ದೇವರು ಒಳ್ಳೆಯವರಿಗೆ ಯಾಕೆ ಶಿಕ್ಷೆ ಕೊಡ್ತಾನೆ ಶ್ರೀ ಕೃಷ್ಣ ಭಗವಂತ ಹೇಳೋದೇನು ಗೊತ್ತೇ?

0 7

ಎಲ್ಲವೂ ದೈವ ಇಚ್ಛೆ ನಮ್ಮ ಹಣೆಬರಹವನ್ನು ಬರೆದಿರುವ ಆ ಬ್ರಹ್ಮನ ಇಚ್ಛೆ. ನಾವು ಏನೇ ಕೆಲಸ ಮಾಡಿದರೂ ಸಹ ಅದನ್ನ ಆ ಭಗವಂತನೇ ಸ್ವತಃ ಮಾಡಿಸಿರುತ್ತಾನೆ. ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕೆಲಸ ಎಲ್ಲವನೂ ಆ ದೇವರೇ ಮಾಡಿಸಿರುವಾಗ ನಮಗೆ ಯಾಕೆ ಶಿಕ್ಷೆ ಕೊಡುತ್ತಾನೆ? ಎಂಬ ಈ ಪ್ರಶ್ನೆ ಎಲ್ಲರಿಗೂ ಒಂದಲ್ಲಾ ಇಂದು ರೀತಿಯಲ್ಲಿ ಕಾಡಿರತ್ತೆ. ಭಗವಂತನ ಇಚ್ಛೆ ಇಲ್ಲದೆಯೇ ಒಂದು ಹುಲ್ಲು ಕಡ್ಡಿಯೂ ಅಲುಗಾಡಿವುದಿಲ್ಲ ಅಂತ ಹೇಳ್ತಾರೆ ಹಾಗಿದ್ದ ಮೇಲೆ ನಾವು ತಪ್ಪು ಮಾಡಿದಾಗ ಭಗವಂತ ಯಾಕೆ ನಮ್ಮನ್ನು ಶಿಕ್ಷಿಸುತ್ತಾನೆ? ನಾನು ಮಧ್ಯಪಾನ ಮಾಡಿದ್ದೇನೆ ಸೇವಿಸಿದ್ದು ನಾನೇ ಆದರೂ ಸೇವನೆ ಮಾಡಿಸಿದ್ದು ಭಗವಂತ ಅಲ್ಲವೇ. ಶಿಕ್ಷೆ ಅವನಿಗೂ ಸಿಗಬೇಕು ಅಲ್ಲವೇ.. ಅಂತ ಸಾಮಾನ್ಯವಾಗಿ ಎಲ್ಲರಿಗೂ ಈ ಪ್ರಶ್ನೆ ಬಂದಿರತ್ತೆ. ಇದಕ್ಕೆಲ್ಲಾ ಉತ್ತರ, ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ ಇದೆ.

ಈ ಪ್ರಶ್ನೆಗೆ ಉತ್ತರ ಈ ಕಥೆಯ ಮೂಲಕ ತಿಳಿಯುತ್ತೆ. ಒಂದು ಕಾಲದಲ್ಲಿ ಒಬ್ಬ ಪ್ರಕೃತಿ ಪ್ರೇಮಿ ಇದ್ದ ಅವನು ತೋಟದಲ್ಲಿಯೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ. ಮನೆಯ ಮುಂದೆ ಸುಂದರ ಹೂವು ಬಿಡುವ ಗಿಡಗಳು , ದಣಿದಾಗ ದಣಿವಾರಿಸಿಕೊಳ್ಳಲು ಒಳ್ಳೆಯ ಹಣ್ಣಿನ ಮರಗಳು ಮತ್ತು ಮನಸ್ಸಿಗೆ ಮುದ ನೀಡುವ ಸುಂದರ ಬಳ್ಳಿಗಳನ್ನೂ ಸಹ ಬೆಳೆಸಿದ್ದ. ಆ ದಾರಿಯಿಂದ ಹೋಗುವ ಯಾರೇ ಆದರೂ ಸಹ ಆ ತೋಟವನ್ನು ನೋಡಿ ಆಕರ್ಷಿತರಾಗುತ್ತಿದ್ದರು ಒಮ್ಮೆ ವಿಸ್ಮಯ ಗೊಳ್ಳುತ್ತಿದ್ದರು. ಆ ತೋಟದ ಮಾಲೀಕ ತುಂಬಾ ಒಳ್ಳೆಯವನು ಆಗಿದ್ದ ತಾನು ಕಷ್ಟ ಪಟ್ಟು, ಇಷ್ಟ ಪಟ್ಟು ಬೆಳೆಸಿದ ತನ್ನ ಹೂವಿನ ಗಿಡ, ಬಳ್ಳಿಗಳನ್ನ ನೋಡಲು ಬಂದವರಿಗೆ ಖುಷಿಯಿಂದ ತೋರಿಸುತ್ತಿದ್ದ. ತಾನೇ ತನ್ನ ಕೈಯ್ಯಾರೆ ಈ ತೋಟವನ್ನು ನಿರ್ಮಿಸಿರಿವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ.

