ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಅತಿ ಚಿಕ್ಕ ಜಾಗದಲ್ಲಿ ಚೊಕ್ಕವಾಗಿ ಕೃಷಿಯನ್ನು ಮಾಡುವ ಮೂಲಕ ಹೆಚ್ಚು ಆದಾಯವನ್ನು ಪಡೆಯಬಹುದು ಸುಸ್ಥಿರ ಬದುಕನ್ನು ಕಾಣಬಹುದು ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತದೆ.

ತುಮಕೂರಿನ ಎಂಬಿಎ ಪದವೀಧರರಾದ ಪ್ರಭಾಕರ್ ಹುಳಿಯಾರ್ ಅವರು ಉನ್ನತ ಹುದ್ದೆಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡು ಉತ್ತಮವಾದ ಆದಾಯವನ್ನು ಪಡೆಯುತ್ತಿದ್ದಾರೆ. ತಮ್ಮ ನಾಲ್ಕರಿಂದ ಐದು ಗುಂಟೆ ಜಾಗದಲ್ಲಿ ಹೊಸ ಪದ್ಧತಿಯಲ್ಲಿ ಕೊಳಿಸಾಕಾಣಿಕೆ ಮೀನು ಸಾಕಾಣಿಕೆ ಕುರಿ ಸಾಕಾಣಿಕೆ ಜೊತೆಗೆ ಜೇನು ಸಾಕಾಣಿಕೆಯನ್ನು ಮಾಡುತ್ತಿದ್ದಾರೆ ಇವರು ಸಣ್ಣ ಜಾಗದಲ್ಲಿ ಕೃಷಿಕರು ಹೇಗೆ ಲಾಭದಾಯಕ ಆದಾಯವನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ಇವರು ತಮ್ಮ ಜಾಗದಲ್ಲಿ ಆರು ಸಾವಿರ ಮೀನುಗಳನ್ನು ಸಾಕಿದ್ದಾರೆ ಜೊತೆಗೆ ಕೋಳಿಯನ್ನು ಸಾಕಿರುವುದರಿಂದ ಮೊಟ್ಟೆಯನ್ನು ಪ್ರತಿದಿನ ಮಾರುವ ಮೂಲಕ ಆದಾಯವನ್ನು ಗಳಿಸುತ್ತಾರೆ ಕುರಿಗಳನ್ನು ಆರು ತಿಂಗಳಿಗೆ ಒಮ್ಮೆ ಮಾರಾಟ ಮಾಡುತ್ತಾರೆ.ಜೊತೆಗೆ ಇಪ್ಪತ್ತು ಜೇನು ಪೆಟ್ಟಿಗಗಳನ್ನು ಇಟ್ಟಿದ್ದಾರೆ ವರ್ಷಕ್ಕೆ ಒಂದು ಪೆಟ್ಟಿಗೆಯಿಂದ ಕನಿಷ್ಠ ಹತ್ತು ಕೆಜಿ ತುಪ್ಪವನ್ನು ತೆಗೆಯುತ್ತಾರೆ.

ಇವರಿಗೆ ದುಡ್ಡು ಗಳಿಸುವುದ್ದಕ್ಕಿಂತ ಪರಿಸರದ ಜೊತೆ ಬಾಳುವುದಕ್ಕೆ ಆಸೆ ಇರುವುದರಿಂದ ಉತ್ತಮ ಉದ್ಯೋಗವನ್ನು ಬಿಟ್ಟು ಕೃಷಿಯಲ್ಲಿ ತಮ್ಮಲ್ಲಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಚಿಕ್ಕ ಜಾಗದಲ್ಲಿ ಮಿಶ್ರ ಬೇಸಾಯವನ್ನು ಮಾಡುವ ಮೂಲಕ ತಿಂಗಳಿಗೆ ಕಡಿಮೆಯೆಂದರೂ ಒಂದು ಲಕ್ಷ ಆದಾಯವನ್ನು ಪಡೆಯುತ್ತಾರೆ.ಹಾಗಾದರೆ ಇವರು ಹೇಗೆ ಇವುಗಳನ್ನು ನಡೆಸಿಕೊಂಡು ಹೋಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ನಾವೆಲ್ಲರೂ ಮೀನುಗಳನ್ನು ಕೆರೆಗಳಲ್ಲಿ ಕಟ್ಟೆಗಳಲ್ಲಿ ಕೃಷಿ ಹೊಂಡಗಳಲ್ಲಿ ಬಾವಿಗಳಲ್ಲಿ ಬಿಟ್ಟು ಸಾಕುವುದನ್ನು ನೋಡಿದ್ದೇವೆ. ಇವರು ಆರ್ ಎ ಎಸ್ ಟೆಕ್ನಾಲಜಿ ಮೂಲಕ ಮೀನನ್ನು ಸಾಕುತ್ತಾರೆ. ಈ ವಿಧಾನದ ಮೂಲಕ ನಲವತ್ತು ಆಡಿ ಉದ್ದ ಮತ್ತು ಇಪ್ಪತ್ತೈದು ಆಡಿ ಅಗಲ ಇರುವ ಜಾಗದಲ್ಲಿ ನೀರನ್ನು ತುಂಬಿಸಿ ಆರು ಸಾವಿರ ಮೀನಿನ ಮರಿಗಳನ್ನು ಬಿಡುತ್ತಾರೆ ಒಂದು ಅಡಿಗೆ ಹತ್ತು ಮಿನುಗಳಂತೆ ಬಿಡುತ್ತಾರೆ ಈ ಪದ್ಧತಿಯಲ್ಲಿ ನೀರು ಬದಲಾವಣೆಯ ಅವಶ್ಯಕತೆ ಇರುವುದಿಲ್ಲ.

