ಕರ್ನಾಟಕ ಸರ್ಕಾರ ಅನ್ನ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಗೃಹಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಜಮಾನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 7ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ. ಕೆಲವರ ಅಕೌಂಟ್’ಗೆ ಹಣ ಜಮಾ ಆಗಿದೆ. ಆದರೆ, ಹಲವರ ಅಕೌಂಟ್’ಗೆ ಇನ್ನೂ ಹಣ ಬಂದು ಸೇರಿಲ್ಲ.

ಇದರ ಜೊತೆಗೆ ಅನ್ನ ಭಾಗ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಜನರಿಗೆ ಅನ್ನ ಭಾಗ್ಯ ನೀಡಲಾಗಿದೆ. ಕರ್ನಾಟಕ ರಾಜ್ಯ ಸರಕಾರ ಜಾರಿಗೆ ಮಾಡಿರುವ ಗೃಹಲಕ್ಷ್ಮಿ ಭಾಗ್ಯ ಮತ್ತು ಅನ್ನ ಭಾಗ್ಯ ಯೋಜನೆಯ ಕೆಳಗೆ ಕೋಟ್ಯಾಂತರ ಜನರು ಅದರಿಂದ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಆದರೆ, ಮಾರ್ಚ್‌ ತಿಂಗಳ 25ನೇ ತಾರೀಖಿನ ಒಳಗೆ ಈ ಕೆಲಸವನ್ನು ಮಾಡದೇ ಹೋದ್ರೆ ಆ, ರೀತಿಯ ಜನರಿಗೆ ಈ ಎರಡು ಯೋಜನೆಗಳ ಪ್ರಯೋಜನ ಸಿಗುವುದಿಲ್ಲ. ಯಾವುದು ಈ ಕೆಲಸ ಎಂದು ನೋಡೋಣ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊಸ ಆದೇಶ ಬಿಡುಗಡೆ ಮಾಡಿದೆ. ಈ, ಆದೇಶದ ನಿಯಮದ ಅನ್ವಯ ಕೆಲವೊಂದು ಕೆಲಸವನ್ನು ಈ ಎರಡು ಯೋಜನೆಗಳ ಫಲಾನುಭವಿಗಳು ತಪ್ಪದೇ ಮಾಡಲೇ ಬೇಕು.

ಒಂದು ವೇಳೆ ಈ ಕೆಲಸ ಮಾಡದೇ ಹೋದ್ರೆ ಅವರ ಬ್ಯಾಂಕ್‌ ಅಕೌಂಟ್’ಗೆ ಹಣ ಬಂದು ಸೇರಲ್ಲ. ಕರ್ನಾಟಕ ಸರಕಾರದ ಹೊಸ ಆದೇಶದ ನಿಯಮದ ಅನುಸಾರ, ಅವರ ಬ್ಯಾಂಕ್‌ ಅಕೌಂಟ್’ಗೆ ಎನ್‌ಪಿಸಿಐ ( NPCI ) ಮ್ಯಾಪಿಂಗ್‌, ಆಧಾರ್‌ ಕಾರ್ಡ್‌ ಲಿಂಕ್‌, ಕೆವೈಸಿ ( E-KYC ) ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಆದರೆ, ಈ ಕೆಲಸವನ್ನು ಫಲಾನುಭವಿಗಳು ಮಾಡಿಸದೇ ಹೋದ್ರೆ, ಅವರ ಬ್ಯಾಂಕ್‌ ಅಕೌಂಟ್’ಗೆ ಹಣ ಜಮಾ ಆಗುವುದಿಲ್ಲ. ಅದರಿಂದ ಅವರ ಅಕೌಂಟ್’ಗೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಒಂದು ಬಾರಿ ಪರೀಕ್ಷೆ ಮಾಡಿಸಬೇಕು. ಅನ್ನ ಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು :- ಮೊದಲು ಫಲಾನುಭವಿಗಳ ಅಕೌಂಟ್’ಗೆ ಹಣ ವರ್ಗಾವಣೆ ಆಗಿದ್ಯಾ ಚೆಕ್‌ ಮಾಡಬೇಕು. ಪ್ರತಿ ಭಾರತೀಯರು ಆಧಾರ್‌ ಕಾರ್ಡ್‌ ಹೊಂದುವುದು ಕಡ್ಡಾಯವಾಗಿದೆ.

ಮೊದಲು ಫಲಾನುಭವಿಗಳು ಆಧಾರ್‌ ಕಾರ್ಡ್ ಪಡೆದು 10 ವರ್ಷ ಮುಗಿದಿದ್ದರೆ. ಯಾವುದಕ್ಕೂ, ಒಂದು ಬಾರಿ ಅವರ ಕಾರ್ಡ್‌ ಅನ್ನು ನವೀಕರಣ ಮಾಡಿಸುವುದು ಉತ್ತಮ. ಒಂದು ವೇಳೆ ಕಾರ್ಡ್‌ ಅತ್ಯಂತ ಹಳೆಯದಾಗಿ ಇದ್ದರೆ. ಅವರ, ಬ್ಯಾಂಕ್‌ ಅಕೌಂಟ್’ಗೆ ಗ್ಯಾರಂಟಿ ಯೋಜನೆಯ ಹಣ ನೇರವಾಗಿ ಜಮಾ ಆಗುವುದಿಲ್ಲ. ಫಲಾನುಭವಿಗಳು ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಸುವ ಅನಿವಾರ್ಯ ಇಲ್ಲದೇ ಇದ್ದರೂ ಸಹ ಅವರು ಯಾವುದಕ್ಕೂ ಒಂದು ಬಾರಿ ಅವರ ಆಧಾರ್‌ ಕಾರ್ಡ್‌ ಅನ್ನು ನವೀಕರಣ ‌ ಮಾಡಿಸುವುದು ಹೆಚ್ಚು ಉತ್ತಮ ಆಯ್ಕೆ .

2024ರ ಜೂನ್‌ ತಿಂಗಳ 14 ನೇ ತಾರೀಖಿನ ತನಕ ಆಧಾರ್‌ ಕಾರ್ಡ್‌ ಉಚಿತ ನವೀಕರಣಕ್ಕೆ ಸರ್ಕಾರ ಅವಕಾಶವನ್ನು ಕಲ್ಪಿಸಿದೆ. ಅದರಿಂದ, ಇದರ ಪ್ರಯೋಜನವನ್ನು ಅರ್ಹರು ಪಡೆಯಬಹುದು. ಫಲಾನುಭವಿಗಳು ಸರ್ಕಾರದ ಆದೇಶದಲ್ಲಿ ನೀಡಿರುವ ಅಂಶಗಳನ್ನು ಪಾಲನೆ ಮಾಡದೇ ಹೋದ್ರೆ ಅವರಿಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗುವುದಿಲ್ಲ. ಯಾವುದಕ್ಕೂ ಒಂದು ಸಾರಿ ಅರ್ಹತೆ ಇರುವವರು ಅವರ ಅಕೌಂಟ್’ನ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆಯೇ ಎನ್ನುವುದನ್ನು ಪರೀಕ್ಷೆ ಮಾಡಿಸಿ.

Leave a Reply

Your email address will not be published. Required fields are marked *