ಕಾರು ಪ್ರಿಯರಿಗಾಗಿ ಈ ವಿಡಿಯೋ: 5 ಲಕ್ಷದಿಂದ 8 ಲಕ್ಷದೊಳಗಿನ ಬೆಸ್ಟ್ ಕಾರುಗಳು

0 3

ಕಾರು ಇಂದಿನ ಜೀವನದಲ್ಲಿ ಪ್ರತಿಯೊಬ್ಬರ ಬಳಕೆಯಲ್ಲಿರುವ ವಾಹನವಾಗಿದೆ. ಈಗಿನ ಜನಜೀವನದಲ್ಲಿ ಕಾರು ಕೂಡ ಒಂದು ಅಮೂಲ್ಯ ವಸ್ತುವಾಗಿದೆ. ಅನೇಕ ಕಂಪನಿಗಳು ವಿವಿಧ ತರಹದ ಕಾರುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಅನೇಕ ಕಂಪನಿಗಳ ವಿವಿಧ ಬಗೆಯ ಕಾರುಗಳ ತಯಾರಿಕೆಯಿಂದ ಜನರಿಗೆ ಯಾವ ಕಾರನ್ನು ಖರೀದಿಸಬೇಕೆಂಬ ಸಮಸ್ಯೆ ಖಂಡಿತವಾಗಿಯೂ ಆಗುತ್ತದೆ. ಕಾರುಗಳು ಅದರ ಲಕ್ಷಣಗಳ ಮೇಲೆ ಆ ವಾಹನದ ಮೊತ್ತವು ನಿರ್ಧಾರವಾಗಿರುತ್ತದೆ. ಹೀಗಾಗಿ ಕಾರನ್ನು ಖರೀದಿಸುವಾಗ ಸಹಜವಾಗಿಯೇ ಸಮಸ್ಯೆಯಾಗುತ್ತದೆ. ಆದ್ದರಿಂದ ನಾವಿಲ್ಲಿ 5 ಲಕ್ಷದಿಂದ 8 ಲಕ್ಷದೊಳಗಿನ ಅತ್ಯುತ್ತಮ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

ಓಲ್ಸ್ ಓಗನ್  ನ ಪೋಲೋ ಮತ್ತು ಫೋರ್ಡ್ ಫಿಗೋ ಈ ಎರಡು ಕಾರುಗಳ ಬಿಲ್ಡ್ ಕ್ವಾಲಿಟಿ ತುಂಬಾ ಚೆನ್ನಾಗಿದೆ ಹಾಗೂ ಪವರ್ ಅನ್ನು ಅತೀಹೆಚ್ಚು ಹೊಂದಿದೆ. ಅತ್ಯುತ್ತಮ ಇಂಟೀರಿಯರ್ಸ್ ಗಳನ್ನು ಹೊಂದಿದೆ. ಈ ಕಾರುಗಳ ಬೇಸಿಕ್ ಮೊತ್ತ 8 ಲಕ್ಷ ದಿಂದ ಆರಂಭವಾಗುತ್ತದೆ. ರೆನಾಲ್ಟ್ ಟ್ರೈಬರ್ ಕಾರು ಕೂಡ ತುಂಬಾ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುವ ಕಾರಾಗಿದೆ. ಈ ಕಾರು ಬೆಸ್ಟ್ ಕಾಂಪ್ಯಾಕ್ಟ್ ಹೊಂದಿರುವ ಸೆವೆನ್ ಸೀಟರ್ ಆಗಿದೆ. ಈ ಕಾರಲ್ಲಿ ತುಂಬಾ ಚೆನ್ನಾಗಿ ಸ್ಪೇಸ್ ಮ್ಯಾನೇಜ್ಮೆಂಟ್ ಅನ್ನು ಮಾಡಿದ್ದಾರೆ. ಇದರ ಎಸಿ ಸಿಸ್ಟಮ್ ತುಂಬಾ ಚೆನ್ನಾಗಿ ಇದೆ. ಗ್ರೌಂಡ್ ಕ್ಲಿಯರೆನ್ಸ್ ತುಂಬಾ ಚೆನ್ನಾಗಿ ಹೊಂದಿದೆ. ಈ ಕಾರಿನ ಬೆಲೆ 6 ಲಕ್ಷದಿಂದ ಆರಂಭವಾಗಿ 9.25 ಲಕ್ಷದವರೆಗೂ ಇದೆ.