ಹೀಗೆಯೇ ಒಂದು ದಿನ ಆತ ಗಾಢ ನಿದ್ರೆಯಲ್ಲಿ ಇದ್ದಾಗ ಅವನ ತೋಟಕ್ಕೆ ಒಂದು ಹಸು ಹೊಕ್ಕಿತ್ತು. ತುಂಬಾ ಹಸಿದಿದ್ದ ಹಸು ಆ ತೋಟದಲ್ಲಿ ಬೆಳೆದಂತಹ ಗಿಡ ಬಳ್ಳಿಗಳನ್ನು ತಿನ್ನತೊಡಗಿತು. ನಿದ್ದೆಯಿಂದ ಎದ್ದ ಮಾಲೀಕನಿಗೆ ಆಘಾತ ಕಾದಿತ್ತು. ತುಂಬಾ ಸುಂದರವಾಗಿ ಬೆಳೆದಿದ್ದ ಎಲ್ಲಾ ಗಿಡಗಳನ್ನೂ ಹಸು ತಿಂದು ಹಾಕಿತ್ತು. ಇದನ್ನ ಕಂಡ ಆ ಮಾಲೀಕನಿಗೆ ಬಹಳ ಕೋಪ ಬಂದಿತ್ತು. ಸಿಟ್ಟಿನಿಂದ ಹಸುವಿಗೆ ಹೊಡೆಯಲು ಆರಂಭಿಸುತ್ತಾನೆ. ನೋವಿನಿಂದ ಆ ಹಸು ನರಳಿ ಕೆಳಗೆ ಬೀಳತ್ತೆ. ಇಷ್ಟಾದರೂ ಸಹ ಮಾಲೀಕನ ಕೋಪ ತಣ್ಣಗಾಗಲಿಲ್ಲ. ಮತ್ತೂ ಕೆಳಗೆ ಬಿದ್ದ ಹಸುವಿಗೆ ಹೊಡೆಯುತ್ತಲೇ ಇರುತ್ತಾನೆ. ಹೀಗೇ ಹಸು ಹೊಡೆತ ತಿಂದು ನೋವಿನಿಂದ ನರಳುತ್ತಲೇ ಪ್ರಾಣ ಬಿಟ್ಟಿತು.

ಹಸು ಪ್ರಾಣ ಕಳೆದುಕೊಂಡದ್ದನ್ನು ನೋಡಿ ಆ ಮಾಲೀಕನಿಗೆ ಸ್ವಲ್ಪ ಸಿಟ್ಟು ಕಡಿಮೆ ಆಗಿ ಕೊನೆಗೆ ಏನು ಮಾಡಬೇಕು ಅನ್ನೋದೇ ತಿಳಿಯದಾಯಿತು . ತನ್ನಿಂದಾ ಒಂದು ಮೂಖ ಪ್ರಾಣಿಯ ಹತ್ಯೆ ಆಯಿತು ಅಂತ ದುಃಖ ಪಡತೊಡಗಿದ. ಕೊನೆಗೆ ತನ್ನ ತೋಟದಲ್ಲೇ ಒಂದು ಮೂಲೆಯಲ್ಲಿ ಆ ಹಸುವನ್ನು ಎಳೆದುಕೊಂಡು ಹೋಗಿ , ಎಲೆಗಳಿಂದ ಮುಚ್ಚಿದ. ಆದರೂ ಸಹ ಅವನಿಗೆ ಮನಸ್ಸಿಗೆ ಶಾಂತಿ ಸಿಗಲಿಲ್ಲ. ಕೊನೆಗೆ ಒಂದು ಕ್ಷಣ ಯೋಚಿಸಿ, ದೇವರೇ ನಿನ್ನ ಇಚ್ಛೆ ಇಲ್ಲದೆ ಏನೂ ನಡೆಯುವುದಿಲ್ಲ. ಈ ಪಾಪವನ್ನು ನನ್ನಿಂದ ಮಾಡಿಸಿದ್ದು ನೀನೇ.. ಇದರಲ್ಲಿ ನನ್ನ ತಪ್ಪು ಏನೂ ಇರುವುದಿಲ್ಲ. ಸ್ವಲ್ಪ ದಿನದ ನಂತರ ಆ ಮಾಲೀಕನ ನೀಚ ಕೃತ್ಯ ನೋಡಿ ದೇವರು ಅವನಿಗೆ ಬುದ್ಧಿ ಕಲಿಸಬೇಕು ಅಂತ ಅಂದುಕೊಂಡು ಒಬ್ಬ ವೃದ್ಧನ ವೇಷದಲ್ಲಿ ಆ ವ್ಯಕ್ತಿಯ ತೋಟಕ್ಕೆ ಬರುತ್ತಾನೆ.

