ಇವತ್ತಿನ ಈ ಲೇಖನದಲ್ಲಿ ಮೊಸರಿನ ಬಗ್ಗೆ ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಕೆಲವು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ. ಮೊಸರು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಸರಿನ ನಿಯಮಿತ ಉಪಯೋಗದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಪ್ರೊಟೀನ್, ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್ ಬಿ6, ವಿಟಮಿನ್ ಬಿ12 ಇರುತ್ತದೆ. ಇದು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ಒದಗಿಸುತ್ತದೆ. ಮೊಸರು ಆರೋಗ್ಯಕರವಾದ ಬ್ಯಾಕ್ಟೀರಿಯಗಳಿಂದ ಸಮೃದ್ಧವಾಗಿದೇ.ಇನ್ನು ಹೆಚ್ಚಿನ ಜನರಿಗೆ ಊಟದ ಕೊನೆಯಲ್ಲಿ ಸ್ವಲ್ಪ ಆದರೂ ಕೂಡ ಮೊಸರನ್ನವನ್ನು ಸೇವಿಸಲೇಬೇಕು ಇಲ್ಲವಾದರೆ ಊಟ ಅಪೂರ್ಣ ಎನಿಸುತ್ತದೆ. ಮೊಸರನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಲಾಭಗಳು ಇವೆ. ಅದರಲ್ಲಿ ಮುಖ್ಯವಾಗಿ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠ ಆಗುತ್ತವೆ. ನಿದ್ರಾಹೀನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಕರುಳಿನ ಹಾಗೂ ಜಠರದ ಸಮಸ್ಯೆಗೂ ಕೂಡಾ ಮೊಸರು ಉತ್ತಮ. ಮೂಲವ್ಯಾಧಿ ಸಮಸ್ಯೆಯನ್ನು ಕೂಡಾ ನಿವಾರಣೆ ಮಾಡುತ್ತದೆ. ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆಯನ್ನು ತಂಪಾಗಿ ಇಡುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಕೊಡ ನಿವಾರಿಸುತ್ತದೆ. ಮೊಸರನ್ನು ಸೇವಿಸುವುದರಿಂದ ಇನ್ನೂ ಹಲವಾರು ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತವೆ.

ಮೊಸರನ್ನು ಯಾವ ಯಾವ ಖಾಯಿಲೆಗಳಿಗೆ ಹೇಗೆ ಬಳಸಬೇಕು ಅನ್ನೋದನ್ನ ನೋಡೋಣ. ಸಮಯಕ್ಕೆ ಸರಿಯಾಗಿ ಹಸಿವು ಆಗದೇ ಇದ್ದಲ್ಲಿ ಮೊಸರನ್ನು ಈ ರೀತಿಯಾಗಿ ಬಳಸಬೇಕು. ಒಂದು ಕಪ್ ಮೊಸರಿಗೆ ಅರ್ಧ ಚಮಚದಷ್ಟು ಜೀರಿಗೆಯನ್ನು ಹುರಿದು ಪುಡಿ ಮಾಡಿ ಮೊಸರಿಗೆ ಸೇರಿಸಿ ಅದರ ಜೊತೆಗೆ ಸ್ವಲ್ಪ ಕಲ್ಲುಪ್ಪನ್ನು ಸೇರಿಸಿ ತಿನ್ನಬೇಕು. ಇದರಿಂದ ಬೇಗ ಹಸಿವು ಆಗುತ್ತದೆ ಜಿತೆಗೆ ಜೀರ್ಣ ಕ್ರಿಯೆಗೂ ಸಹಾಯ ಆಗುತ್ತದೆ.