ನಾಲ್ಕೂವರೆ ತಿಂಗಳಿಂದ ಆರು ತಿಂಗಳಲ್ಲಿ ಮೀನುಗಳು ಬೆಳೆಯುತ್ತವೆ ಇವುಗಳಿಗೆ ಬೇಕಾದ ಪ್ರೊಟೀನ್ ಊಟವನ್ನು ಹಾಕುವುದರಿಂದ ಮೀನುಗಳು ಸರಾಸರಿ ನಾಲ್ಕುನೂರು ಐವತ್ತರಿಂದ ಐದುನೂರು ಗ್ರಾಂ ತೂಕ ಬರುತ್ತವೆ.ಈ ಮೀನುಗಳಿಗೆ ಆಹಾರವಾಗಿ ರೆಡಿಮೇಡ್ ಆಹಾರದ ಜೊತೆಗೆ ಅಜೋಲಾ ನುಗ್ಗೆ ಸೊಪ್ಪು ಕಡಲೆ ಹಿಂಡಿ ಕೊಬ್ಬರಿ ಹಿಂಡಿ ಹಾಕುತ್ತಾರೆ. Video Credit For Krushi Belaku

ಆರ್ ಎ ಎಸ್ ವಿಧಾನವನ್ನು ಅನುಸರಿಸುವುದರಿಂದ ಕಡಿಮೆ ಜಾಗದಲ್ಲಿ ಹೆಚ್ಚು ಮೀನುಗಳನ್ನು ಸಾಕಬಹುದು. ಪ್ರಾರಂಭದಲ್ಲಿ ಐದರಿಂದ ಆರು ಲಕ್ಷ ಕರ್ಚು ಬರುತ್ತದೆ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಲು ಫಿಲ್ಟರ್ ಗಳನ್ನು ಆರ್ ಎ ಎಸ್ ವಿಧಾನದಲ್ಲಿ ಬಳಸಲೇ ಬೇಕಾಗುತ್ತದೆ. ಈ ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಹಾಯಧನ ನೀಡುತ್ತವೆ.

ನಾಟಿ ಕೋಳಿಗಳನ್ನು ಸಾಕುತ್ತಾರೆ ಒಂದು ದಿನದ ಕೊಳಿಮರಿಗೆ ನಲವತ್ತೈದು ರೂಪಾಯಿ ಬೀಳುತ್ತದೆ ಅವುಗಳು ನೈಸರ್ಗಿಕವಾಗಿ ಬೆಳೆಯಲು ಏಳರಿಂದ ಎಂಟು ತಿಂಗಳು ಬೇಕಾಗುತ್ತದೆ. ಇವುಗಳಿಗೆ ಆಹಾರವಾಗಿ ಸೊಪ್ಪುಗಳನ್ನು ಹಾಕುತ್ತಾರೆ ಜೊತೆಗೆ ಹೈಡ್ರೋ ಪೋನಿಕ್ಸ್ ಪದ್ಧತಿಯಲ್ಲಿ ಮೆಕ್ಕೆಜೋಳ ಮುಂತಾದವುಗಳನ್ನು ಹತ್ತುದಿವಸಕ್ಕೆ ಮೊಳಕೆ ಮಾಡಿ ಹಾಕುತ್ತಾರೆ ಇದರಿಂದ ಅವುಗಳಿಗೆ ಬೇಕಾದ ಪ್ರೊಟೀನ್ ಸಿಗುತ್ತದೆ ಜೊತೆಗೆ ಬೆಲಿಮೆಂತ್ಯ ಕುದುರೆಮೆಂತ್ಯ ಅಜೋಲಾ ಕೊಬ್ಬರಿಹಿಂಡಿ ಜೋಳ ಹೀಗೆ ಪೋಷಕಾಂಶ ಇರುವ ಆಹಾರವನ್ನು ಕೊಡುವುದರಿಂದ ಅವು ಚೆನ್ನಾಗಿ ಬೆಳೆಯುತ್ತವೆ.ಇವುಗಳನ್ನು ಮಾಂಸ ಮತ್ತು ಮೊಟ್ಟೆ ಗಾಗಿ ಬಳಸುತ್ತಾರೆ ಇದರಿಂದ ಆದಾಯ ಬರುತ್ತದೆ.