ಯಾರೋ ತನ್ನ ತೋಟವನ್ನು ವೀಕ್ಷಿಸಲು ಬಂದರು ಎಂದು ಆ ವ್ಯಕ್ತಿ ಖುಷಿಯಿಂದ ತೋರಿಸಿದ. ತೋಟವನ್ನು ವೀಕ್ಷಿಸಿದ ಆ ವೃದ್ಧ ವ್ಯಕ್ತಿ ತೋಟ ತುಂಬಾ ಸುಂದರವಾಗಿದೆ ಅಂತ ಹೇಳ್ತಾರೆ. ಮಾಲೀಕ ಗರ್ವದಿಂದ ಇದೆಲ್ಲ ನಾನು ಕಷ್ಟ ಪಟ್ಟು ನನ್ನ ಕೈಯ್ಯಾರೆ ಮಾಡಿದ್ದೇನೆ ಅಂತ ಹೇಳುತ್ತಾ ಹಾಗೆ ಮುಂದೆ ಹೋಗುತ್ತಾನೆ. ಅಲ್ಲಿಯೇ ಸ್ವಲ್ಪ ಮುಂದೇ ರಾಶಿ ರಾಶಿ ಎಲೆಗಳನ್ನು ಹಾಕಿರುವುದು ನೋಡಿ ವೃದ್ಧನ ವೇಷದಲ್ಲಿ ಇದ್ದ ದೇವರು ಆ ವ್ಯಕ್ತಿಗೆ ಕೇಳುತ್ತಾರೆ ಇಲ್ಲಿ ಈ ಎಲೆಗಳ ರಾಶಿಯ ಕೆಳಗೆ ಏನೋ ಇದ್ದಹಾಗೇ ಕಾಣತ್ತೆ ಎಂದು ತುಂಬಾ ಕೊಳೆತ ವಾಸನೆ ಬರುತ್ತಿದೆ ಎನ್ನುತ್ತಾ ಆ ಎಲೆಗಳನ್ನು ಸರಿಸುತ್ತಾರೆ. ನೋಡಿದರೆ ಹಸುವಿನ ದೇಹ ಕೊಳೆತು ನಾರಿತ್ತಿತ್ತು. ಒಂದು ಕ್ಷಣ ಏನಾಯಿತು ಎಂದು ಗಾಬರಿಯಿಂದ ನೋಡಿದ ತೋಟದ ಮಾಲೀಕ ಹೇಳುತ್ತಾನೆ ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಎಲ್ಲಾ ದೇವರ ಇಚ್ಛೆ ದೇವರೇ ಆ ಹಸುವನ್ನು ಕಳುಹಿಸಿದ್ದು, ನನ್ನ ಕೈಯಿಂದ ಹಸುವಿನ ಹತ್ಯೆ ಮಾಡಿಸಿದ್ದು ಅಂತ ಹೇಳ್ತಾನೆ. ಆಗ ದೇವರು ಆ ತೋಟವನ್ನು ಮಾಡಿದ್ದು ನಾನೇ ಎನ್ನುವ ನೀನು ಆಗ ಹೇಳಬೇಕಿತ್ತು ಈ ಸುಂದರ ತೋಟವನ್ನು ನಿರ್ಮಿಸಿದ್ದು ಕೂಡಾ ದೇವರು ಎಂದೂ. ಯಾಕಂದರೆ ಈ ತೋಟವನ್ನು ಕೂಡಾ ನಿನ್ನಿಂದ ಮಾಡಿಸಿದ್ದು ಆ ದೇವರೇ ಅಲ್ಲವಾ ನಿನ್ನ ಜೊತೆ ಒಳ್ಳೆಯದಾಗಿದ್ದಾಗ ಮಾತ್ರ ನಿನ್ನಿಂದಲೇ ಆಗಿದ್ದು ಅಂದು ಹೇಳುವ ನೀನು ನಿನ್ನಿಂದ ಕೆಟ್ಟದ್ದು ಏನಾದರೂ ಆದರೆ ಮಾತ್ರ ಆ ದೇವರನ್ನು ದೂಷಿಸುತ್ತೀಯಾ. ಪುಣ್ಯವಾಗಲಿ ಪಾಪವಾಗಲಿ ನೀನೇ ಅನುಭವಿಸುತ್ತೀಯ. ಈ ಜನ್ಮದಲ್ಲಿ ಆಗಲಿ ಅಥವಾ ಮುಂದಿನ ಜನ್ಮದಲ್ಲಿ ಆಗಲಿ ನೀನು ಮಾಡಿದ ಪಾಪ ಪುಣ್ಯಗಳು ನಿನ್ನ ಹೆಸರಿನಲ್ಲಿಯೇ ಇರುತ್ತವೆ. ಅದಕ್ಕಾಗಿ ದೇವರನ್ನು ದೂಷಿಸುವುದು ತಪ್ಪು. ಗೊತ್ತಿದ್ದೋ, ಗೊತ್ತಿಲ್ಲದೆಯೂ ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆ ಯಾಚಿಸು ಎಂದು ವೃದ್ಧನ ವೇಶದಲ್ಲಿದ್ದ ದೇವರು ಹೇಳುತ್ತಾರೆ. ಆಗ ತನ್ನ ತಪ್ಪಿನ ಅರಿವಾಗಿ ಮಾಲೀಕ ದೇವರ ಕಾಲಿಗೆ ಎರಗಿದನು.

