ನೆನಪಿನ ಶಕ್ತಿ ಅನ್ನೋದು ಪ್ರಕೃತಿ ಮನುಷ್ಯನಿಗೆ ಕೊಟ್ಟ ಅತಿ ದೊಡ್ಡ ವರ. ಆದರೆ ಕೆಲವರು ಯಾವಾಗಲೂ ಬರೀ ಮರೆವಿನ ಬಗ್ಗೆಯೇ ಮಾತನಾಡುತ್ತಾ ಇರುತ್ತಾರೆ. ಅಯ್ಯೋ ಏನೋ ಹೇಳಬೇಕು ಅನ್ಕೊಂಡೆ ಮರೆತೇ ಹೋಯ್ತು ಆ ಕೆಲಸ ಮಾಡಬೇಕು ಅನ್ಕೊಂಡಿದ್ದೆ,ಇಂದು ವಸ್ತುನ ಎಲ್ಲಿ ಇಟ್ಟಿದ್ದೆ ಅನ್ನೋದೇ ನೆನಪಾಗ್ತಾ ಇಲ್ಲ ಮರೆತೇ ಹೋಯ್ತು. ಅಂತ ಹೀಗೆ ಸಾಕಷ್ಟು ಜನ ಹೇಳೋದನ್ನ ಕೆಳಿರ್ತೀವಿ. ಕೆಲವು ಸಾರಿ ಇಂಥ ಮರೆವು ನಮ್ಮನ್ನೂ ಕಾಡಿರತ್ತೆ. ಯಾಕ್ ಹೀಗೆ ಆಗತ್ತೆ? ನಾವು ಮಾಡುವ ಕೆಲಸದ ಬಗ್ಗೆ ನಮಗೆ ಏಕಾಗ್ರತೆ ಯಾಕೆ ಇರಲ್ಲ ಈ ಎಲ್ಲಾ ಪ್ರಶ್ನೆ ಪ್ರತಿ ಒಬ್ಬರನ್ನು ಸಹ ಕಾಡಿರತ್ತೇ. ಸಕ್ರಿಯವಾಗಿ ಕೆಲಸ ಮಾಡಿದ್ರೆ ಇಂತಹ ಸಮಸ್ಯೆಗಳು ಬರಲ್ಲ ಇನ್ನೊಂದು ಬಹಳಷ್ಟು ಜನರಿಗೆ ತಿಳಿದಿದೆ. ಆದರೆ ಮೆದುಳಿನ ಚಟುವಟಿಕೆಯನ್ನು ಸಕ್ರಿಯ ಗೊಳಿಸಲು ಏನು ಮಾಡಬೇಕು? ಅದಕ್ಕಾಗಿಯೇ ಒಂದು ಸುಲಭವಾದ ಮರ್ಮ ಚಿಕಿತ್ಸೆ ಇದೆ. ಅದು ಏನು ಅನ್ನೋದನ್ನ ಮೈಸೂರಿನ ಆಯುರ್ ಮಾಟಮ್ ಚಿಕಿತ್ಸಾ ಕೇಂದ್ರದ ಮುಖ್ಯಸ್ಥರು ಡಾಕ್ಟರ್ ಮನು ಮೆನನ್ ಅವರು ಹೇಳಿರುವುದನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಈ ಮರ್ಮ ಚಿಕಿತ್ಸೆ ಮಾಡುವುದರಿಂದ ನಮ್ಮ ಮೆದುಳಿನಲ್ಲಿ ಹಲವಾರು ಚಟುವಟಿಕೆಗಳು ಉಂಟಾಗುತ್ತವೆ. ಮನಸಿನ ಭಯ ಗಾಬರಿ ಇವುಗಳನ್ನು ಹೋಗಲಾಡಿಸುತ್ತದೆ. ನಾವು ಎಲ್ಲಾ ವಿಷಯಗಳಲ್ಲಿ ಚುರುಕಾಗಿ ಇರುತ್ತೇವೆ. ನಮ್ಮ ದೈಹಿಕ ಆರೋಗ್ಯವೂ ಸರಿಯಾಗಿ ಇರಬೇಕು ಅಂದ್ರೆ ನಮ್ಮ ಮೆದುಳಿನ ರಕ್ತ ಸಂಚಾರ ವ್ಯವಸ್ಥೆ ಸರಿಯಾಗಿ ಇರಬೇಕು. ಹಾಗಾಗಬೇಕು ಅಂದ್ರೆ ಈ ಸರಳ ಮರ್ಮ ಚಿಕಿತ್ಸೆಯನ್ನ ಅಭ್ಯಾಸ ಮಾಡಿಕೊಳ್ಳಿ.
ನಮ್ಮ ಕೈಯ್ಯ ಹೆಬ್ಬೆರಳು ಮತ್ತು ತೋರು ಬೆರಳು ಇವೆರಡರ ಸಹಾಯದಿಂದ ನಮ್ಮ ಮೂಗಿನ ಎರಡು ಹೊಳ್ಳೆಗಳ ಮಧ್ಯ ಹಿಡಿದುಕೊಂಡು ಕಣ್ಣು ಮುಚ್ಚಿಕೊಂಡು ಮೂಗಿನ ಹೊಳ್ಳೆಗಳ ಮಧ್ಯೆ ನಿಧಾನವಾಗಿ ೫ ವಾರು ಪ್ರೆಸ್ ಮಾಡಬೇಕು. ೫ ಬಾರಿ ಮಾಡಿದ ನಂತರ ಕೈ ಬಿಟ್ಟು ಹಾಗೆಯೇ ದೀರ್ಘವಾಗಿ ಉಸಿರಾಡಬೇಕು. ನಂತರ ಎರಡೂ ಕೈಗಳನ್ನು ಉಜ್ಜಿಕೊಂಡು ಅದರ ಶಾಖವನ್ನು ಕಣ್ಣಿಗೆ ತಾಗಿಸಿ ಕೈ ತೆಗೆದು ನಂತರ ನಿಧಾನಕ್ಕೆ ಕಣ್ಣು ಬಿಡಬೇಕು. ಇದರಿಂದ ಹೊಸ ಅನುಭವ ಆಗತ್ತೆ ದಿನ ಪೂರ್ತಿ ಚಟುವಟಿಕೆಯಿಂದ ಕುಡಿರಬಹುದು. ಇದನ್ನ ಪ್ರತಿ ನಿತ್ಯ ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದು.
ಇದರಿಂದ ನಮ್ಮ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಹೊಸ ಚೈತನ್ಯ ಪಡೆಯಲು ಸಹಾಯ ಮಾಡುತ್ತದೆ. ಮರೇವಿನಿಂದ ಮುಕ್ತಿ ಸಿಗತ್ತೆ. ಇದು ನಮ್ಮ ಮೆದುಳನ್ನು ಆಕ್ಟಿವೆಟ್ ಮಾಡಿಕೊಂಡು ಮರೆವಿನಿಂದ ಮುಕ್ತಿ ಪಡೆಯಲು ಸರಳ ವಿಧಾನ. ಆದರೂ ಅಧಿಕ ಮರೆವು, ಹೈಪರ್ ಟೆನ್ಷನ್ ಇದ್ದಾಗ ಅದಕ್ಕೆ ಬೇರೆಯದೇ ಆದ ಮರ್ಮ ಚಿಕಿತ್ಸೆಗಳು ಇರುತ್ತವೆ.