ಬಾಯಿಯ ಹುಣ್ಣಿನ ಸಮಸ್ಯೆ ಇದ್ದರೆ ಅಂತವರಿಗೆ ಒಂದು ಕಪ್ ಮೊಸರಿಗೆ ಒಂದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುವವರು ಮೊಸರಿನ ಜೊತೆಗೆ ಒಂದು ಚಮಚದಷ್ಟು ಕಾಲು ಮೆಣಸಿನ ಪುಡಿ ಹಾಗೂ ಕಲ್ಲುಪ್ಪು ಸೇರಿಸಿ ತಿನ್ನಬೇಕು. ಇದರಿಂದ ದೇಹದಲ್ಲಿ ಇರುವ ಅನಾವಶ್ಯಕ ಕೊಬ್ಬು ಸುಲಭವಾಗಿ ಕರಗುತ್ತದೆ. ಮೂಲವ್ಯಾಧಿ ಸಮಸ್ಯೆಯನ್ನು ಬಗೆಹರಿಸಲು ಒಂದು ಕಪ್ ಮೊಸರಿಗೆ ಒಂದು ಚಮಚದಷ್ಟು ಓಂಕಾಳನ್ನು ಬೆರೆಸಿ ತಿನ್ನಬೇಕು ಇದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಮೊಸರಿಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ ತಿನ್ನುತ್ತಾ ಇದ್ದರೆ ಹಾಗೆ ಮಾಡಲೇ ಬಾರದು ಅದರಲ್ಲೂ ಪುಡಿ ಊಊಅನ್ನು ಮಾತ್ರ ಸೇರಿಸಿ ತಿನ್ನಲೇ ಬಾರದು. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಹೀಗೆ ಮೊಸರಿಗೆ ಉಪೋಸ್ ಮತ್ತು ಸಕ್ಕರೆ ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವ ಲಾಭವೂ ಇರುವುದಿಲ್ಲ. ಯಾಕಂದರೆ ಪುಡಿ ಉಪ್ಪು ಮತ್ತು ಸಕ್ಕರೆಯನ್ನು ಸೇವಿಸುವಾಗ ಸಾಕಷ್ಟು ರಾಸಾಯನಿಕಗಳನ್ನು ಬಳಸಿ ತಯಾರಿಸಿರುತ್ತಾರೆ. ಇವುಗಳನ್ನ ಮೊಸರಿಗೆ ಸೇರಿಸಿದಾಗ ನಾಲಿಗೆಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಸರಿನ ಜೊತೆ ಉಪ್ಪು ಸೇರಿಸಿಕೊಂಡು ತಿನ್ನುವುದರಿಂದ ಆರೋಗ್ಯ ಪಡೆಯಬಹುದು ಎಂದಿದ್ದರೆ ಪುಡಿ ಉಪ್ಪಿನ ಬದಲು ಕಪ್ಪು ಉಪ್ಪು ಅಥವಾ ಕಲ್ಲುಪ್ಪನ್ನು ಸೇರಿಸಿ ಸೇವಿಸಿ ಹಾಗೆಯೇ ಸಕ್ಕರೆಯ ಬದಲಾಗಿ ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಬೇಕು. ಇವು ಮೊಸರಿನ ಜೊತೆಗೆ ಉತ್ತಮ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ.

ಮೊಸರಿಗೆ ಉಪ್ಪು ಅಥವಾ ಸಕ್ಕರೆ ಈ ಎರಡರಲ್ಲಿ ಯಾವುದನ್ನು ಬೆರೆಸಿ ಸೇವಿಸುವುದು ಒಳ್ಳೆಯದು ಅಂತ ನೋಡುವುದಾದರೆ ಅಸಿಡಿಟಿ, ಪಿತ್ತ, ರಕ್ತಸ್ರಾವ, ಕೂದಲು ಉದುರುವುದು ಇಂತಹ ಸಮಸ್ಯೆಯನ್ನು ಹಿಂದಿರುವವರು ಮಿಸರಿವೆ ಬೆಲ್ಲವನ್ನು ಸೇರಿಸಿ ಸೇವಿಸುವುದು ಒಳ್ಳೆಯದು. ಯಾರಿಗೆಲ್ಲ ಗ್ಯಾಸ್, ಹೊಟ್ಟೆ ಉಬ್ಬರ ದೇಹದಲ್ಲಿ ಆಯಾಸ ಮುಂತಾದ ಸಮಸ್ಯೆಯನ್ನು ಹೊಂದಿರುತ್ತಾರೋ ಅವರು ಮೊಸರಿಗೆ ಕಲ್ಲುಪ್ಪು ಅಥವಾ ಕಪ್ಪು ಉಪ್ಪನ್ನು ಬೆರೆಸಿ ಸೇವಿಸುವುದು ಉತ್ತಮ.