ಭಗವದ್ಗೀತೆಯಲ್ಲಿ 15ನೆ ಅಧ್ಯಾಯ, 5 ನೆ ಶ್ಲೋಕದಲ್ಲಿ ಶ್ರೀ ಕೃಷ್ಣನು ಹೇಳುತ್ತಾನೆ. ಸರ್ವ ವ್ಯಾಪಿ ಭಗವಂತನು ಯಾವ ವ್ಯಕ್ತಿಯ ಪಾಪ ಪುಣ್ಯ ಯಾವುದನ್ನೂ ಗ್ರಹಿಸುವುದಿಲ್ಲ. ಯಾವಾಗ ಯಾವ ವ್ಯಕ್ತಿಗೆ ಜ್ಞಾನದ ಮೇಲೆ ಅಜ್ಞಾನದ ಪೊರೆ ಬೀಳುತ್ತದೋ ವ್ಯಕ್ತಿಯ ಮನಸ್ಸು ಅಜ್ಞಾನವನ್ನೇ ನಂಬುತ್ತದೆ ಮತ್ತು ಅಜ್ಞಾನವನ್ನೇ ಮೋಹಿಸುತ್ತದೆ. ದೇವರ ಇಚ್ಛೆ ಇಲ್ಲದೆಯೇ ಒಂದು ಎಲೆಯೂ ಕೂಡಾ ಅಲುಗಾಡುವುದಿಲ್ಲ ಅಂತ ಹೇಳುತ್ತಾರೆ. ಹಾಗೆ ಎಲ್ಲಾ ಕೆಲಸಗಳನ್ನೂ ಮನುಷ್ಯನೇ ಮಾಡುತ್ತಾನೆ. ದೇವರು ನಮ್ಮ ಕೆಲಸದಲ್ಲಿ ಹಸ್ತ ಕ್ಷೇಪ ಮಾಡುವುದಿಲ್ಲ. ದೇವರು ನಗೆ ಬುದ್ಧಿ ಶಕ್ತಿಯನ್ನು ನೀಡಿದ್ದಾನೆ. ನಾವು ನಮ್ಮ ಯೋಚನೆ ಮತ್ತು ಇಚ್ಚಾ ಶಕ್ತಿಯಿಂದ ಕೆಲಸ ಮಾಡುತ್ತೇವೆ. ಆದರೆ ಕೆಲಸ ಮಾಡುವ ಮೊದಲು ಕ್ಷಣಕಾಲ ಯೋಚನೆ ಮಾಡಬೇಕು. ಆ ಕೆಲಸ ಮಾಡುವುದರಿಂದ ನಮಗೆ ಒಳ್ಳೆಯದು ಆಗುತ್ತದೆಯೋ ಅಥವಾ ಕೆಟ್ಟದ್ದು ಆಗುತ್ತದೆಯೋ ಅನ್ನುವುದನ್ನ ಯೋಚನೆ ಮಾಡಿ ಮಾಡಬೇಕು.

Leave A Reply

Your email address will not be published.