ಇನ್ನು ಕೆಲಸ ಸಿಗದೆ, ಒಳ್ಳೆಯ ಕೆಲಸಕ್ಕಾಗಿ ಕಾಯುತ್ತಿರುವ ಎಲ್ಲರಿಗೂ ಸಹ ಸರ್ಕಾರ ಈಗ ಒಂದು ಗುಡ್ ನ್ಯೂಸ್ ನೀಡಿದೆ. ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಫಸ್ಟ್ ಡಿವಿಷನ್ ಅಸಿಸ್ಟಂಟ್ ಹಾಗೂ ಸೆಕೆಂಡ್ ಡಿವಿಷನ್ ಅಸಿಸ್ಟಂಟ್ ಈ ಎರಡು ಹುದ್ದೆಗಳಿಗೆ ನೇಮಕಾತಿ ಶೀಘ್ರದಲ್ಲೇ ಶುರು ಮಾಡಲಾಗುತ್ತದೆ. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಆದಷ್ಟು ಬೇಗನೆ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ..

ಈ ಬಗ್ಗೆ ಜಿಲ್ಲಾವಾರು ಮಟ್ಟದಲ್ಲಿ ಆದೇಶವನ್ನು ನೀಡಲಾಗಿದೆ. ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕಿನ ಮಟ್ಟದಲ್ಲಿ, ನೇರ ನೇಮಕಾತಿ ಮಾಡಿಕೊಳ್ಳುವ ಮೂಲಕ ಲಿಪಿಕ ವೃಂದದ ಹುದ್ದೆಗಳನ್ನು, ಸದರಿ ಲೆಕ್ಕದಲ್ಲಿ ಭರ್ತಿ ಮಾಡಿಕೊಳ್ಳುವುದಕ್ಕಾಗಿ ಹಣಕಾಸಿನ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಮನವಿಗೆ ಆರ್ಥಿಕ ಇಲಾಖೆ ಕೂಡ ಸ್ಪಂದನೆ ನೀಡಿದೆ.

2/11/2023 ರಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, 100 FDA ಹುದ್ದೆಗಳು, 200 SDA ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ, ನೇರ ನೇಮಕಾತಿ ಮಾಡಿಕೊಳ್ಳುವ ಕೋಟಾ ಅಡಿಯಲ್ಲಿ ಈ ಹುದ್ದೆಗಳು ಬರುತ್ತದೆ. ಖಾಲಿ ಇರುವ ಹುದ್ದೆಗಳನ್ನು ಈ ಕೆಳಗಿನ ರೀತಿಯಾಗಿ ವಿಂಗಡಿಸಲಾಗಿದೆ.

Leave a Reply

Your email address will not be published. Required fields are marked *