Kodi mutt swamiji bavishya: ಸ್ನೇಹಿತರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಪೈಪೋಟಿ ನೀಡಿ ಬಹುಮತಗಳಿಂದ ಗೆದ್ದು ಕರ್ನಾಟಕ ಸರ್ಕಾರದ ಆಡಳಿತವನ್ನು ತನ್ನ ವಷಕ್ಕೆ ಪಡೆದುಕೊಂಡ ಬೆನ್ನಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಮುಂದಿನ ಲೋಕಸಭಾ ಚುನಾವಣೆಯನ್ನು(Lok Sabha election) ಗೆಲ್ಲುವ ಸಲುವಾಗಿ ನಾನಾ ರೀತಿಯ ರಣತಂತ್ರವನ್ನು ಎಣೆಯುತ್ತಿದ್ದಾರೆ. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದಷ್ಟೇ ಅರಮನೆ ಮೈದಾನದಲ್ಲಿ ಬೃಹತ್ ಸಭೆ ಒಂದನ್ನು

ಆಯೋಜಿಸಿ‌ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮೈತ್ರಿ ಮಾಡಿಕೊಳ್ಳುವುದರ ಕುರಿತು ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ಕೋಡಿಮಠದ ಶ್ರೀಗಳು ಭವಿಷ್ಯ ಒಂದನ್ನು ನುಡಿದಿದ್ದು, ಮುಂದಿನ ದಿನಮಾನಗಳಲ್ಲಿ ಕರ್ನಾಟಕ ರಾಜಕೀಯ ವಲಯದಲ್ಲಿ ಸೃಷ್ಟಿಯಾಗುವಂತಹ ಸಂಗತಿಗಳ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ಶ್ರೀಗಳು ಹೇಳಿದ್ದೇನು? ಮೈತ್ರಿ ಎಫೆಕ್ಟ್ ಲೋಕಸಭಾ ಎಲೆಕ್ಷನ್ ಮೇಲೆ ಪ್ರಭಾವ ಬೀರಲಿದ್ಯಾ?

Kodi mutt swamiji bavishya

ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಒಟ್ಟಿಗೆ ಸೇರಿ ಕಾಂಗ್ರೆಸ್ಗೆ ಮಣ್ಣುಮುಕ್ಕಿಸಲಿದ್ದಾರಾ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ತಿಳಿಯುವಾಗ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರ ಬರುತ್ತಾ ಇದ್ದಹಾಗೆ ಕಾಂಗ್ರೆಸ್ ಯಾವ ಮೈತ್ರಿಯು ಈ ಬಾರಿಯ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ,

ಅಂದಹಾಗೆ ಜೆಡಿಎಸ್ (JDS) ಆರು ಸೀಟ್ಗಳನ್ನು ಕೇಳುವ ಮೂಲಕ ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಮಾಧ್ಯಮದವರೊಟ್ಟಿಗೆ ಮಾತನಾಡಿದ ಕೋಡಿಮಠದ ಶ್ರೀಗಳು “ಅದು ಅವರವರ ವಿಚಾರವಾಗಿದೆ, ಅದರ ಬಗ್ಗೆ ಹೇಳಲಾಗುವುದಿಲ್ಲ, ದೇಶದ ಬಗ್ಗೆ ಈ ಹಿಂದೆಯೂ ನಾನು ಹೇಳಿದ್ದೆ.

ದೊಡ್ಡ ದೊಡ್ಡ ನಗರಗಳಿಗೆ ಅಪಾಯ ಕಾದಿದೆ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆಯು ಕಾಡಲಿದ್ದು, ಯುಗಾದಿಯ ನಂತರ ಏನಾಗುತ್ತೆ ಎಂಬುದನ್ನು ನೀವೇ ಕಾದು ನೋಡಿ” ಎಂಬ ಆಶ್ಚರ್ಯಕರ ಹೇಳಿಕೆಯನ್ನು ಶ್ರೀಗಳು ನೀಡಿದ್ದಾರೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!