ಕೂದಲು ಜಾಸ್ತಿ ಉದುರುತಿದ್ರೆ ತಕ್ಷಣವೇ ಈ ಮನೆಮದ್ದು ಮಾಡಿಕೊಳ್ಳಿ ಒಳ್ಳೆ ಉಪಯೋಗವಿದೆ

0 4

ಮನುಷ್ಯ ಸುಂದರವಾಗಿ ಕಾಣುವುದಕ್ಕೆ ಕೇವಲ ಅವನ ಬಣ್ಣ ಚರ್ಮ ಅಷ್ಟೇ ಅಲ್ಲ ತಲೆಯಲ್ಲಿ ಇರುವಂತಹ ಕೂದಲು ಕೂಡ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಆದರೆ ಇವತ್ತಿನ ದಿನ ಎಲ್ಲರನ್ನು ಕಾಡುತ್ತಿರುವ ಸಮಸ್ಯೆ ಕೂದಲು ಉದುರುವಿಕೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಹೆಣ್ಣು ಮಕ್ಕಳಿಂದ ಹಿಡಿದು ಗಂಡುಮಕ್ಕಳ ತನಕ ಎಲ್ಲರೂ ಕೂದಲುದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ

ಇದಕ್ಕೆ ಕಾರಣ ಏನು ಇದರ ಲಕ್ಷಣಗಳೇನು ಇದನ್ನು ತಡೆಯುವುದು ಹೇಗೆ ಇದಕ್ಕೆ ಯಾವ ರೀತಿಯ ಮನೆಮದ್ದನ್ನು ಬಳಸಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ಕೆಲವು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹತ್ತು ಹನ್ನೆರಡನೇ ವಯಸ್ಸಿನವರೆಗೆ ಹೆಣ್ಣುಮಕ್ಕಳಾಗಲಿ ಅಥವಾ ಗಂಡುಮಕ್ಕಳಾಗಲಿ ಅವರಿಗೆ ಕೂದಲು ಉದುರುವುದಿಲ್ಲ. ಬೇರೆ ಕಾಯಿಲೆಗಳು ಯಾವುದಾದರೂ ಇದ್ದರೆ ಮಾತ್ರ ಕೂದಲು ಉದುರುತ್ತದೆ. ರಕ್ತಹೀನತೆ ಫಂಗಲ್ ಇನ್ಫೆಕ್ಷನ್ ಅಥವಾ ಜಂತುಹುಳುವಿನ ಸಮಸ್ಯೆ ಅಥವಾ ಲಿವರ್ ಸಮಸ್ಯೆ ಇದ್ದರೆ ಕೂದಲುಗಳು ಉದುರುತ್ತವೆ.

ಅಥವಾ ಇನ್ಯಾವುದೋ ನ್ಯೂಟ್ರಿಷಿಯನ್ ಕೊರತೆಯಿಂದ ಕೂದಲು ಉದುರುತ್ತದೆ ಅಥವಾ ಅನ್ ಹೈಜನಿಕ್ ಕಂಡೀಶನ್ ಗಳಿಂದ ಕೂದಲು ಉದುರುತ್ತದೆ ಅಥವಾ ರಾಸಾಯನಿಕಯುಕ್ತ ಎಣ್ಣೆಗಳನ್ನು ಬಳಸುವುದರಿಂದ ಕೂದಲು ಉದುರುತ್ತದೆ. ಕೆಲವೊಂದು ಸಾರಿ ಯಾವುದಾದರೂ ಕಾಯಿಲೆಯಿಂದ ಕೂದಲು ಉದುರುತ್ತಿದ್ದರೆ ಅದಕ್ಕೆ ಯಾವುದೇ ರೀತಿಯ ಔಷಧಗಳನ್ನು ತೆಗೆದುಕೊಂಡರು ಪರಿಣಾಮ ಬೀರುವುದಿಲ್ಲ. ಹಾಗಾಗಿ ಕೂದಲು ಉದುರುವುದಕ್ಕೆ ಪ್ರಮುಖವಾಗಿ ಯಾವುದು ಕಾರಣ ಎಂಬುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು.

