ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿ ಇರುವ ಬಿಎಸ್ ಯಡಿಯೂರಪ್ಪನವರು ಎರಡನೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಡೆಯಿಂದ ಅನುದಾನ ಪಡೆದಂತಹ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 5000ರೂ ಪರಿಹಾರಧನವನ್ನು ನೀಡಬೇಕೆಂದು ಘೋಷಣೆ ಮಾಡಲಾಗಿತ್ತು. ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಹಣವನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರದ 5000ರೂ ಅನುದಾನವನ್ನು ಪಡೆಯಲು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಶಾಲಾ ಮುಖ್ಯ ಶಿಕ್ಷಕರ ಮೂಲಕ ಬಿಇಒ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಶಾಲಾ ಮುಖ್ಯಸ್ಥರ ಮೂಲಕ ಬಿಇಒ ಅವರಿಗೆ ಅರ್ಜಿ ಸಲ್ಲಿಸಬೇಕಾದರೆ ಹಲವು ದಾಖಲಾತಿಗಳು ಬೇಕಾಗುತ್ತದೆ. ಮೊದಲನೆಯದಾಗಿ ಶಿಕ್ಷಣ ಸಂಸ್ಥೆಯ ನೀಡಿದಂತಹ ಗುರುತಿನ ಚೀಟಿಯೂ ಬೇಕಾಗುತ್ತದೆ. ಜೊತೆಗೆ ಶಿಕ್ಷಣ ಸಂಸ್ಥೆಯಿಂದ ನೀಡಿದಂತಹ ನೇಮಕಾತಿಯ ಆದೇಶ ಪ್ರತಿ ಬೇಕಾಗುತ್ತದೆ. ಸೇವಾ ಪ್ರಮಾಣ ಪತ್ರದ ಪ್ರತಿ ಇರಬೇಕಾಗುತ್ತದೆ.
ಆಧಾರ್ ಕಾರ್ಡ್ ನ ಪ್ರತಿಯನ್ನು ಇದರ ಜೊತೆ ಇಡಬೇಕು. ರಾಷ್ಟ್ರೀಕೃತ ಬ್ಯಾಂಕ್ ನ ಪಾಸ್ ಬುಕ್ ಪ್ರತಿಯು ಬೇಕಾಗುತ್ತದೆ ಹಾಗೂ ಒಂದು ಕಲರ್ ಪಾಸ್ಪೋರ್ಟ್ ಅಳತೆಯ ಫೋಟೋ ಬೇಕಾಗುತ್ತದೆ. ಜೊತೆಗೆ ಎಸ್ ಎಟಿಎಸ್ ಶಿಕ್ಷಕರ ಗುರುತಿನ ಚೀಟಿಯೂ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ಪಡೆದ ದೃಡೀಕರಣ ಪತ್ರ ಬೇಕಾಗುತ್ತದೆ. ಇವಿಷ್ಟು ದಾಖಲಾತಿಗಳು ಮುಖ್ಯವಾಗಿ ಬೇಕಾಗುತ್ತದೆ.
ಈ ಎಲ್ಲಾ ದಾಖಲಾತಿಗಳನ್ನು ರಾಜ್ಯದ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ತಮ್ಮ ಶಾಲೆಯ ಮುಖ್ಯಶಿಕ್ಷಕರ ಮೂಲಕ ಆಯಾ ವ್ಯಾಪ್ತಿಯ ಬಿಇಒಗಳಿಗೆ ಲಾಕ್ ಡೌನ್ ವಿಶೇಷ ಪರಿಹಾರದ ಹಣ ಪಡೆಯಲು ಪ್ರಸ್ತಾವನೆಯನ್ನು ನೀಡಬೇಕು. ಹೀಗೆ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ವಿಶೇಷ ಪರಿಹಾರದ ಹಣ ಜಮೆಯಾಗುತ್ತದೆ. ಈ ರೀತಿಯಾಗಿ ರಾಜ್ಯ ಸರ್ಕಾರದ ಕಡೆಯಿಂದ ಅನುದಾನ ಪಡೆದಂತಹ ಖಾಸಗಿ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರು 5000 ರೂ ಪರಿಹಾರದ ಹಣವನ್ನು ಪಡೆದುಕೊಳ್ಳಬಹುದಾಗಿದೆ.