ಬಾಯಿ ಹುಣ್ಣು ಮಲಬದ್ಧತೆ ಸೇರಿದಂತೆ ಹಲವು ಸಮಸ್ಯೆಗಳ ನಿವಾರಕ ಈ ಸೊಪ್ಪು

0 5

ಜಗತ್ತಿನ ಅತ್ಯುತ್ತಮ ಆಹಾರ ಪದ್ಧತಿ ಯಾವುದು ಅಂತ ಹುಡುಕುತ್ತಾ ಹೋದರೆ ನಾಗೆ ಸಿಗುವುದು ಪುರಾತನ ಭಾರತೀಯ ಆಹಾರ ಪದ್ಧತಿ. ನಾವು ಬರೀ ಹೊಟ್ಟೆ ತುಂಬುವ ಸಲುವಾಗಿ ಮಾತ್ರ ತಿನ್ನುತ್ತಾ ಇರಲಿಲ್ಲ. ಹಾಗೆ ತಿನ್ನುತ್ತಾ ಇದ್ದರೆ ನಮ್ಮ ಪೂರ್ವಜರು ಕೂಡ ಪಿಜ್ಜಾ ಬರ್ಗರ್ ಗಳ ಪಾಲಾಗಿ ಹೋಗುತ್ತಿದ್ದರೇನೋ. ಆಹಾರವನ್ನು ಔಷಧದ ರೂಪದಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಖಾಯಿಲೆಗಳಿಂದ ನಮ್ಮನ್ನು ದೂರ ಇಡುವ ಪದಾರ್ಥಗಳನ್ನೇ ನಾವು ಆಹಾರವಾಗಿ ಮಾಡಿಕೊಂಡಾಗಿತ್ತು. ನಮ್ಮ ಆಹಾರದಲ್ಲಿ ವೈವಿದ್ಯತೆ ಇತ್ತು. ನಮ್ಮ ಪೂರ್ವಜರು ಆರೋಗ್ಯವಾಗಿ ಬಾಳಿ ಬದುಕುತ್ತ ಇದ್ದರು. ಹಾಗಾಗಿ ನಮ್ಮ ಪೂರ್ವಜರು ಸಮೃದ್ಧವಾಗಿ ತಿನ್ನುತ್ತಿದ್ದ ಒಂದು ಸೊಪ್ಪಿನ ಬಗ್ಗೆ ನಾವಿಲ್ಲಿ ಈ ಲೇಖನದ ಮೂಲಕ ವಿವರವಾಗಿ ತಿಳಿಸಿಕೊಡುತ್ತೇವೆ.

ಬಸಳೆ ಸೊಪ್ಪು ಯಾರಿಗೂ ಹೊಸದೇನೂ ಅಲ್ಲ. ಅತಿ ಹೆಚ್ಚು “ವಿಟಮಿನ್ ಏ, ಸಿ ಹಾಗೂ ಕಬ್ಬಿಣದ ಅಂಶ” ಹೊಂದಿರುವ ಈ ಸೊಪ್ಪು ದೇಹದ ಉಷ್ಣ ಪ್ರಕೃತಿಯನ್ನು ಕಡಿಮೆ ಮಾಡುವುದು ಅಲ್ಲದೆ ಸಾಕಷ್ಟು ಪೌಷ್ಟಿಕ ಅಂಶವನ್ನು ಸಹ ಒದಗಿಸುತ್ತದೆ. ಏಷ್ಯಾ ಖಂಡದ ಉಷ್ಣ ವಲಯ ಹಾಗೂ ಆಫ್ರಿಕಾ ದಲ್ಲಿ ಹೆಚ್ಚು ಕಂಡುಬರುವ ಈ ಬಸಳೆ ಸೊಪ್ಪು ಇದರ ಮೂಲ ಭಾರತೀಯ ಉಪಖಂಡ ಆಗ್ನೇಯ ಏಷಿಯಾ ಮತ್ತು ನ್ಯುಗಿನಿ ಅಂತ ಹೇಳ್ತಾರೆ. ಇದರ “ವೈಜ್ಞಾನಿಕ ಹೆಸರು ಬ್ಯಾಸಲ ರುರ್ರ”. ಭಾರತದಾದ್ಯಂತ ಇದನ್ನ ತರಕಾರಿ ಸೊಪ್ಪು ಆಗಿ ಬಳಸಲಾಗುತ್ತದೆ.