ಮತ್ತೊಂದು ಅತ್ಯುತ್ತಮ ಕಾರು ಹುಂಡೇ ಗ್ರಾಂಡ್
ಐ ಟೆನ್ ನುಯೋಸ್. ಈ ಕಾರಿನಲ್ಲಿ ಅತ್ಯುತ್ತಮ ಫೀಚರ್ಸ್, ಕಂಪರ್ಟ್ ನೆಸ್, ಅತ್ಯುತ್ತಮ ಕ್ಯಾಬಿನ್ ಮತ್ತು ಸ್ಪೇಸ್ ಅನ್ನು ಒದಗಿಸಿದ್ದಾರೆ. ಇದರಲ್ಲಿ ಸೇಫ್ಟಿ ನೋಡುವುದಾದರೆ ಎರಡು ಏರ್ ಬ್ಯಾಗ್ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ಇದೆ. ಉತ್ತಮ ಮೈಲೇಜ್ ಅನ್ನು ಕೂಡ ಈ ಗಾಡಿ ಹೊಂದಿದೆ. ಈ ಗಾಡಿಯ ಬೆಲೆ 6.40 ಲಕ್ಷದಿಂದ ಆರಂಭವಾಗಿ 10.23 ಲಕ್ಷದ ಹೊರಗೆ ಇದೆ. ಟಾಟಾ ಟಿಯಾಗೋ ಗಾಡಿಯು ಅತ್ಯುತ್ತಮವಾದ ಕಾರಾಗಿದೆ. ಟಾಟಾ ಕಂಪನಿಯ ಗಾಡಿಯು ಇತ್ತೀಚಿಗೆ ಅತ್ಯುತ್ತಮ ಡಿಸೈನ್ ಮತ್ತು ಸೇಫ್ಟಿಯಾಗಿ ಗಾಡಿಯನ್ನು ತಯಾರಿಸುತ್ತಿದ್ದಾರೆ. ಜೊತೆಗೆ ಕಡಿಮೆ ದರದಲ್ಲಿ ಗಾಡಿಯನ್ನು ವ್ಯಾಪಾರ ಮಾಡುತ್ತಿದ್ದಾರೆ. ಈ ಕಾರಿನ ಸೇಫ್ಟಿ ರೇಟಿಂಗ್ ತುಂಬಾ ಚೆನ್ನಾಗಿದೆ. ಅತ್ಯುತ್ತಮ ಕಂಡೀಷನ್ ಹೊಂದಿದೆ. ಈ ಗಾಡಿಯ ಬೆಲೆ 6.8 ಲಕ್ಷದಿಂದ 8.49 ಲಕ್ಷದವರೆಗೆ ಬೀಳುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಗಾಡಿಯು ಅತ್ಯುತ್ತಮ ಸ್ಟೈಲನ್ನು ಹೊಂದಿದೆ. ಈ ಕಾರು ಅತಿ ಹೆಚ್ಚು ವ್ಯಾಪಾರವಾಗುವ ಎಚ್ ಪ್ಯಾಕ್ ಎಂದು ಕರೆಯುತ್ತಾರೆ. ಸ್ವಿಫ್ಟ್ ಗಾಡಿಯು ಪವರ್ಫುಲ್ ಇಂಜಿನ್ ಅನ್ನು ಹೊಂದಿದೆ. 23 ಕಿಲೋಮೀಟರ್ ಮೈಲೇಜ್ ಅನ್ನು ಈ ಗಾಡಿಯು ನೀಡುತ್ತದೆ. ಈ ಗಾಡಿಯ ರೀಸೇಲ್ ವೆಲ್ಯೂ ತುಂಬಾ ಚೆನ್ನಾಗಿದೆ. ಶಿಫ್ಟ್ ಕಾರ್ ರೇಟ್ 7 ಲಕ್ಷದಿಂದ ಆರಂಭವಾಗಿ ಒಂಬತ್ತು ಲಕ್ಷದವರೆಗೆ ಇದೆ. ಮತ್ತೊಂದು ಅತ್ಯುತ್ತಮವಾದ ಗಾಡಿ ಎಂದರೆ ಟಾಟಾ ಅಲ್ಟ್ರೋಜ್. ಈ ಗಾಡಿಯು ಅತ್ಯುತ್ತಮ ಕಂಡೀಶನ್ ಹಾಗೂ ಫೀಚರ್ ಗಳನ್ನು ಒಳಗೊಂಡಿದೆ. ಈ ಗಾಡಿಯು ಅತಿ ಹೆಚ್ಚು ಸೇಫ್ಟಿ ರೇಟಿಂಗ್ ಅನ್ನು ಹೊಂದಿದೆ. ಈ ಗಾಡಿಯ ಇಂಟೀರಿಯರ್ ಮತ್ತು ಎಕ್ಸ್ಟೆರಿಯರ್ ತುಂಬಾ ಚೆನ್ನಾಗಿ ಇದೆ. ಈ ಗಾಡಿಯ ಬೆಲೆ 7.11 ಲಕ್ಷದಿಂದ ಆರಂಭವಾಗಿ 11.62 ಲಕ್ಷದವರೆಗೆ ಇದೆ. ಈ 5 ಟಾಪ್ ಕಾರುಗಳು ನಿಗದಿತ ಬೆಲೆಯಲ್ಲಿ ಉತ್ತಮ ಫೀಚರ್ ಗಳನ್ನು ಹೊಂದಿದೆ.

Leave A Reply

Your email address will not be published.