ಇನ್ನು ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ ಅಂತ ನೋಡುವುದಾದ್ರೆ, ಮೊಸರು ಸೇವಿಸುವುದು ಉತ್ತಮ ಹಾಗಾಗಿ ಯಾವ ಸಮಯದಲ್ಲಿ ಆದರೂ ಮೊಸರನ್ನು ಸೇವಿಸಬಹುದು ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಅದು ಸರಿಯಾದ ಮಾರ್ಗ ಅಲ್ಲ. ಭಾರತೀಯ ಊಟದ ಪದ್ಧತಿಯಲ್ಲಿ ಊಟದ ಕೊನೆಯಲ್ಲಿ ಸ್ವಲ್ಪ ಮೊಸರನ್ನು ಸೇವಿಸುವುದು ಪದ್ಧತಿ ಇದೆ ಆದರೆ ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸಬಾರದು. ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಹಾಗೂ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಇಳಿಮುಖ ಆಗುತ್ತದೆ. ಅಂತಹ ಸಮಯದಲ್ಲಿ ಮೊಸರನ್ನು ಸೇವಿಸಿದರೆ ಆರೋಗ್ಯದ ಸಮಸ್ಯೆ ಹೆಚ್ಚು ಆಗಬಹುದು. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದಲ್ಲಿ ಅಡೆತಡೆ, ಅಸ್ತಮಾ ಹೊಟ್ಟೆಯಲ್ಲಿ ರಕ್ತ ಸ್ರಾವ ಅಂತಹ ಸಮಸ್ಯೆಗಳಿಗೆ ಇದು ಪ್ರೇರಣೆಯನ್ನು ನೀಡುತ್ತದೆ. ಆದ್ದರಿಂದ ಮಧ್ಯಾನ್ಹ ಮತ್ತು ಬೆಳಗಿನ ಸಮಯದಲ್ಲಿ ಮೊಸರನ್ನು ಸೇವಿಸಬಹುದು.

ಯಾರು ಹಾಗೂ ಯಾವ ಆರೋಗ್ಯದ ಸಮಸ್ಯೆ ಇದ್ದಾಗ ಮೊಸರನ್ನು ಸೇವಿಸಬಾರದು ಅನ್ನೋದನ್ನು ನೋಡೋಣ ನೆಗಡಿ ಕೆಮ್ಮು ಇದ್ದಾಗ ಮೊಸರನ್ನು ಸೇವಿಸಬಾರದು. ಅಸ್ತಮಾ ಮತ್ತು ಶ್ವಾಸ ತೆಗೆದುಕೊಳ್ಳಲು ತಿಂದರೆ ಆಗುತ್ತಾ ಇದ್ದರೆ ಅಂತಹ ಸಮಯದಲ್ಲಿ ಕೂಡ ಮೊಸರನ್ನು ಸೇವಿಸಬಾರದು. ಹಾಗೂ ಕಫದ ಬಾಧೆಯಿಂದ ಬಳಲುತ್ತಾ ಇದ್ದವರು ಕೂಡ ಮೊಸರನ್ನು ಸೇವಿಸಬಾರದು. ಇನ್ನು ಮಳೆಗಾಲದಲ್ಲಿ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗಾಗಿ ಮಳೆಗಾಲದಲ್ಲಿ ಕಡಿಮೆ ಮೊಸರನ್ನು ಸೇವಿಸುವುದು ಉತ್ತಮ. ಫ್ರಿಡ್ಜ್ ನಲ್ಲಿ ಸಂಸ್ಕರಿಸಿದ ಮೊಸರು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾವೆಯೇ ಕೃತಕ ಪರಿಮಳ ಮತ್ತು ಬಣ್ಣಗಳಿಂದ ಕೂಡಿದ ಮೊಸರನ್ನು ಸಹ ಸೇವಿಸಬಾರದು. ಇದರಿಂದ ಯಾವುದೇ ಲಾಭಗಳೂ ನಮ್ಮ ಆರೋಗ್ಯಕ್ಕೆ ದೊರೆಯುವುದಿಲ್ಲ.

ಮೊಸರು ಒಂದು ಅದ್ಭುತವಾದ ಆಹಾರ ಉತ್ಪನ್ನ. ಇದನ್ನು ಗಣನೀಯವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ವಾತ, ಪಿತ್ತ , ಹಾಗೂ ಕಫ ಸಮತೋಲನದಲ್ಲಿ ಉಳಿದುಕೊಳ್ಳುತ್ತದೆ. ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಹಾಲನ್ನು ಸೇವಿಸಲು ಇಷ್ಟ ಪಡದೇ ಇರುವವರು ಪರ್ಯಾಯವಾಗಿ ಮೊಸರನ್ನು ಸೇವಿಸಬಹುದು. ಯಾಕಂದರೆ ಇದರಲ್ಲಿ ಹೇರಳವಾದ ಕ್ಯಾಲ್ಶಿಯಂ ಇರುವುದರಿಂದ ಇದು ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. ಮೂಳೆಗಳಿಗೆ ಸಂಬಂಧಿಸಿದ ಯಾವುದೇ ರೋಗಗಳೂ ಕೂಡಾ ನಮ್ಮ ಹತ್ತಿರವೂ ಸುಳಿಯುವುದಿಲ್ಲ

Leave a Reply

Your email address will not be published. Required fields are marked *