ಇದರಲ್ಲಿ ಎರಡು ಬಗೆಗಳು ಇದ್ದು ಒಂದರ ಕಾಂಡ ಮತ್ತು ಎಲೆ ಕೆಂಪು ಬಣ್ಣ ವನ್ನ ಹೊಂದಿದ್ದರೆ ಮತ್ತೊಂದು ಬಗೆಯ ಸಸ್ಯ ಹಸಿರು ಬಣ್ಣವನ್ನು ಹೊಂದಿರುತ್ತದೆ. ಮೊದಲನೆಯದನ್ನು ಬ್ಯಾಕ್ಯಾಡಿಫೋಲಿಯ ಎಂದು ಎರಡನೆಯದನ್ನು ಬ್ಯಾ ಅಲ್ಬಾ ಎಂದು ಕರೆಯಲಾಗುತ್ತದೆ. ಇವನ್ನೂ ರುಬ್ರಾ ಪ್ರಭೇದದ ಎರಡು ವಿಧಗಳು ಎನ್ನುತ್ತಾರೆ. ಬಸಳೆ ಸೊಪ್ಪಿನ ಗಿಡ ಮೃದುವಾದ ಎಲೆಗಳು ಹಾಗೂ ರಸವತ್ತಾದ ಕಾಂಡವನ್ನು ಹೊಂದಿರುತ್ತದೆ ಮತ್ತು ಅಂಡಾಕಾರದ ಎಲೆಯನ್ನು ಹೊಂದಿರುತ್ತದೆ. ಪ್ರತೀ ೧೦೦ ಗ್ರಾಂ ಬಸಳೆ ಸೊಪ್ಪಿನಲ್ಲಿ ಶೇ ೧.೨ ರಷ್ಟು ಪ್ರೊಟೀನ್, ಶೇ ೧. ೧೫ ಕ್ಯಾಲ್ಸಿಯಂ ಹಾಗೂ ೧.೦೪ ಮಿ ಗ್ರಾಂ ಕಬ್ಬಿನ ಅಂಶ ೩೨೫೦ ಐ ವಿಟಮಿನ್ ಏ ಇರುತ್ತದೆ.

ಇದು ಎಲೆಗಳನ್ನು ಕುಟ್ಟಿ ಒಣಗಿಸಿಯು ಕೂಡ ಬಳಸುತ್ತಾರೆ. ಬಸಳೆ ಸೊಪ್ಪು ದೇಹದ ಉಷ್ಣ ಅಂಶವನ್ನು ಕಡಿಮೆ ಮಾಡುತ್ತದೆ. ಬಾಯಲಿ ಹುಣ್ಣು ಆದಾಗ ಬಸಳೆ ಸೊಪ್ಪು ಬಳಸಿದ್ರೆ ವಾಸಿ ಆಗತ್ತೆ. ಬಸಳೆ ಸೊಪ್ಪಿನ ಎಲೆ ಹಾಗೂ ಖಾಂಡದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಗುಣವಿದೆ. ಇದರ ಎಲೆಗಳ ರಸ ಮಲಬದ್ಧತೆ ಹಾಗೂ ಪಿತ್ತ ಗಂಧಗಳಿಗೆ ಒಳ್ಳೆಯದು ಆದರೆ ನೆನಪಿನಲ್ಲಿ ಇಡಬೇಕಾದ ಒಂದು ಅಂಶ ಎಂದರೆ ಯಾವುದೇ ಸೊಪ್ಪು ಮತ್ತು ತರಕಾರಿಯನ್ನು ತೊಳೆಯುವಾಗ ಉಪ್ಪು ಅಥವಾ ಹುಣಸೆ ಹಣ್ಣನ್ನು ಬಳಸಿ ತೊಳೆಯಬೇಕು. ಇವಿಷ್ಟು ಬಸಳೆ ಸೊಪ್ಪಿನ ಬಗ್ಗೆ ಪುಟ್ಟ ಮಾಹಿತಿ.

Leave A Reply

Your email address will not be published.