Gowri ganesha Habba: ಮುಂದಿನ ವಾರದಲ್ಲಿ ಗಣೇಶನ ಹಬ್ಬದ ಸಂಭ್ರಮ ಹಳ್ಳಿ ಹಳ್ಳಿಗಳಲ್ಲಿ ಮನೆ ಸಿಂಗಾರಗೊಂಡು ಎಲ್ಲೆಲ್ಲೂ ಸಡಗರ ಸಂಭ್ರಮದಿಂದ ಕೂಡಿರುತ್ತದೆ. ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಾದ್ರಪದ ಶುಕ್ಲ ಚತುರ್ಥಿ ದಿನ ಗಣೇಶನ ಹುಟ್ಟಿದ ದಿನ ಈ ದಿನವನ್ನು ನಾಡಿನಾದ್ಯಂತ ಗಣೇಶ ಚತುರ್ಥಿ ಎಂದು ಆಚರಿಸುತ್ತೇವೆ. ಹಬ್ಬ ಎಂದರೆ ಸಡಗರ ಸಂಭ್ರಮ ಶ್ರೀಮಂತರು ಹಣದ ಅನುಕೂಲ ಇದ್ದವರು ಮನೆ ತುಂಬಾ ಅಲಂಕಾರ ಮಾಡಿ ವಿಜೃಂಭಣೆಯಿಂದ ಆಡಂಬರವಾಗಿ ಮಾಡುತ್ತಾರೆ ಹಣದ ಅನುಕೂಲ ಇಲ್ಲದೆ ಇದ್ದವರು ಹೆಚ್ಚು ಅಲಂಕಾರ ಮಾಡದೆ ಚಿಕ್ಕದಾಗಿ ಪೂಜೆ ಮಾಡುತ್ತಾರೆ. ಗಣೇಶನ ಹಬ್ಬವನ್ನು ಸರಳವಾಗಿ ಅರ್ಥಪೂರ್ಣವಾಗಿ ಮಾಡಬೇಕು ಹಬ್ಬ ಎನ್ನುವುದು ನಮ್ಮ ಶ್ರೀಮಂತಿಕೆಯ ಪ್ರದರ್ಶನವಲ್ಲ ಭಕ್ತಿಯ ಪ್ರದರ್ಶನವಾಗಬೇಕು.

ಬಾದ್ರಪದ ಶುಕ್ಲ ಚತುರ್ಥಿಗೆ ಮದ್ಯಾಹ್ನ 1 ಗಂಟೆಗೆ ಗಣೇಶನ ಹುಟ್ಟಿದ ದಿನ ಎಂದು ಹೇಳುತ್ತೇವೆ ಹೀಗಾಗಿ ಮದ್ಯಾಹ್ನ 12 ಗಂಟೆಯಿಂದ 1 ಗಂಟೆಯ ಒಳಗೆ ಗಣೇಶನ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಮಿಕಲ್ ಮಿಶ್ರಿತ ವಿಗ್ರಹಗಳು ಮಾರ್ಕೆಟ್ ಗೆ ಬರುತ್ತಿವೆ ಅವುಗಳನ್ನು ಬಳಸಬಾರದು ಮಣ್ಣಿನ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ.

ಮೊದಲು ಮನೆಯಲ್ಲಿ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹವನ್ನು ಇಡಲು ಪೀಠವನ್ನು ತಯಾರಿ ಮಾಡಬೇಕು ಅದರ ಮೇಲೆ ಮಣ್ಣಿನ ಗಣೇಶನ ವಿಗ್ರಹವನ್ನು ಇಟ್ಟು ಪ್ರತಿಷ್ಠಾಪನೆ ಮಾಡಲು ಅನುಷ್ಠಾನ ಮಾಡಬೇಕು ಅಂದರೆ ಹೊರಗಡೆ ಇರುವ ದೇವರು ತನ್ನ ಮನೆಗೆ ಬಂದು ನೆಲೆಸಲಿ ಸ್ಥಾನವನ್ನು ಅಲಂಕರಿಸಲಿ ಎಂದು ಅನುಷ್ಠಾನ ಮಾಡಬೇಕು. ಅಕ್ಕಿ, ಗರಿಕೆ ಅರಿಶಿಣ ಕುಂಕುಮ ಬಾಳೆಎಲೆ, ಮಾವಿನ ಎಲೆ, ವೀಳ್ಯದ ಎಲೆ ಇವುಗಳನ್ನು ಮೊದಲೆ ಸಿದ್ಧಪಡಿಸಿಕೊಂಡು ಪ್ರತಿಷ್ಠಾಪಿಸಿದ ಗಣೇಶನನ್ನು ಇವುಗಳಿಂದ ಅಲಂಕರಿಸಿದರೆ ಕೈಗೊಂಡ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತದೆ.

ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಗಣೇಶನಿಗೆ ನೈವೇದ್ಯ ಅರ್ಪಣೆ ಮಾಡಬೇಕು. ಗಣೇಶನಿಗೆ ಪ್ರಿಯವಾದ ತಿಂಡಿ ಎಂದರೆ ಮೋದಕ ನಂತರ ಕರ್ಜಿಕಾಯಿ ಪಂಚಕಜ್ಜಾಯ ಸಿಹಿ ಕಡಬುಗಳನ್ನು ಗಣೇಶನಿಗೆ ನೈವೇದ್ಯ ಮಾಡಬೇಕು ಇದರಿಂದ ಗಣೇಶನು ವಿಘ್ನನಿವಾರಕನಾಗಿ ಮನೆಯಲ್ಲಿ ನೆಲೆಸುತ್ತಾನೆ. ಗಣೇಶನ ಹಬ್ಬದ ದಿನದಂದು ಐದು ಜನ ಮುತ್ತೈದರನ್ನು ಮನೆಗೆ ಕರೆದು ಅರಿಶಿನ ಕುಂಕುಮ ಕೊಟ್ಟು ಊಟ ಹಾಕಿಸಿದರೆ ಅವರು ಹೊಟ್ಟೆ ತುಂಬ ಊಟ ಮಾಡಿದರೆ ಸಂತೃಪ್ತರಾಗಿ ಹರಸುತ್ತಾರೆ ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಗಣೇಶನ ಅಷ್ಟೊತ್ತರಗಳನ್ನು, ಶ್ಲೋಕಗಳನ್ನು ಮನೆಯಲ್ಲಿ ಪಠಿಸಬೇಕು ಜೊತೆಗೆ ಶಿವನ ನಾಮ ಭಜನೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಕಂಡುಬರುತ್ತದೆ.

ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮನೆಯಲ್ಲಿ ಶಕ್ತ್ಯಾನುಸಾರ ಪೂಜೆ ಪುನಸ್ಕಾರ, ದಾನ ಧರ್ಮಗಳನ್ನು ಮಾಡಬೇಕಾಗುತ್ತದೆ. ನಂತರ ಗಣೇಶನ ವಿಸರ್ಜನೆ ಪ್ರಕೃತಿಗೆ ಮಾರಕವಾಗುವ ವಿಗ್ರಹಗಳನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬಾರದು ಮಣ್ಣಿನ ವಿಗ್ರಹವನ್ನು ಮಾತ್ರ ಪ್ರತಿಷ್ಠಾಪಿಸಿ ಒಂದು ದಿನ ಅಂದರೆ ಪ್ರತಿಷ್ಠಾಪಿಸಿದ 24 ಗಂಟೆಯ ನಂತರ ವಿಸರ್ಜನೆ ಮಾಡಬೇಕಾಗುತ್ತದೆ ಒಂದು ದಿನದಲ್ಲಿ ವಿಸರ್ಜನೆ ಮಾಡಲು ಆಗದೆ ಇದ್ದಾಗ ಮೂರು ದಿನ ಐದು ದಿನ ಒಂಭತ್ತು ದಿನ ಹೀಗೆ ಒಂಭತ್ತು ದಿನಗಳ ಒಳಗೆ ವಿಸರ್ಜನೆ ಮಾಡಬೇಕಾಗುತ್ತದೆ

ಗಣೇಶನ ವಿಸರ್ಜನೆ ಅಂದರೆ ಕೆರೆಗೆ ಬಿಡುವುದು ಎಂದರ್ಥವಲ್ಲ ಮನೆಯಲ್ಲಿ ಪ್ರತಿಷ್ಠಾಪಿಸಿದಾಗ ಒಂದು ಬಕೆಟ್ ನಲ್ಲಿ ನೀರನ್ನು ತುಂಬಿ ವಿಸರ್ಜನೆ ಮಾಡಿ ವಿಗ್ರಹ ಕರಗಿ ಅದರ ಕೆಸರನ್ನು ತುಳಸಿ ಗಿಡಕ್ಕೆ ಹಾಕಿ ತುಳಸಿ ಗಿಡವನ್ನು ಬೆಳೆಸಿದಾಗ ಫಲಸಿದ್ದಿಯಾಗಿ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಈ ರೀತಿ ಸರಳವಾಗಿ ಗಣೇಶನ ಹಬ್ಬವನ್ನು ಆಚರಿಸಬಹುದು ಇದರಿಂದ ಯಾವುದೆ ಸಮಸ್ಯೆ ಆಗುವುದಿಲ್ಲ ಎಲ್ಲರಿಗೂ ಮುಂಚಿತವಾಗಿಯೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸರಳವಾಗಿ ಸಂತೋಷವಾಗಿ ಆಚರಿಸುವ ಮೂಲಕ ಗಣೇಶನ ಅನುಗ್ರಹಕ್ಕೆ ಪಾತ್ರರಾಗೋಣ

By

Leave a Reply

Your email address will not be published. Required fields are marked *