ಮದುವೆಯೆಂದರೆ ನನ್ನ ತಲೆಯಲ್ಲಿ ಬರುವುದು ಹುಡುಗ-ಹುಡುಗಿ ಸಂಭ್ರಮ ಮೆಹಂದಿ ಸಂಗೀತ. ಆದರೆ ಗುಜರಾತ್ನ ವಡೋದರಾದ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಯು ತನಗೆ ತಾನೆ ತಾಳಿ ಕಟ್ಟಿಕೊಂಡು ಮದುವೆಯಾಗಿದ್ದಾರೆ. ಭಾರತದಲ್ಲಿ ಮೊದಲ ಸೋಲೊಗಮಿ ವಿವಾಹಕ್ಕೆ ಸಾಕ್ಷಿಯಾದ ಕ್ಷಮಾ ಬಿಂದು ಅವರ ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಗುಜರಾತ್ನ ವಡೋದರಾದ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಯು ತನಗೆ ತಾನೆ ತಾಳಿ ಕಟ್ಟಿಕೊಂಡು ಮದುವೆಯಾಗಲಿದ್ದಾರೆ. ಈ ಸುದ್ದಿ ದೂರದರ್ಶನ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೆ ಜೂನ್ 11ರಂದು ಕ್ಷಮಾ ಬಿಂದು ಹೀಗೊಂದು ವಿಚಿತ್ರ ಮದುವೆಗೆ ಸಾಕ್ಷಿಯಾಗಿದ್ದಾರೆ, ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮದುವೆಯಲ್ಲಿ ಸಂಗೀತ, ಮೆಹಂದಿ ಎಲ್ಲ ರೀತಿಯ ಶಾಸ್ತ್ರಗಳು ಇದ್ದು, ಮದುವೆಯಾದ ಬಳಿಕ ಆಕೆ ಒಬ್ಬರೆ ಹನಿಮೂನ್ಗೂ ಹೋಗಲಿದ್ದಾರೆ. ಭಾರತದಲ್ಲಿ ಇದೆ ಮೊದಲ ಬಾರಿಗೆ ಇಂತಹದ್ದೊಂದು ಮದುವೆಯೊಂದು ನಡೆಯುತ್ತಿದ್ದು, ಇದು ಸ್ವಪ್ರೇಮಕ್ಕೆ ಒಂದು ಉದಾಹರಣೆ ಎಂದು ಹೇಳಲಾಗುತ್ತಿದೆ ಜೊತೆಗೆ ಈ ರೀತಿಯ ಮದುವೆಗೆ ಸೊಲೊಗಮಿ ಎಂದು ಕರೆಯುತ್ತಾರೆ.
ತನ್ನ ವಿವಾಹದ ಬಗ್ಗೆ ಮಾತನಾಡಿರುವ ಕ್ಷಮಾ ದೇಶದಲ್ಲೆ ಸ್ವಯಂ-ವಿವಾಹ ಎನ್ನುವುದು ಮೊದಲ ನಿದರ್ಶನವೆಂದು ಅವರೆ ಹೇಳಿಕೊಂಡಿದ್ದಾರೆ. ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಪ್ರೀತಿ ಇಟ್ಟುಕೊಳ್ಳುವುದು ಅಗತ್ಯ ಆದರೆ ತನ್ನನ್ನು ತಾನೆ ಪ್ರೀತಿಸುತ್ತಿದ್ದು ಅದಕ್ಕಾಗಿಯೆ ಈ ಮದುವೆ ಎಂದಿದ್ದಾರೆ. ಎಂಎಸ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿರುವ ಕ್ಷಮಾ ಬಿಂದು ಓರ್ವ ಬುದ್ಧಿವಂತೆ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ತನ್ನ ನಿರ್ಧಾರದ ಬಗ್ಗೆ ಅವಳು ತನ್ನ ಹೆತ್ತವರ ಬಳಿ ಹೇಳಿಕೊಂಡಾಗ ಪೋಷಕರು ಮೊದಲು ಆಶ್ಚರ್ಯವ್ಯಕ್ತಪಡಿಸಿದರೂ ಬಳಿಕ ಒಪ್ಪಿಕೊಂಡಿದ್ದಾರೆ. ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಈ ಆಲೋಚನೆ ಇತ್ತು ಆದರೆ ಅದು ಸಾಧ್ಯ ಎಂದು ಭಾವಿಸಿರಲಿಲ್ಲ, ನಂತರ ನಾನು ಏಕಪತ್ನಿತ್ವ ಬಗ್ಗೆ ಓದಿ ತಿಳಿದುಕೊಂಡೆ ಆಗ ನಾನು ನನ್ನನ್ನೆ ಮದುವೆಯಾದರೆ ಹೇಗೆ ಎಂಬ ಆಲೋಚನೆ ಬಂತು ಎಂದು ಸಂದರ್ಶನವೊಂದರಲ್ಲಿ ಅವರೆ ಈ ಅಚ್ಛರಿಯ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ನನಗೆ ವರನ ಜೊತೆಗೆ ವಿವಾಹ ಇಷ್ಟವಿಲ್ಲ, ಜೀವನ ಪೂರ್ತಿ ಏಕಾಂಗಿಯಾಗಿರುವೆ, ದೇಶದಲ್ಲಿ ಇಂತಹದ್ದೊಂದು ಮದುವೆಗೆ ನಾನೆ ಸಾಕ್ಷಿ ಎಂದಿದ್ದಾರೆ ಕ್ಷಮಾ. ಭಾರತದಲ್ಲಿ ಇದುವರೆಗೂ ಯಾರೂ ಈ ರೀತಿ ತನ್ನನ್ನು ತಾನೆ ಮದುವೆಯಾದ ಉದಾಹರಣೆಗಳಿಲ್ಲ. ಇದೆ ಮೊದಲ ಬಾರಿಗೆ ಈ ರೀತಿಯ ಮದುವೆ ನಡೆಯಲಿದೆ. ಭಾರತದಲ್ಲಿ ಏಕಪತ್ನಿತ್ವ ಅಥವಾ ಸ್ವಯಂ-ವಿವಾಹಕ್ಕೆ ಯಾವುದೆ ಕಾನೂನಿನ ಮಾನ್ಯತೆ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತವಾಗಿದೆ. ಭಾರತದಲ್ಲಿ ಇದೆ ಮೊದಲು ಸೊಲೊಗಮಿ ಎನ್ನುವ ವಿವಾಹಕ್ಕೆ ಒಳಗಾಗುತ್ತಿದ್ದು, ಈ ಪರಿಕಲ್ಪನೆಯುಳ್ಳವರನ್ನು ಬಂಧಿಸುವ ಅಧಿಕಾರವೂ ಇಲ್ಲ.
ಇದನ್ನು ಈ ಯುವತಿಯ ಹುಚ್ಚುತನ ಅನ್ನಬೇಕೊ ಅಥವಾ ಪ್ರಬುದ್ಧತೆ ಅನ್ನಬೇಕೊ ಯಾವುದೂ ಗೊತ್ತಾಗುತ್ತಿಲ್ಲ ಎನ್ನುವುದು ನೆಟಿಜನ್ಗಳ ಮಾತು. ಈಕೆಯ ಸುದ್ದಿ ಕೇಳಿ ಅವರನ್ನೆ ಅವರೆ ಮದುವೆ ಆಗುವ ಕಲ್ಪನೆಯೊಂದು ಭೂಮಿ ಮೇಲೆ ಇದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡತೊಡಗಿದೆ. ಸೊಲೊಗಮಿ ಪದ್ದತಿ ಬೇರೆ ದೇಶಗಳಲ್ಲಿ ಚಾಲ್ತಿಯಲ್ಲಿದ್ದು ಭಾರತದಲ್ಲಿ ಇದೆ ಮೊದಲ ಬಾರಿಗೆ ಈ ಪದ್ದತಿಯನ್ನು ಗುಜರಾತ್ ನಲ್ಲಿ ನೋಡುತ್ತಿದ್ದೇವೆ.