ದಾಸವಾಳದ ಹೂವಿನಲ್ಲಿ ಹತ್ತಾರು ಬಗೆಯ ಆರೋಗ್ಯಕರ ಅಂಶಗಳು ಇವೆ ಎನ್ನುವುದು ಹಲವಾರು ಜನರಿಗೆ ಗೊತ್ತಿಲ್ಲ. ದಾಸವಾಳದ ಹೂವು ಕೇವಲ ಕೂದಲಿನ ಬೆಳವಣಿಗೆಗೆ ಮಾತ್ರ ಒಳ್ಳೆಯದು ಎನ್ನುವುದು ಕೆಲವರಿಗೆ ತಿಳಿದಿದೆ. ಇದಲ್ಲದೆ ಮಹಿಳೆಯರಿಗೆ ಹಲವಾರು ಸಮಸ್ಸ್ಯೆಗಳಿಗೆ ಕೂಡಾ ಇದು ಪ್ರಯೋಜನಕಾರಿ ಆಗಿದೆ. ಈ ಲೇಖನದ ಮೂಲಕ ನಾವು ದಾಸವಾಳ ಹೂವಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ದಾಸವಾಳ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಇರುತ್ತವೆ. ಶೀತ ಕೆಮ್ಮು ನೆಗಡಿ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದರೆ ದಾಸವಾಳ ಹೂವನ್ನು ತಿನ್ನುವುದರಿಂದ ಅಥವಾ ದಾಸವಾಳ ಹೂವಿನಿಂದ ಟೀ ಮಾಡಿಕೊಂಡು ಕುಡಿಯುವುದರಿಂದ ಇವುಗಳು ಕಡಿಮೆಯಾಗುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿರುವ ಬೇಡವಾದ ಕಲ್ಮಶಗಳನ್ನು ಹೊರಹಾಕಲು ದಾಸವಾಳದ ಹೂವು ಸಹಾಯಕಾರಿಯಾಗುತ್ತದೆ. ದಾಸವಾಳದ ಹೂವು ನಮ್ಮ ದೇಹದಲ್ಲಿ ಶಕ್ತಿವರ್ಧಕವಾಗಿ ಯು ಕೂಡ ಕೆಲಸ ಮಾಡುತ್ತದೆ. ನಮ್ಮಲ್ಲಿ ವಯಸ್ಸು ಹೆಚ್ಚಾಗಿ ಸೌಂದರ್ಯ ಕಡಿಮೆಯಾಗುವುದನ್ನು ಯಾರು ಕೂಡ ಬಯಸುವುದಿಲ್ಲ ಹಾಗಾಗಿದಾಸವಾಳದ ಹೂವನ್ನು ಟೀ ಮಾಡಿಕೊಂಡು ಕುಡಿಯುವುದರಿಂದ ಬಹಳ ಬೇಗನೆ ವಯಸ್ಸಾದಂತೆ ಕಾಣುವುದನ್ನು ನಾವು ತಡೆಯಬಹುದು. ಇದು ನಮ್ಮ ಮುಖದ ಸೌಂದರ್ಯಕ್ಕೆ ಬಂದರೆ ಮುಖದ ಮೇಲೆ ಮೊಡವೆಗಳು ಉಂಟಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಕ್ರೀಮುಗಳನ್ನು ಹಾಗೂ ಹಲವಾರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ. ಇವುಗಳ ಬದಲು ಪ್ರತಿದಿನ ದಾಸವಾಳದ ಹೂವಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಮುಖದ ಮೇಲೆ ಆಗಿರುವಂತಹ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಇದು ಇನ್ನು ಮುಂದೆ ಮೊಡವೆಗಳು ಆಗದಂತೆ ತಡೆಯುತ್ತದೆ ಹಾಗೂ ನಮ್ಮ ಚರ್ಮ ಕೂಡ ಕಾಂತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ದಾಸವಾಳದ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ಗಳು ಹಾಗೂ ವಿಟಮಿನ್ ಸಿ ಅಧಿಕವಿರುವುದರಿಂದ ದಾಸವಾಳ ಹೂವನ್ನೂ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಅಂಶ ಹೆಚ್ಚುತ್ತದೆ ಹಾಗೂ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಯು ಸಹ ನೋಡಿಕೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆ ಇರುವವರು ಹಾಗೂ ಒಣ ಚರ್ಮ ಸಮಸ್ಯೆ ಇರುವವರು ದಾಸವಾಳದ ಹೂವನ್ನು ಸೇವಿಸುವುದು ಬಹಳ ಉಪಯುಕ್ತ ಎನ್ನಬಹುದು. ಇನ್ನು ಕೆಲವರಿಗೆ ಸರಿಯಾಗಿ ಹೊಟ್ಟೆ ಹಸಿವಾಗದೆ ಊಟ ಕೂಡ ಸರಿಯಾಗಿ ಮಾಡದೆ ನಿಶ್ಯಕ್ತಿ ಉಂಟಾಗುತ್ತದೆ.

