ಮನುಷ್ಯನ ಜೀವನ ಶೈಲಿ ದಿನೆ ದಿನೆ ಬದಲಾಗುತ್ತಿದೆ ಆಹಾರ ಶೈಲಿಯು ಕೂಡ ಬದಲಾವಣೆಯತ್ತ ಸಾಗುತ್ತಿದೆ. ಆದ್ರೆ ಇಂದಿನ ಆಹಾರ ಶೈಲಿಗಳು ರೋಗಗಳನ್ನು ಬೇಗನೆ ಬರಮಾಡುಕೊಳ್ಳುವಂತವು, ಹೌದು ಹಿಂದಿನ ದಿನಗಳಲ್ಲಿ ಸೊಪ್ಪು ತರಕಾರಿ, ದ್ವಿದಳ ದಾನ್ಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದರು ಆದ್ರೆ ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡುತ್ತಿದ್ದಾರೆ. ದೇಹಕ್ಕೆ ಹೆಚ್ಚು ಆರೋಗ್ಯವನ್ನು ವೃದ್ಧಿಸುವಂತ ಹಣ್ಣು ತರಕಾರಿ ದ್ವಿದಳ ದಾನ್ಯಗಳನ್ನು ಬಳಸಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ವಿಷ್ಯಕ್ಕೆ ಬರೋಣ ಹಾಗಲಕಾಯಿ ರುಚಿಯಲ್ಲಿ ಕಹಿ ಅನಿಸಿದರೂ ದೇಹಕ್ಕೆ ಸಿಹಿ ನೀಡುವಂತ ಕೆಲಸವನ್ನು ಮಾಡುತ್ತದೆ.
ಹೌದು ಮಧುಮೇಹಿಗಳಿಗೆ ಹಾಗಲಕಾಯಿ ಯಾಕೆ ಅಷ್ಟೊಂದು ಒಳ್ಳೆಯದು ಅನ್ನೋದನ್ನ ಹೇಳುವುದಾದರೆ ಹಾಗಲಕಾಯಿ ಸೇವನೆಯಿಂದ ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ. ಹಾಗಲಕಾಯಿ ದೇಹದಲ್ಲಿನ ಅನಗತ್ಯ ಬೊಜ್ಜು ನಿವಾರಿಸುತ್ತದೆ ಹಾಗೂ ಆರೋಗ್ಯಕ್ಕೆ ಅಮೃತವಿದ್ದಂತೆ. ಆದ್ದರಿಂದ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಹಾಗಲಕಾಯಿಯನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದರು ಹಾಗೂ ಮನೆಮುಂದಿನ ಕೈ ತೋಟಗಳಲ್ಲಿ ಹಾಗಲಕಾಯಿಯನ್ನು ಬೆಳೆಸಿ ಪ್ರತಿದಿನದ ಅಡುಗೆಗೆ ಬಳಸಿಕೊಳ್ಳುತ್ತಿದ್ದರು.
ಪ್ರತಿದಿನ ಹಾಗಲಕಾಯಿ ಜ್ಯುಸ್ ಮಾಡಿ ಸೇವನೆ ಮಾಡುವುದರಿಂದ ಹಾಗೂ ಅಡುಗೆಯಲ್ಲಿ ಹಾಗಲಕಾಯಿಯನ್ನು ಬಳಸಿ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ನಮ್ಮ ದೇಶದಲ್ಲಿ ಮಧುಮೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇದಕ್ಕೆ ಕಾರಣ ಇಂದಿನ ಒತ್ತಡದ ಬದುಕು ಹಾಗೂ ಕುಳಿತ ಜಾಗದಲ್ಲೇ ಹೆಚ್ಚು ಒತ್ತು ಕೆಲಸ ಮಾಡುವುದು, ದೇಹಕ್ಕೆ ಸರಿಯಾದ ಕೆಲಸ ಇಲ್ಲದೆ ಅಜೀರ್ಣತೆ ಕಾಡುವುದು ಈ ಎಲ್ಲ ಕಾರಣಗಳಿಂದ ಅಸಿಡಿಟಿ ಮಧುಮೇಹ ಇಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಹಾಗಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳನ್ನು ಆಹಾರ ಶೈಲಿಯಲ್ಲಿ ಬಳಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.