ಮಾವಿನ ಹಣ್ಣಿನ ಸೀಸನ್ ಈಗ ಶುರು ಆಗಿದೆ ಆಯಾ ಕಾಲಕ್ಕೆ ಆಯಾ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿ ಆಗತ್ತೆ ಅನ್ನೋದು ನಿಮಗೆ ಗೊತ್ತು. ಆದರೆ ಯಾವುದನನ್ನ ಹೇಗೆ ತಿನ್ನಬೇಕು ಅನ್ನೋದನ್ನ ಕೂಡ ನಮ್ಮ ಆಯುರ್ವೇದ ಗ್ರಂಥಗಳು ತುಂಬಾ ಅದ್ಭುತವಾಗಿ ತಿಳಿಸಿವೆ. ಇವತ್ತು ಈ ಲೇಖನದಲ್ಲಿ ಮಾವಿನ ಉಪಯೋಗ ಮತ್ತು ಅದನ್ನ ಹೇಗೆಲ್ಲಾ ಬಳಸಬಹುದು ಅನ್ನೋದನ್ನ ನೋಡೋಣ.

ಹಸಿದು ಹಲಸು, ಉಂಡು ಮಾವು” ಅಂತ ಕನ್ನಡದಲ್ಲಿ ಮಾತಿದೆ, ಹಲಸಿನ ಹಣ್ಣನ್ನು ಹಸಿವಾದಾಗಹೊಟ್ಟೆಗೆ ತಿನ್ನಬೇಕು. ಏಕೆಂದರೆ ಅದು ಜೀರ್ಣ ಆಗೋದು ನಿಧಾನ . ಹಾಗಾಗಿ ಹಸಿದಾಗ ತಿಂದರೆ ದೇಹಕ್ಕೆ ಸತ್ವ ಕೊಡುತ್ತದೆ. ಹಾಗೆ ಮಾವುಇದರಲ್ಲಿರುವ ಸಿಹಿ ಹಾಗೂ ಸ್ವಲ್ಪ ಪ್ರಮಾಣದ ಹುಳಿ ಸ್ವಲ್ಪ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಇರುವುದರಿಂದ ಅದನ್ನ ಊಟದ ನಂತರ ತಿನ್ನುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗತ್ತೆ. ಮಾವು ಸಿಹಿಯಾಗಿ ಇದ್ದರೆ ಅದರ ರುಚಿಯೂ ಹೆಚ್ಚು. ಹಾಗಂತ ಕೆಲವು ಬಾರಿ ಹುಳಿ ಹಣ್ಣುಗಳೂ ಸಹ ಸಿಗುತ್ತವೆ. ಮಾವು ಬಲವಂತವಾಗಿ ಹಣ್ಣು ಮಾಡಿದ ಅಥವಾ ಪಕ್ವ ಆಗಿಲ್ಲದ ಹಣ್ಣುಗಳೂ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಅದರಲ್ಲಿನ ಹುಳಿಯ ಗುಣ ನಮ್ಮ ದೇಹದಲ್ಲಿನ ಪಿತ್ತವನ್ನು ಕೆರಳಿಸುವ ಸಾಧ್ಯತೆ ಹೆಚ್ಚು ಇರತ್ತೆ.

ಸಾಮಾನ್ಯವಾಗಿ ಮಾವಿನ ಸೀಸನ್ ಶುರು ಆಗುವ ಕಾಲದಲ್ಲಿ ದೇಹದ ಪಿತ್ತ ಕೂಡ ಕೆರಳತ್ತೆ. ಈ ಕಾಲದಲ್ಲಿ ಮಾವಿನ ಹಣ್ಣು ತುಂಬಾ ಒಳ್ಳೆಯದು ಆದರೆ ಅದು ಸಂಪೂರ್ಣವಾಗಿ ಹಣ್ಣಾಗಿರಬೇಕು. ಇನ್ನೂ ಕೆಲವರಿಗೆ ಹುಳಿ ಮಾವಿನ ಕಾಯಿಗಳು ಅಂದರೆ ತುಂಬಾ ಇಷ್ಟ. ಆದರೆ, ವಾರ ಸಂಬಂಧಿ ಕಾಯಿಲೆಗಳು ಇದ್ದರೆ, ಸಂಧಿ, ಊತ, ಪಿತ್ತ, ಕಫದಿಂದ ಬಳಲುತ್ತಾ ಇದ್ದರೆ ಹುಳಿ ಮಾವು ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಮಾವಿನ ಹಣ್ಣನ್ನು ಮರದಲ್ಲಿ ಕೇಳುವುದಕ್ಕಿಂತ ಮಾಗಿದ ಸಮಯದಲ್ಲಿ ಕಿತ್ತು ತಿನ್ನುವುದು ಒಳ್ಳೆಯದು ಎಂದು ಆಯ್ತುರ್ವೆದ ಗ್ರಂಥಗಳು ಹೇಳುತ್ತವೆ.

