ಹೃದಯದ ಆರೋಗ್ಯಕ್ಕೆ ಈ 5 ಟಿಪ್ಸ್ ಪಾಲಿಸಿ ಉತ್ತಮರಾಗಿರಿ

0 2

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಹೃದಯದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೃದಯದ ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲವು ಟಿಪ್ಸ್ ಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ದೇಹದಲ್ಲಿ ಕೊಬ್ಬು ಅತಿಯಾಗಿ ಶೇಖರಣೆಯಾದಾಗ ರಕ್ತನಾಳದಲ್ಲಿ ರಕ್ತ ಸರಿಯಾಗಿ ಸಂಚಾರವಾಗಲು ಅಡಚಣೆ ಉಂಟು ಮಾಡುತ್ತದೆ ಇದರಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವವಿರುತ್ತದೆ. ಹೃದಯದ ಆರೋಗ್ಯಕ್ಕಾಗಿ ಕಡಿಮೆ ಪ್ಯಾಟಿನಂಶ ಇರುವ ಆಹಾರವನ್ನು ಸೇವಿಸಬೇಕು. ಒಮೆಗಾ ತ್ರಿ ಎಸ್ ಅಂಶಗಳಿರುವ ಮೀನುಗಳನ್ನು ಹೆಚ್ಚು ತಿನ್ನಬೇಕು. ಅವು ಹೃದಯಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾದಾಮ್, ವಾಲನಟ್ ನಂತಹ ಡ್ರೈಫ್ರೂಟ್ಸ್ ಗಳನ್ನು ಹೆಚ್ಚು ಸೇವಿಸಬೇಕು. ಸ್ಟ್ರಾಬೆರಿ, ಬ್ಲೂಬೆರಿ, ಕಿತ್ತಳೆ, ಪಪ್ಪಾಯ ಮುಂತಾದ ಹಣ್ಣುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ನೇರವಾಗಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತದೆ. ಕೆಂಪು ಅಲಸಂದಿ ಕಾಳಿನಂತಹ ಕಾಳುಗಳನ್ನು ಸೇವಿಸುವುದರಿಂದಲೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಟೊಮೆಟೊ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಪರಿಹಾರವೆಂದರೆ ವ್ಯಾಯಾಮ ಮಾಡುವುದು ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ವ್ಯಾಯಾಮ ಮಾಡುವುದರಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ದಾಳಿಂಬೆ ಜ್ಯೂಸ್ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ದಾಳಿಂಬೆ ಹಣ್ಣನ್ನು ಹೆಚ್ಚು ಸೇವಿಸಬೇಕು. ಸೋಯಾ ಸಾಸ್ ಅನ್ನು ಹೆಚ್ಚಾಗಿ ಸೇವಿಸಬೇಕು. ಪ್ರತಿದಿನದ ಅಡುಗೆಗೆ ಸೋಯಾ ಸಾಸ್ ಅನ್ನು ಹಾಕಬೇಕು. ಡಯಾಬಿಟೀಸ್, ಅಧಿಕ ರಕ್ತದೊತ್ತಡ ಇರುವವರು ಹೃದಯದ ಆರೋಗ್ಯವನ್ನು ಹೆಚ್ಚು ನೋಡಿಕೊಳ್ಳಬೇಕು. ಡಯಾಬಿಟೀಸ್ ಮತ್ತು ಅಧಿಕ ರಕ್ತದೊತ್ತಡ ಇರುವವರು ಅವುಗಳಿಗೆ ಸಂಬಂಧಿಸಿದ ಔಷಧಿಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಸ್ಮೋಕ್ ಮತ್ತು ತಂಬಾಕಿನ ಸೇವನೆ ಮಾಡಬಾರದು. ತಂಬಾಕು ಸೇವನೆಯಿಂದ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪ್ರತಿದಿನ 8 ತಾಸು ನಿದ್ರೆ ಮಾಡಬೇಕು. ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದ ಹೃದಯದ ಸಮಸ್ಯೆ ಕಂಡುಬರುತ್ತದೆ. ಹೆಚ್ಚು ನಗುತ್ತಾ ಖುಷಿಯಾಗಿರುವುದರಿಂದಲೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿದಿನ ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಉಸಿರಾಟ ಸರಿಯಾಗಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಲ್ಲಿನ ಆರೋಗ್ಯ ಸರಿ ಇಲ್ಲದೆ ಇದ್ದರೂ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಹಲ್ಲಿನ ಆರೋಗ್ಯವನ್ನು ನೋಡಿಕೊಳ್ಳಬೇಕು. ಹಲ್ಲಿನ ಹುಳುಕಿನಿಂದ ಹೃದಯದ ಸಮಸ್ಯೆ ಬರುವ ಸಂಭವ ಇರುತ್ತದೆ. ಈ ಮೇಲಿನ ಅಂಶಗಳನ್ನು ಪ್ರತಿಯೊಬ್ಬರು ತಪ್ಪದೆ ಅನುಸರಿಸಬೇಕು.

Leave A Reply

Your email address will not be published.