ಇನ್ನು ಇವರು ತುಡುವೆ ಜೇನು ಸಾಕಾಣಿಕೆಯನ್ನು ಮಾಡುತ್ತಾರೆ ಈ ಜೇನುಗಳಿಂದ ಇಳುವರಿ ಚೆನ್ನಾಗಿ ಬರುತ್ತದೆ ಇನ್ನು ಜೇನುತುಪ್ಪ ಜೇನುಪೆಟ್ಟಿಗೆ ಜೊತೆಗೆ ಇದರಿಂದ ಬರುವ ಮೆಣದಿಂದ ಹಣ ಬರುತ್ತದೆ.ಒಂದು ಜೇನು ಪೆಟ್ಟಿಗೆಗೆ ನಾಲ್ಕೂವರೆ ಸಾವಿರ ಖರ್ಚು ಬರುತ್ತದೆ.

ಕುರಿ ಸಾಕಾಣಿಕೆಯನ್ನು ಇತ್ತೀಚೆಗೆ ಎಲ್ಲಕಡೆಗಳಲ್ಲಿಯು ಮಾಡುತ್ತಿದ್ದಾರೆ ಇವರು ಸುಮಾರು ಹತ್ತು ಕುರಿಗಳನ್ನು ಸಾಕುತ್ತಾರೆ. ಕುರಿಗಳನ್ನು ಮಳೆಗಾಲದಲ್ಲಿ ಒಳಗೆ ಸಾಕುತ್ತಾರೆ ಅವುಗಳಿಗೆ ಕುದುರೆ ಮೆಂತ್ಯ ಬೇಲಿಮೆಂತ್ಯ ಜೊತೆಗೆ ಪ್ರತಿದಿನ ಕಾಲು ಕೆಜಿ ಹಿಂಡಿ ಮುಂತಾದವುಗಳನ್ನು ಹಾಕುತ್ತಾರೆ ಜೊತೆಗೆ ಅವುಗಳನ್ನು ಮೇಯಲು ತಮ್ಮ ಜಮೀನಿನಲ್ಲಿ ಬಿಡುತ್ತಾರೆ. ಇವರು ಕುರಿ ಸಾಕಾಣಿಕೆಗೆ ಒಂದು ಅರವತ್ತು ಸಾವಿರ ಬಂಡವಾಳ ಹಾಕಿದರೆ ಅದರಿಂದ ಒಂದು ಲಕ್ಷದ ಮೂವತ್ತು ಸಾವಿರದಿಂದ ಒಂದೂವರೆ ಲಕ್ಷ ಆದಾಯ ಗಳಿಸುತ್ತಾರೆ.

ನೋಡಿದಿರಲ್ಲ ಸ್ನೇಹಿತರೆ ಇವರು ಹೇಗೆ ತಮ್ಮ ಚಿಕ್ಕ ಜಾಗದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಹೇಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಎಂದು. ಸಾಧಿಸಬೇಕೆಂಬ ಛಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಇವರು ಸಾಧಿಸಿ ತೋರಿಸುವ ಮೂಲಕ ಯುವ ಜನರಿಗೆ ಸ್ಪೂರ್ತಿ ಆಗಿದ್ದಾರೆ. ಕೆಲಸವನ್ನು ಅರಸಿ ಬೇರೆಕಡೆ ಹೋಗುವವರು ತಮ್ಮ ಮನೆಯಲ್ಲಿಯೇ ಸ್ವಂತ ಉದ್ಯಮವನ್ನು ಆರಂಭಿಸಿ ಹೆಚ್ಚಿನ ಲಾಭವನ್ನು ಪಡೆಯಬಹುದು.

Leave a Reply

Your email address will not be published. Required fields are marked *