ಒಂದು ವೇಳೆ ನಿಮಗೆ ರಕ್ತಹೀನತೆಯಿಂದ ಕೂದಲು ಉದುರುತ್ತಿದ್ದರೆ ನೀವು ರಕ್ತಹೀನತೆಗೆ ಔಷಧಿಯನ್ನು ಕಂಡುಕೊಳ್ಳದಿದ್ದರೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ ಮೊದಲು ರಕ್ತಹೀನತೆಗೆ ಔಷಧಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಒಂದುವೇಳೆ ನಿಮಗೆ ಅನ್ ಹೈಜನಿಕ್ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ ನೀವು ಲಕ್ಷ ರೂಪಾಯಿ ಕೊಟ್ಟು ಎಣ್ಣೆಯನ್ನು ಖರೀದಿಸಿ ತಲೆಗೆ ಹಚ್ಚಿಕೊಂಡರು ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಮೊದಲು ಅನ್ ಹೈಜನಿಕ್ ಕಂಡಿಶನನ್ನು ಸರಿಪಡಿಸಿಕೊಳ್ಳಬೇಕು

ಹೀಗೆ ಯಾವ ಸಮಸ್ಯೆಯಿಂದ ಕೂದಲು ಉದುರುತ್ತದೆ ಮೊದಲು ಆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಬೇಕು. ಕೂದಲು ಉದುರುವುದಕ್ಕೆ ಇನ್ನೊಂದು ಪ್ರಮುಖ ಕಾರಣ ನಮ್ಮ ದೇಹ ತ್ರಿ ದೋಷಗಳಿಂದ ಮಾಡಲ್ಪಟ್ಟಿದೆ. ವಾತ ಪಿತ್ತ ಕಫ ಈ ತ್ರಿದೋಷಗಳು ನಮ್ಮ ದೇಹದಲ್ಲಿ ಮಾತ್ರವಲ್ಲದೆ ವಾತಾವರಣದಲ್ಲಿಯ ಇವೆ. ಉದಾಹರಣೆಗೆ ಬೇಸಿಗೆಕಾಲದಲ್ಲಿ ಪಿತ್ತ ಪ್ರಧಾನವಾಗಿರುತ್ತದೆ ಮಳೆಗಾಲದಲ್ಲಿ ಚಳಿ ಇರುವುದರಿಂದ ಕಫ ಪ್ರಧಾನವಾಗಿರುತ್ತದೆ ಚಳಿಗಾಲದಲ್ಲಿ ಶೀತಗಾಳಿ ಅಥವಾ ಮೂಡು ಗಾಳಿ ಬೀಸುವುದರಿಂದ ವಾತ ಪ್ರಧಾನವಾಗಿರುತ್ತದೆ. ದೇಹದಲ್ಲಿಯೂ ವಾತ ಪಿತ್ತ ಕಫ ಇದೆ ಅದೇ ರೀತಿ ವಾತಾವರಣದಲ್ಲಿಯೂ ವಾತ ಪಿತ್ತ ಕಫ ಇದೆ ನಾವು ತಿನ್ನುವ ಆಹಾರದಲ್ಲಿಯೂ ವಾತ ಪಿತ್ತ ಕಫ ಇದೆ.

ಇದೇ ರೀತಿ ನಮ್ಮ ವಯಸ್ಸಿನಲ್ಲಿಯೂ ಕೂಡ ದೋಷಗಳಿರುತ್ತವೆ. ಬಾಲ್ಯಾವಸ್ಥೆಯಲ್ಲಿ ಕಫ ಪ್ರಧಾನವಾಗಿರುತ್ತದೆ ಮಧ್ಯಮ ಅವಸ್ಥೆಯಲ್ಲಿ ಪಿತ್ತ ಪ್ರಧಾನವಾಗಿರುತ್ತದೆ ಅದೇ ರೀತಿ ವೃದ್ಧಾವಸ್ಥೆಯಲ್ಲಿ ವಾತ ಪ್ರಧಾನವಾಗಿರುತ್ತದೆ. ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುವುದು ಯುವ ವಯಸ್ಕರಲ್ಲಿ. ಕಾಯಿಲೆಗಳನ್ನು ಹೊರತುಪಡಿಸಿ ಕೂದಲು ಉದುರುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಯುವ ವಯಸ್ಕರಲ್ಲಿ. ಈ ವಯಸ್ಸಿನಲ್ಲಿ ಪಿತ್ತ ದೋಷ ಪ್ರಧಾನವಾಗಿರುತ್ತದೆ ಪಿತ್ತ ಪ್ರಧಾನವಾಗಿದ್ದಾಗ ದೇಹದಲ್ಲಿ ಹಿಟಿನ ಅಂಶ ಕಂಡುಬರುತ್ತದೆ.

