Gruha Lakshmi Scheme Application: ಇಡೀ ಕರ್ನಾಟಕದಲ್ಲಿ ಎಲ್ಲ ಜನರ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ ಒಂದೇ ಅದೇನೆಂದರೆ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೋ ಅಥವಾ ಇಲ್ಲವೋ ಎಂಬುದಾಗಿದೆ.ಚುನಾವಣೆ ಸಮಯದಲ್ಲಿ 5 ಭಾಗ್ಯಗಳ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ಗೆದ್ದು ಬಂತು ಎನ್ನುವುದು ಎಲ್ಲರ ಅಭಿಪ್ರಾಯ.

ಈ ಐದು ಯೋಜನೆಗಳಲ್ಲಿ ಪ್ರಮುಖವಾದದೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ವಿಶೇಷವಾಗಿ ಈ ಯೋಜನೆಯು ಮನೆಯ ಯಜಮಾನಿಗಾಗಿ ಮಾಡಿರುವ ಯೋಜನೆ ಅವರನ್ನು ಆರ್ಥಿಕವಾಗಿ ದೃಢಗೊಳಿಸಲು ಸರ್ಕಾರ ಈ ಯೋಜನೆಗೆ ಮುಂದಾಗಿದೆ. ಕೇವಲ ಪರಿಶಿಷ್ಟ ಜಾತಿ, ಧರ್ಮ ಅಥವಾ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಮಾತ್ರ ಸೀಮಿತವಲ್ಲದೆ ಎಲ್ಲಾ ಮನೆಯ ಯಜಮಾನಿಗೂ ಕೂಡ ಈ ಹಣ ಸಿಗುತ್ತದೆ ಆದರೆ ಒಂದು ಮನೆಯಲ್ಲಿ ಒಂದು ಮಹಿಳೆಗೆ ಮಾತ್ರ ಈ ಭಾಗ್ಯ ದೊರೆಯುತ್ತದೆ.

ಈ ಯೋಜನೆಗಳನ್ನ ಪಡೆಯಲು ಕೆಲವು ಶರತ್ತುಗಳು ಕೂಡ ಅನ್ವಯವಾಗುತ್ತದೆ ಅದು ಯಾವುದು ಎಂಬುದನ್ನ ಈ ಕೆಳಗೆ ತಿಳಿಯೋಣ
ಸರ್ಕಾರಿ ನೌಕರಿಯರಾಗಿರಬಾರದು.
ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಮ್ಮಿ ಇರಬೇಕು.
ನೀವು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕರ್ನಾಟಕದಲ್ಲಿಯೇ ವಾಸಿಸುತ್ತಿರಬೇಕು.

ಕೆಲವರಿಗೆ ಪ್ರಶ್ನೆ ಇರಬಹುದು ನನಗೆ ವಿದವಾ ವೇತನ ಬರುತ್ತಿದೆ ಆದರೂ ಕೂಡಾ ಭಾಗ್ಯಲಕ್ಷ್ಮಿ ಯೋಜನೆ ಬರುತ್ತಾ? ಹೌದು ವಿಧವಾ ವೇತನ ಬರುತ್ತಿದ್ದವರಿಗೂ ಕೂಡ ಭಾಗ್ಯಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ. ನಿಮ್ಮ ಭಾಗ್ಯಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾವಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಈ ಕೆಳಗೆ ನೀಡಿರುವ ಮಾಹಿತಿಗಳಲ್ಲಿ ತಿಳಿದುಕೊಳ್ಳೋಣ
Step 1: gruhalakshmi.karnataka.gov.in ಈ ವೆಬ್ಸೈಟ್ ಗೆ ಹೋಗಬೇಕು ಆಗ ಇದರ ಮುಖಪುಟ ಬರುತ್ತದೆ.
Step 2: ಮುಖಪುಟದಲ್ಲಿ ಗೃಹಲಕ್ಷ್ಮಿ sceem ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಒತ್ತಿ ಆಗ ಈ ಸ್ಕೀಮ್ ನ ಅಪ್ಲಿಕೇಶನ್ ಫಾರ್ಮ್ ತೋರಿಸುತ್ತದೆ.
Step 3: ಅಲ್ಲಿ ಕೇಳಿರುವಂತಹ ಮಾಹಿತಿಯನ್ನ ಭರ್ತಿ ಮಾಡಿ.
Step 4: ಎಲ್ಲ ಮಾಹಿತಿಯನ್ನು ತುಂಬಿದ ನಂತರ ಒಂದು ಸಲ ಪರಿಶೀಲನೆ ಮಾಡಿ ಹಾಗೂ ಅಲ್ಲಿ ಕೇಳಿರುವ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ.
Step 5: ಅಪ್ಲಿಕೇಶನ್ ಪ್ರಿಂಟ್ ತೆಗೆದು ಗುರುತಿನ ಪುರಾವೆ ನಿವಾಸ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಹಾಗೂ ಎರಡು ಫೋಟೋಗಳ ಜೊತೆಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ನಿರ್ದೇಶಕರ ಕಚೇರಿಗೆ ಕೊಡಬೇಕಾಗುತ್ತೆದೆ.

ಬೇಕಾಗುವ ದಾಖಲಾತಿಗಳು :
ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್
ಕರೆಂಟ್ ಬಿಲ್ ಅಥವಾ ರೇಷನ್ ಕಾರ್ಡ್ ಅಥವಾ ಮನೆಯ ಕರ ತುಂಬಿದ ಚೀಟಿ
ಎರಡು ಪಾಸ್ಪೋರ್ಟ್ ಸೈಜ್ ಫೋಟೋ
ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಬಹುದು. ನಂತರ ಅಗಸ್ಟ್ 15ರ ವರೆಗೆ ದಾಖಲಾತಿ ಪರಿಶೀಲನೆ ನಡೆಯುತ್ತದೆ ಆಗಸ್ಟ್ 15ರ ನಂತರ ಗೃಹಲಕ್ಷ್ಮಿ ಸ್ಕೀಮ್ ನ ಹಣ ಎಲ್ಲರಿಗೂ ಸಿಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!