ಸರಿಯಾಗಿ ಹೊಟ್ಟೆ ಹಸಿವು ಉಂಟಾಗಲು ಉತ್ತಮ ಪರಿಹಾರ ಎಂದರೆ ದಾಸವಾಳದ ಹೂವನ್ನು ಸೇವಿಸುವುದು ಆಗಿದೆ. ಕೂದಲು ಉದುರುವ ಸಮಸ್ಯೆ ಇದ್ದವರಿಗೂ ಕೂಡ ದಾಸವಾಳದ ಹೂವು ಬಹಳ ಪ್ರಯೋಜನಕಾರಿ. ಕೂದಲು ಉದುರುವ ಸಮಸ್ಯೆ ಇರುವವರು ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕುದಿಸಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತರಾಗಬಹುದು ಹಾಗೂ ಅಷ್ಟೇ ಅಲ್ಲದೆ ಪ್ರತಿದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಕಾಣುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕೂಡ ದಿನಕ್ಕೆ ಒಂದು ದಾಸವಾಳದ ಹೂವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬಹುದು ಹಾಗೂ ತುಂಬಾ ಉಷ್ಣಾಂಶ ಪ್ರಕೃತಿ ಇರುವವರು ಕೂಡ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಳಿ ಬಣ್ಣದ ದಾಸವಾಳದ ಹೂವಿನಲ್ಲಿ ನಮ್ಮ ದೇಹಕ್ಕೆ ತಂಪು ನೀಡುವ ಅಂಶ ಹೆಚ್ಚಾಗಿರುವುದರಿಂದ ಆದಷ್ಟು ಬಿಳಿಬಣ್ಣದ ಹೂವನ್ನೇ ಬಳಸುವುದು ಒಳ್ಳೆಯದು ನಮ್ಮ ಕಣ್ಣಿನ ಆರೋಗ್ಯಕ್ಕೆ ಕೂಡ ದಾಸವಾಳದ ಹೂವು ತುಂಬಾ ಒಳ್ಳೆಯದು.

ದಾಸವಾಳದ ಹುವಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಗುಣವನ್ನು ನಿವಾರಿಸುತ್ತದೆ. ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡುಬರುತ್ತದೆ ಈ ಸಮಸ್ಯೆ ಇರುವವರು ಪ್ರತಿದಿನ ಒಂದು ದಾಸವಾಳದ ಹೂವನ್ನು ತಿನ್ನುವುದರಿಂದ ಬಿಳುಪು ಹೋಗುವುದನ್ನು ತಡೆಯಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ದಾಸವಾಳದ ಹೂವಿನ ಅಂಶ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದಾಸವಾಳದ ಹೂವಿನ ಕಷಾಯ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಅತಿಯಾದ ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ.

ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸಲು ದಾಸವಾಳ ಉತ್ತಮ ಸಹಾಯಕಾರಿ. ಇದರ ಜ್ಯೂಸ್ ಕುಡಿಯುವುದರಿಂದ ಹೃದಯ ಸ್ತಂಭನಕ್ಕೆ ಕಾರಣವಾಗಿರುವ ಅಥವಾ ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಹಾಗೂ ಇದರಿಂದ ನಮಗೆ ಹಾರ್ಟ್ ಅಟ್ಯಾಕ್ ಆಗದಂತೆ ಕೂಡಾ ನೋಡಿಕೊಳ್ಳುತ್ತದೆ. ಮಧುಮೇಹ ಮತ್ತು ಕಿಡ್ನಿ ಸಮಸ್ಯೆ ಇಂದ ಬಳಲುತ್ತಾ ಇದ್ದರೆ ದಾಸವಾಳದ ಹೂವಿನ ರಸವನ್ನು ಸೇವಿಸಬೇಕು. ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸಲು ಸಹಾಯಕಾರಿ. ರಕ್ತ ಹೀನತೆಯಿಂದ ಬಳಲುವವರಿಗೆ ಇದೊಂದು ಉತ್ತಮ ಔಷಧಿ. ದಾಸವಾಳದ ಎಣ್ಣೆ ಕೂದಲಿಗೆ ಹೊಳಪು ನೀಡುತ್ತದೆ ಹಾಗೂ ಜೊತೆಗೆ ಚರ್ಮಕ್ಕೆ ಕೂಡಾ ಹೊಳಪು ನೀಡುತ್ತದೆ.

ದಾಸವಾಳದ ಹೂವು ಮತ್ತು ಎಲೆಗಳನ್ನು ಸುಟ್ಟು ಅದರ ಬೂದಿಯನ್ನು ಹಚ್ಚಿದರೆ ಕಣ್ಣಿನ ಹುಬ್ಬುಗಳು ಹೊಳಪನ್ನು ಪಡೆಯುತ್ತದೆ. ನಮ್ಮ ಜೀರ್ಣ ಕ್ರಿಯೆ ಸರಿಯಾಗಿ ನಡೆಸಲು ದಾಸವಾಳದ ಹೂವು ಸಹಕರಿಸುತ್ತದೆ. ಹಾಗಾಗಿ ಚೀನಾದಲ್ಲಿ ದಾಸವಾಳದ ಹೂವಿನ ಉಪ್ಪಿನಕಾಯಿ ತಯಾರಿಸಿ ಕೂಡಾ ಸೇವಿಸುತ್ತಾರೆ. ದಾಸವಾಳದ ಗಿಡದ ಭಾಗದಲ್ಲಿ ಉತ್ತಮ ಫೈಬರ್ ಅಂಶ ಇರುತ್ತದೆ. ಬಲೆ ಹಾಗೂ ಪೇಪರ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ದಾಸವಾಳದ ಗಿಡದ ಬೇರನ್ನು ಎಣ್ಣೆಯಲ್ಲಿ ಹಾಕಿ ಕುದಿಸಿ ಆ ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ಬೇಗ ವಾಸಿ ಆಗುತ್ತವೆ. ಎಲ್ಲಕ್ಕಿಂತ ಹೆಚ್ಚು ಬಿಳಿ ದಾಸವಾಳ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಬೇವಿನ ಮರದ ಕೆಳಗೆ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಸೇವಿಸುವುದರಿಂದ ಕ್ಯಾನ್ಸರ್ ಕಾರಕ ರೋಗಗಳಿಂದ ನಾವು ಮುಕ್ತಿ ಪಡೆಯಬಹುದು. ಇವಿಷ್ಟು ದಾಸವಾಳ ಹೂವಿನ ಕುರಿತಾದ ಔಷಧಿಯ ಪ್ರಯೋಜನಗಳು.

By

Leave a Reply

Your email address will not be published. Required fields are marked *