ಮಾವಿನ ಹಣ್ಣಿಗೆ ಸಕ್ಕರೆ ಸೇರಿಸಿ ಅಥವಾ ರಸಾಯನ ಮಾಡಿ ತಿನ್ನುವುದಕ್ಕಿಂತ ಹಾಗೆ ಕಚ್ಚಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಅದರಿಂದ ಜೀರ್ಣಾಂಗಗಳ ಕೆಲಸ ಸರಿಯಾಗಿ ಪಚನ ಕ್ರಿಯೆ ಸರಾಗವಾಗಿ ನಡೆಯುತ್ತೆ. ಮಲಬದ್ಧತೆಯ ಸಮಸ್ಯೆ ಇದ್ದರೆ ಪ್ರತೀ ನಿತ್ಯ ರಾತ್ರಿ ಮಲಗುವ ಮುನ್ನ ಹಾಲಿಗೆ ಮಾವಿನ ರಸ ಸೇರಿಸಿ ಸೇವಿಸುತ್ತಾ ಬಂದರೆ ಮಲಬದ್ಧತೆ ನಿವಾರಣೆ ಮಾಡಿಕೊಳ್ಳಬಹುದು. ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಸಹ ಆಯುರ್ವೇದದಲ್ಲಿ ಮಾವಿನ ಹಣ್ಣಿನ ಚಿಕಿತ್ಸೆ ಇದೆ. ಬರೀ ಮಾವಿನ ಹಣ್ಣು ಮತ್ತು ಹಾಲು ಎರಡನ್ನೂ ಸೇರಿಸಿ ೪೧ ದಿನಗಳ ಕಾಲ ಸೇವಿಸಿದರೆ ದೇಹದ ತೂಕ ಹೆಚ್ಚಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಅದು ಈಗ ಬರುತ್ತಿರುವ ಕಾರ್ಬೈಡ್ ಹಾಕಿ ಬಲವಂತವಾಗಿ ಹಣ್ಣು ಮಾಡಿದ ಮಾವು ಆಗಿರಬಾರದು. ವೈದ್ಯರ ಮಾರ್ಗದರ್ಶನದಲ್ಲಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ದೇಹದ ಪುಷ್ಟಿ ಹೆಚ್ಚು ಆಗುವುದರ ಜೊತೆಗೆ ತೂಕವು ಹೆಚ್ಚು ಆಗುತ್ತೆ.

ಇವೆಲ್ಲ ಮಾವಿನ ಹಣ್ಣಿನ ಉಪಯೋಗ ಆದ್ರೆ, ಆಯುರ್ವೇದದಲ್ಲಿ. ಮಾವಿನ ಮರದ ತೊಗಟೆಯನ್ನು ಸಹ ಔಷಧವಾಗಿ ಬಸಲಾಗುತ್ತದೆ. ಮರದ ತೊಗಟೆಯ ಕಷಾಯವನ್ನು ಬಾಯಲ್ಲಿ ಮುಕ್ಕಳಿಸುವುದರಿಂದ ಒಸಡುಗಳ ಸಮಸ್ಯೆ ದೂರ ಆಗತ್ತೆ. ಬಾಯಿಯ ದುರ್ಗಂಧ ಹಾಗೂ ಹಲ್ಲು ನೋವಿಗೆ ಇದು ರಾಮಬಾಣ. ಮಾವಿನ ಹಸಿ ಎಳೆಯ ರಸವನ್ನು ೩/೪ ಚಮಾಸ ಸೇವಿಸಿದರೆ ಅತಿಸಾರ ವಾಸಿ ಆಗತ್ತೆ. ಮರದ ಚಕ್ಕೆಯನ್ನ ಜಜ್ಜಿ ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ತಯಾರಿಸಿದ ಕಷಾಯವನ್ನು ನಾಲ್ಕು ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರಕ್ತ ಮೂಲವ್ಯಾಧಿ ಗುಣವಾಗುವುದು. ಇದರ ಹಸಿ ಚಕ್ಕೆಯನ್ನಾ ಜಜ್ಜಿ ಅದರ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಉರಿ ಮುತ್ರ ಹಾಗೂ ಲೈಂಗಿಕ ರೋಗಗಳು ಗುಣ ಆಗುತ್ತವೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಇನ್ನೂ ಹಿಮ್ಮಡಿಗಳು ಒಡೆಯುತ್ತೆ ಅಂದರೆ ಅದಕ್ಕೆ ಯಾವುದೇ ಕ್ರೀಮ್ ಬಳಸದೆ ಮಾವಿನ ಮರದ ತೊಗಟೆ ಇಂದ ಸೋರುವ ಅಂಟನ್ನು ಹಚ್ಚುವುದರಿಂದ ಪಾದಗಳು ಹೊಳೆಯುತ್ತವೆ. ಇದರ ಎಲೆ ಹಾವು ಕಡ್ಡಿಗಳಿಂದ ಹಲ್ಲು ಉಜ್ಜುವ ಪದ್ಧತಿ ನಮ್ಮ ಗ್ರಾಮೀಣ ಭಾಗದಲ್ಲಿ ಇದೆ. ಇದು ಮಾವಿನ ಹಣ್ಣು ಹಾಗೂ ಮಾವಿನ ಮರದ ಉಪಯೋಗ. ಮಾವಿನ ಹಣ್ಣನ್ನು ತಿನ್ನಲು ಯಾವುದೇ ಸಂಕೋಚ ಬೇಡ. ಆದ್ರೆ ತಿನ್ನುವ ಮೊದಲು ಹಣ್ಣಿನ ಮೇಲೆ ಕಪ್ಪು ಚುಕ್ಕಿ ಇದ್ದರೆ ಅದು ಕಾರ್ಬೈಡ್ ಹಾಕಿ ಮಾಗಿಸಿದ ಹಣ್ಣು ಆಗಿರತ್ತೆ. ಅದು ಆರಿವ್ಯಕ್ಕೆ ಒಳ್ಳೆಯದಲ್ಲ. ಸಾಧ್ಯ ಆದ್ರೆ ಮಾರ್ಕೆಟ್ ನಿಂದ ಮಾವಿನ ಕಾಯಿ ತಂದು ಮನೆಯಲ್ಲಿಯೇ ಹಣ್ಣು ಮಾಡಿ ನಂತರ ತಿನ್ನಿ. ನಮ್ಮ ಆರೋಗ್ಯ ನಾಮ ಕೈಯಲ್ಲಿ

Leave a Reply

Your email address will not be published. Required fields are marked *