಿರುವ ಗ್ಯಾಸ್ಟಿಕ್ ಅರ್ಜಿಣ ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳ ನಿವಾರಣೆ ಆಗಲಿದೆ. ಇದು ಅತ್ಯಂತ ಪರಿಣಾಮಕಾರಿ ಕ್ರಮವು ಕೂಡ ಹೌದಾಗಿದೆ.
ಇನ್ನು ಪ್ರತಿದಿನ ಹೊಕ್ಕಳಿಗೆ ಇಂಗನ್ನು ಆಲಿವ್ ಎಣ್ಣೆಯ ಜೊತೆಗೆ ಮಿಶ್ರಣ ಮಾಡಿ ಹಚ್ಚಿಕೊಂಡರೆ ನಿಮ್ಮ ಹೊಟ್ಟೆ ತಂಪಾಗಿರುತ್ತದೆ ಎಂಬುದಾಗಿ ಕೂಡ ಈಗಾಗಲೇ ವೈದ್ಯಕೀಯವಾಗಿ ಸಾಬೀತಾಗಿದೆ. ಈ ಔಷಧೀಯ ಕ್ರಮಗಳನ್ನು ನೀವು ಕೂಡ ನಿಮ್ಮ ಜೀವನದಲ್ಲಿ ಪ್ರಯೋಗಿಸಬಹುದಾಗಿದ್ದು ಖಂಡಿತವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂಗು ಕೇವಲ ಅಡಿಗೆಗೆ ರುಚಿಯನ್ನು ಹೆಚ್ಚಿಸುವುದರಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಕೂಡ ಯಶಸ್ವಿಯಾಗಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.