ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಸಾಕಷ್ಟು ಜನರು ಅವರ ಅಭಿಮಾನಿಯಾಗಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದಾಗ ಇನ್ನೊಬ್ಬ ಕ್ರಿಕೆಟರ್ ಪ್ರತಿಭೆಯನ್ನು ಹೊಗಳಿದ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಫೈಟ್​ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಿದರು ಪರಿಣಾಮ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿ ಟಿ-20 ಸರಣಿ ವಶಪಡಿಸಿಕೊಂಡಿತು. ಆಸ್ಟ್ರೇಲಿಯಾ ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಾರ್ಧಿಕ ಪಾಂಡ್ಯ ಕೇವಲ 22 ರನ್ ಗಳಿಗೆ ಅಜೇಯ 42 ರನ್ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

195 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿ ಸಾಹಸ ಮೆರೆದ ಕೊಹ್ಲಿ ಪಡೆ ಟಿ-20 ಕ್ರಿಕೆಟ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮುಂದುವರೆಯುತ್ತದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲು ಪ್ರಮುಖ ಕಾರಣ ಪವರ್ ಹಿಟ್ಲರ್ ಹಾರ್ದಿಕ್ ಪಾಂಡ್ಯ. ಆದರೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಬರಬೇಕಾಗಿದ್ದು ನನಗಲ್ಲ ಅತ್ಯುತ್ತಮ ಬೌಲಿಂಗ್ ಮಾಡಿದ ಟಿ. ನಟರಾಜನ್​ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಸ್ತುತ ಸಮಾರಂಭದಲ್ಲಿ ಟಿ. ನಟರಾಜನ್ ಮ್ಯಾನ್ ಆಫ್ ದಿ ಮ್ಯಾಚ್ ಎಂದು ನಾನು ಭಾವಿಸಿದ್ದೆ ಆದರೆ ಪಂದ್ಯಶ್ರೇಷ್ಠ ಪ್ರಶಸ್ತಿ ನನಗೆ ಎಂದು ಘೋಷಿಸಿದಾಗ ಆಶ್ಚರ್ಯವಾಯಿತು ಎಂದು ಪಾಂಡ್ಯ ಅವರು ಹೇಳಿದರು. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಿ. ನಟರಾಜನ್ 4 ಓವರ್​ಗಳಲ್ಲಿ ಕೇವಲ 20 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದಿದ್ದರು ತಂಡದ ಎಲ್ಲಾ ಬೌಲರ್​ಗಳು ಹೆಚ್ಚಿನ ರನ್ ನೀಡಿದರೆ ಎಡಗೈ ವೇಗಿ ಮಾತ್ರ 5ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ ಹಾಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಟಿ. ನಟರಾಜನ್ ಅವರಿಗೆ ನೀಡಬೇಕಾಗಿತ್ತು ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ತಿಳಿಸಿದರು.

ನಿಜ ಹೇಳಬೇಕೆಂದರೆ ನಾನು ನಟರಾಜನ್ ನಿಂದ ಪ್ರಭಾವಿತನಾಗಿದ್ದೇನೆ ಯಾಕೆಂದರೆ ಅವನು ಎಲ್ಲವನ್ನು ಸರಳವಾಗಿ ತೆಗೆದುಕೊಳ್ಳುತ್ತಾನೆ. ಹಾಗೆಯೇ ಏನಾದರೂ ಸಲಹೆ ನೀಡಿದರು ಅದನ್ನು ಸಹ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ನಂತರ ಹಾರ್ದಿಕ್ ಪಾಂಡ್ಯ ಅವರು ತನ್ನ ಆಟದ ಬಗ್ಗೆ ಮಾತನಾಡಿ ನಾನು ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ್ದೇನೆಯೇ ಅಥವಾ ಇಲ್ಲವೋ ಎಂಬುದು ಮುಖ್ಯವಲ್ಲ ಪಂದ್ಯವನ್ನು ಫಿನಿಶ್ ಮಾಡುವುದು ಮುಖ್ಯ ಎಂದು ಹೇಳಿಕೊಂಡರು. ಒಟ್ಟಿನಲ್ಲಿ ಹಾರ್ಧಿಕ್ ಪಾಂಡ್ಯ ಅವರು ಬೇರೆಯವರ ಪ್ರತಿಭೆಯನ್ನು ಗುರುತಿಸುವಲ್ಲಿ ಸಹ ಮೂಂಚೂಣಿಯಲ್ಲಿದ್ದಾರೆ ಹಾಗೂ ಟಿ. ನಾಗರಾಜನ್ ಅವರ ಬಗ್ಗೆ ಹಾರ್ಧಿಕ್ ಅವರ ಮೆಚ್ಚುಗೆಯನ್ನು ನೋಡಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೇ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸಿ.

Leave a Reply

Your email address will not be published. Required fields are marked *