ನೆಗಡಿ ,ಕೆಮ್ಮು ಹಾಗೂ ತಲೆನೋವು ಇದು ನಮ್ಮಲ್ಲಿ ಬಹಳಷ್ಟು ಜನರಿಗೆ ಕಾಡುವಂತಹ ಸಾಮಾನ್ಯವಾದ ಸಮಸ್ಯೆ. ಈ ತಲೆನೋವು ಅನ್ನುವುದು ಹಲವಾರು ಮುಖ್ಯಅವದ ಕಾರಣಗಳಿಂದ ಬರುತ್ತವೆ. ಸರಿಯಾಗಿ ನಿದ್ದೆ ಬಾರದೆ ಇದ್ದಾಗ, ಏನಾದ್ರೂ ಶಬ್ದ ಮಾಲಿನ್ಯ ಆದಾಗ ಇಂತಹ ಸಂದರ್ಭದಲ್ಲಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತೇ. ತುಂಬಾ ಸಹಜವಾಗಿ ಬರ್ತಾ ಇರತ್ತೆ ಈ ತಲೆನೋವು. ಹಾಗಾಗಿ ಇದಕ್ಕೆ ಮನೆಮದ್ದನ್ನು ನೋಡೋಣ.

ತಲೆನೋವು ಬಂದಾಗ ಬೇಗ ಕಡಿಮೆ ಆಗಬೇಕು ಅಂತ ಹಲವಾಯು ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿ ಮಾತ್ರೆಗಳನ್ನು ತೆಗೆದುಕೊಂಡಾಗ ಆ ಕ್ಷಣಕ್ಕೆ ಆರಾಮ್ ಎನಿಸಬಹುದು ಆದರೆ ಮುಂದೆ ಭವಿಷ್ಯದಲ್ಲಿ ಇದರ ಅಡ್ಡ ಪರಿಣಾಮದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಯಾಕಂದ್ರೆ ಈ ರೀತಿ ಚಿಕ್ಕ ಪುಟ್ಟ ವಿಷಯಕ್ಕೆ ನಮ್ಮ ಶರೀರಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ಈ ಚಿಕ್ಕ ಚಿಕ್ಕ ಕಾಯಿಲೆಗಳು ಬೆಳೆದು ದೊಡ್ಡದಾಗುತ್ತವೆ. ಹಾಗಾಗಿ ಈ ರೀತಿಯ ಸಮಸ್ಯೆಗಳಿಗೆ ಮೆಡಿಸನ್ ಮೇಲೆ ಅವಲಂಭಿಸದೆ ಮನೆಯಲ್ಲಿಯೇ ಸಿಗುವಂತಹ ಕೆಲವು ಮನೆ ಮದ್ದುಗಳನ್ನು ಉಪಯೋಗಿಸಿಕೊಂಡರೆ ತುಂಬಾ ಒಳ್ಳೆಯದು. ಹಾಗಿದ್ರೆ ಏನದು ಮನೆ ಮದ್ದು ಅನ್ನೋದನ್ನ ನೋಡೋಣ….

ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಕೇವಲ ಐದು ನಿಮಿಷದಲ್ಲಿ ಹೇಗೆ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನ ನೋಡೋಣ. ಈ ಮನೆ ಮದ್ದನ್ನು ಮಾಡೋಕೆ ಬೇಕಾಗಿರೋದು ಹಸಿ ಶುಂಠಿ. ಶುಂಠಿಯಲ್ಲಿ ಇರುವಂತಹ ಔಷಧೀಯ ಗುಣಗಳು ಏನು ಅನ್ನೋದು ಸಾಮಾನ್ಯವಾಗಿ ಎಲ್ಕರಿಗೂ ತಿಳಿದೇ ಇದೆ. ಆದರೆ ಇದರಲ್ಲಿರುವ ಗೊತ್ತಿಲ್ಲದೆ ಇರುವ ಅಂಶ ಎಂದರೆ ಹಸಿ ಶುಂಠಿ ತಲೆನೋವಿಗೆ ಒಳ್ಳೆಯ ಮನೆಮದ್ದು. ಹಸಿ ಶುಂಠಿಯಲ್ಲಿ ಇರುವ ಔಷಧೀಯ ಗುಣಗಳು ತಕ್ಷಣಕ್ಕೆ ತಲೆನೋವನ್ನು ಕಡಿಮೆ ಮಾಡುತ್ತದೆ. 2 ಇಂಚಿನಷ್ಟು ಹಸಿ ಶುಂಠಿಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ಕಟ್ ಮಾಡಿ ಒಂದು ಬೌಲ್ ಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಸ್ಪೂನ್ ಅಷ್ಟು ನಿಂಬೆ ರಸವನ್ನು ಸೇರಿಸಿಕೊಳ್ಳಬೇಕು. ನಿಂಬೆ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ತಲೆನೋವನ್ನು ಅತಿ ವೇಗವಾಗಿ ಕಡಿಮೆ ಮಾಡುತ್ತದೆ. ನಿಂಬೆ ರಸ ಹಾಕಿಕೊಂಡ ನಂತರ ಕಾಲು ಟೀ ಸ್ಪೂನ್ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಇದನ್ನ 2 ಅಥವಾ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಬೇಕು. ಇದರಿಂದ ನಿಂಬೆ ರಸ ಹಸಿ ಶುಂಠಿಯ ಜೊತೆಗೆ ಚೆನ್ನಾಗಿ ಬೆರೆಯುತ್ತದೆ. 2 ಅಥವಾ 3 ಗಂಟೆಗಳ ನಂತರ ಇದನ್ನು ಒಂದು ಗಾಳಿ ಆಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಸುಮಾರು 10 ರಿಂದ 15 ದಿನದವರೆಗೂ ಇಟ್ಟುಕೊಳ್ಳಲೂ ಬಹುದು.

ಈ ಔಷಧೀಯನ್ನು ತೆಗೆದುಕೊಳ್ಳುವ ವಿಧಾನ ತಲೆ ನೋವು ಬಂದಾಗ ತಕ್ಷಣಕ್ಕೆ ಈ ಶುಂಠಿ ಚೂರುಗಳನ್ನು ಅಗೆದು ತಿನ್ನಬೇಕು. ಈ ರೀತಿ ಮಾಡಿದ್ರೆ ಕೇವಲ 5 ನಿಮಿಷದಲ್ಲಿ ತಲೆನೋವು ಕಡಿಮೆ ಆಗುತ್ತದೆ. ಈ ರೀತಿ ಮಾಡೋಕೆ ಆಗದೆ ಇದ್ದರೆ, ಒಂದು ಟೀ ಸ್ಪೂನ್ ಶುಂಠಿ ರಸ ಮತ್ತು ಒಂದು ಟೀ ಸ್ಪೂನ್ ನಿಂಬೆ ರಸ ಇವೆರಡನ್ನೂ ಒಂದು ಲೋಟ ನೀರಿಗೆ ಬೆರೆಸಿ ಕುಡಿದರೂ ಸಹ ತಲೆನೋವು ಕಡಿಮೆ ಆಗುತ್ತದೆ.

Leave a Reply

Your email address will not be published. Required fields are marked *