ಇದರಿಂದ ಆಸಿಡ್ ಹೆಚ್ಚಾಗುತ್ತದೆ ಆಸಿಡ್ ಹೆಚ್ಚಾದಾಗ ಪಿತ್ತ ನೆತ್ತಿಗೇರಿ ಹಿಟಿನಿಂದಾಗಿ ಕೂದಲುಗಳು ಬೇಗ ಪಕ್ವವಾಗಿ ಕೂದಲು ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಹಾಗಾಗಿ ಪಿತ್ತವನ್ನು ಕಡಿಮೆ ಮಾಡುವಂತಹ ಆಹಾರ ವಿಹಾರಗಳನ್ನು ಪಾಲನೆ ಮಾಡುವುದರಿಂದ ಕೂದಲುದುರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು

ಪಿತ್ತ ಕಡಿಮೆ ಮಾಡುವಂತಹ ಪದಾರ್ಥಗಳಾದ ಎಳೆನೀರನ್ನು ಕುಡಿಯಬೇಕು ಹಾಲನ್ನು ಕುಡಿಯಬೇಕು ಸಬ್ಬಕ್ಕಿ ಪಾಯಸವನ್ನು ಕುಡಿಯಬೇಕು ಕಲ್ಲುಸಕ್ಕರೆ ಹೆಚ್ಚಾಗಿ ಉಪಯೋಗಿಸಬೇಕು ಜೊತೆಗೆ ಮಧುರ ರಸ ಇರುವಂತಹ ಬೆಲ್ಲವನ್ನು ಹೆಚ್ಚಾಗಿ ಸೇವಿಸಬೇಕು.

ಹೆಚ್ಚಾಗಿ ಖಾರ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆಗ ಪಿತ್ತ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ ದೇಹಕ್ಕೆ ಮತ್ತು ತಲೆಗೆ ತಂಪಾಗುವುದುರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದನ್ನು ಹೊರತುಪಡಿಸಿ ನೀವು ಮನೆಮದ್ದನ್ನು ತಯಾರಿಸಿಕೊಳ್ಳುವುದಿದ್ದರೆ ಬ್ರಾಹ್ಮೀಯನ್ನು ತಂದುಕೊಳ್ಳಬೇಕು ಒಂದು ಲೀಟರ್ ಕೊಬ್ಬರಿ ಎಣ್ಣೆಗೆ ನೂರು ಗ್ರಾಂ ಬ್ರಾಹ್ಮೀಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದು ಚೆನ್ನಾಗಿ ಕುದ್ದು ಕಪ್ಪಾದ ನಂತರ ಅದನ್ನು ಸೋಸಿ ತೆಗೆದಿಟ್ಟುಕೊಳ್ಳಬೇಕು. ಇದನ್ನು ಪ್ರತಿನಿತ್ಯ ತಲೆಗೆ ಹಚ್ಚುತ್ತಾ ಬಂದರೆ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು.

ಇನ್ನೊಂದು ಮನೆಮದ್ದನ್ನು ನೋಡುವುದಾದರೆ ಶಂಕಪುಷ್ಪಿ ಚೂರ್ಣ ಎನ್ನುವುದು ಸಿಗುತ್ತವೆ ಅದನ್ನು ತೆಗೆದುಕೊಂಡು ಎರಡು ನೂರು ಎಂ ಎಲ್ ಕೊಬ್ಬರಿ ಎಣ್ಣೆಗೆ ನೂರು ಎಂ ಎಲ್ ಶಂಕಪುಷ್ಪಿ ಚೂರ್ಣ ಹಾಕಿ ಅದನ್ನು ಹದವಾದ ಉರಿಯಲ್ಲಿ ಕುದಿಸಿ ಸೋಸಿ ಇಟ್ಟುಕೊಳ್ಳಬೇಕು ಇದನ್ನು ಕೂಡ ಪ್ರತಿದಿನ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಹಂತಹಂತವಾಗಿ ಕಡಿಮೆಯಾಗುತ್ತದೆ. ಇನ್ನು ನೀವು ಕರಿಬೇವಿನ ಎಲೆಗಳನ್ನು ತಂದು ಒಣಗಿಸಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಅದನ್ನು ಪ್ರತಿದಿನ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಈ ರೀತಿಯಾಗಿ ಕೂದಲು ಉದುರುವುದಕ್ಕೆ ಏನು ಕಾರಣ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಆ ಸಮಸ್ಯೆಯನ್ನು ಮೊದಲು ಬಗೆಹರಿಸಿ ಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ನಾವು ಮೇಲೆ ತಿಳಿಸಿರುವ ಕೆಲವು ಪರಿಹಾರಗಳನ್ನು ಮಾಡುವುದರಿಂದಲೂ ಕೂಡ ಕೂದಲು ಉದುರುವ ಸಮಸ್ಯೆಯನ್ನು ಹಂತಹಂತವಾಗಿ ಕಡಿಮೆ ಮಾಡಿಕೊಳ್ಳಬಹುದು.

ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಯದವರಿಗೆ ಅಥವಾ ಸ್ನೇಹಿತರಿಗೆ ಕೂದಲು ಉದುರುವ ಸಮಸ್ಯೆ ಇದ್ದರೆ ಅವರಿಗೂ ಈ ಮಾಹಿತಿಯನ್ನು ತಿಳಿಸಿರಿ. ಇದರಿಂದ ಅವರಿಗೂ ಕೂಡ ಕೂದಲು ಉದುರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.